Rachin Ravindra: ಉಲ್ಟಾ ಹೊಡೆದ ರಚಿನ್ ರವೀಂದ್ರ ತಂದೆ, ಬೇಸರ ಹೊರಹಾಕಿದ ಸಚಿನ್ ಫ್ಯಾನ್ಸ್ ಮತ್ತು ಕನ್ನಡಿಗರು.
ಮಗನ ಹೆಸರಿನ ಬಗ್ಗೆ ಇನ್ನೊಂದು ಹೇಳಿಕೆ ನೀಡಿದ ರಾಚಿಂ ರವೀಂದ್ರ ತಂದೆ.
Rachin Ravindra Name Fact Check: ನ್ಯೂಜಿಲೆಂಡ್ ಯುವ ಕ್ರಿಕೆಟಿಗ ರಚಿನ್ ರವೀಂದ್ರ (Rachin Ravindra) ಅವರ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇತ್ತೀಚಿಗಷ್ಟೇ ನ್ಯೂಜಿಲೆಂಡ್ ತಂಡದಲ್ಲಿ ಕಾಣಿಸಿಕೊಂಡಿದ್ದು, ತಮ್ಮ ಚೊಚ್ಚಲ ವಿಶ್ವಕಪ್ ಅನ್ನು ಸಹ ಯಶಸ್ವಿ ಆಗಿ ಮುಗಿಸಿದ್ದಾರೆ. ತನ್ನ ಮೊದಲ 2023 ರವಿಶ್ವಕಪ್ ನಲ್ಲೆ ಅದ್ಭುತ ಬ್ಯಾಟಿಂಗ್ ಮಾಡಿ ಅದ್ವಿತೀಯ ಪ್ರದರ್ಶನ ನೀಡಿದ್ದಾರೆ.
ಅಷ್ಟೇ ಅಲ್ಲದೆ ರಚಿನ್ ರವೀಂದ್ರ ಅವರು ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023 ರಲ್ಲಿ ಇದುವರೆಗೆ ಮೂರು ಶತಕಗಳನ್ನು ಸಿಡಿಸಿದ್ದಾರೆ. ಸದ್ಯ ನ್ಯೂಜಿಲೆಂಡ್ ವಿಶ್ವಕಪ್‌ನ ಮೊದಲ ಸೆಮಿಫೈನಲ್‌ನಲ್ಲಿ ಭಾರತದ ವಿರುದ್ಧ ಹೋರಾಡಲು ಸಜ್ಜಾಗಿದೆ. ನಾಕೌಟ್ ಪಂದ್ಯ ಬುಧವಾರ, ನವೆಂಬರ್ 15 ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಈ ಬಾರಿ ಭಾರತ ಗೆಲ್ಲುವ ಎಲ್ಲಾ ಮುನ್ಸೂಚನೆಗಳಿವೆ.

ರಾಹುಲ್ ದ್ರಾವಿಡ್ ಮತ್ತು ಸಚಿನ್ ತೆಂಡೂಲ್ಕರ್ ಅವರ ಅಭಿಮಾನಿ ರಚಿನ್
ನ್ಯೂಜಿಲೆಂಡ್ ಕ್ರಿಕೆಟಿಗ ರಚಿನ್ ರವೀಂದ್ರ ಅವರು ಭಾರತದ ಕ್ರಿಕೆಟಿಗ ರಾಹುಲ್ ದ್ರಾವಿಡ್ ಮತ್ತು ಸಚಿನ್ ತೆಂಡೂಲ್ಕರ್ ಅವರ ಅಭಿಮಾನಿ ಎಂಬ ವಿಚಾರ ಎಲ್ಲ ಕಡೆ ಕೇಳಿ ಬರುತ್ತಿದೆ. ಸಧ್ಯ ಅವರ ಹೆಸರಿನ ಕುರಿತು ಇಂಟ್ರಸ್ಟಿಂಗ್ ವಿಚಾರ ಒಂದು ಹೊರಬಿದ್ದಿದೆ. ರಾಹುಲ್ ದ್ರಾವಿಡ್ ಮತ್ತು ಸಚಿನ್ ತೆಂಡೂಲ್ಕರ್ ಅವರ ಮೊದಲ ಹೆಸರುಗಳಿಂದ ರಚಿನ್ ಎಂಬ ಹೆಸರು ಬಂದಿದೆ ಎಂದು ಹೇಳಲಾಗಿತ್ತು. ಆದರೆ ರಚಿನ್ಅ ವರ ತಂದೆ ನನ್ನ ಮಗನ ಹೆಸರಿಗೂ ಈ ಕ್ರಿಕೆಟಿಗರ ಹಸರಿಗೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ.

ರಚಿನ್ ಎನ್ನುವ ಹೆಸರು ನನ್ನ ಪತ್ನಿ ಆಯ್ಕೆ ಮಾಡಿದ ಹೆಸರಾಗಿದೆ
ರಚಿನ್ ಎನ್ನುವ ಹೆಸರಿನ ಕುರಿತು ಈಗಾಗಲೇ ಹಲವು ಉಹಾಪೋಹಾಗಳು ಹರಿದಾಡುತ್ತಿದ್ದು, ನನ್ನ ಮಗನ ಹೆಸರಿಗೂ ರಾಹುಲ್ ದ್ರಾವಿಡ್ ಮತ್ತು ಸಚಿನ್ ತೆಂಡೂಲ್ಕರ್ ಅವರ ಹೆಸರಿಗೂ ಯಾವುದೇ ರೀತಿಯ ಮಿಶ್ರಣ ಇಲ್ಲ. ರಚಿನ್ ಹುಟ್ಟಿದಾಗ, ನನ್ನ ಹೆಂಡತಿ ಈ ಹೆಸರನ್ನು ಸೂಚಿಸಿದಳು, ಅಲ್ಲದೆ, ಉಚ್ಚರಿಸಲು ಸುಲಭ ಮತ್ತು ಚಿಕ್ಕದಾಗಿದೆ ಹಾಗು ಹೆಸರು ಚೆನ್ನಾಗಿತ್ತು ಅಂತ ಇಡಲಾಯಿತು ಎಂದು ರಚಿನ್ ತಂದೆ ರವಿ ಕೃಷ್ಣಮೂರ್ತಿ ದಿ ಪ್ರಿಂಟ್‌ಗೆ ತಿಳಿಸಿದ್ದಾರೆ. ಉದ್ದೇಶಪೂರ್ವಕವಾಗಿ ಭಾರತೀಯ ಕ್ರಿಕೆಟ್ ತಾರೆಗಳ ಹೆಸರನ್ನು ಇಡಲಾಗಿಲ್ಲ ಎಂದು ಕ್ಲಾರಿಟಿ ನೀಡಿದ್ದಾರೆ.