Raghavendra Rajkumar: ರಾಘಣ್ಣನಿಗೆ ಮನೆ ಕಟ್ಟಿಸಿಕೊಟ್ಟಿದ್ದು ಯಾರು…? ಮಾಡಿದ ಸಹಾಯವನ್ನ ನೆನೆದು ಕಂಬನಿ ಮಿಡಿದ ರಾಘಣ್ಣ.
ಪುನೀತ್ ರಾಜಕುಮಾರ್ ಅವರ ಸಹಾಯ ನೆನೆದು ಭಾವುಕರಾದ ರಾಘವೇಂದ್ರ ರಾಜಕುಮಾರ್.
Raghavendra Rajkumar About Puneeth Rajkumar: ಡಾ || ರಾಜಕುಮಾರ್ ರವರ ಮಕ್ಕಳಾದ ರಾಘವೇಂದ್ರ ರಾಜ್‌ಕುಮಾರ್, ಶಿವರಾಜಕುಮಾರ್(Shiva Rajkumar) ಹಾಗೂ ಪುನೀತ್ ರಾಜ್‌ಕುಮಾರ್ ನಡುವಿನ ಬಾಂಧವ್ಯವೇ ಬೇರೆ. ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಪ್ರೀತಿ. ಅದರಲ್ಲೂ ಒಬ್ಬರನ್ನು ಬಿಟ್ಟರೆ ಮತ್ತೊಬ್ಬರು ಇರುತ್ತಿರಲಿಲ್ಲ.
ದೊಡ್ಡಮ್ಮನೆ ಯವರು ಎಂದು ಹೆಸರು ಪಡೆದಿರುವ ಇವರು ಹೆಸರಿಗೆ ತಕ್ಕಂತೆ ಬದುಕುತ್ತಿದ್ದಾರೆ. ದಾನ ಧರ್ಮದಲ್ಲಿ ಇವರನ್ನು ಮೀರಿಸುವವರು ಮತ್ತೊಬ್ಬರಿಲ್ಲ. Puneeth Rajkumar ಅಗಲಿಕೆ ಅವರ ಕುಟುಂಬ ಹಾಗು ಅವರ ಅಭಿಮಾನಿಗಳಿಗೆ ಇನ್ನು ಅದರಿಂದ ಹೊರ ಬರಲು ಸಾಧ್ಯವಾಗುತ್ತಿಲ್ಲ.
ಮತ್ತೆ ಚಿತ್ರರಂಗಕ್ಕೆ ಕಾಲಿಟ್ಟ ರಾಘವೇಂದ್ರ ರಾಜ್‌ಕುಮಾರ್
ಒಂದು ಕಾಲದಲ್ಲಿ ಸೂಪರ್ ಹಿಟ್ ಸಿನಿಮಾ ನೀಡುತ್ತಿದ್ದ ರಾಘವೇಂದ್ರ ರಾಜಕುಮಾರ್ ಅನಾರೋಗ್ಯದ ಕಾರಣದಿಂದ ಚಿತ್ರ ರಂಗದಿಂದ ಹೊರ ಉಳಿಯಬೇಕಾಯಿತು. ಆದ್ರೆ ಮತ್ತೆ ಈಗ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯಕ್ಕೆ ’13’ ಅನ್ನೋ ಸಿನಿಮಾವೊಂದು ಬಿಡುಗಡೆಗೆ ಸಿದ್ಧವಾಗಿದೆ. ಹೀಗಾಗಿ ಸಾಕಷ್ಟು ಸಂದರ್ಶನಗಳಲ್ಲಿ Raghavendra Rajkumar ಭಾಗಿಯಾಗುತ್ತಿದ್ದಾರೆ. ಈ ವೇಳೆ ರಾಘಣ್ಣ ಅಪ್ಪು ಕಟ್ಟಿಸಿಕೊಟ್ಟ ಮನೆ ಬಗ್ಗೆ ಓಪನ್ ಆಗಿ ಮಾತಾಡಿದ್ದಾರೆ.
“ನನ್ನಿಂದ ಮನೆಗೆ ಆದಾಯವಿರಲಿಲ್ಲ” ನನ್ನ ಮನೆ ಕಟ್ಟಿಸಿಕೊಟ್ಟಿದ್ದೆ ಅಪ್ಪು
“ನಾನು ಆ ಕಾಲದಲ್ಲೇ ಸಿನಿಮಾದಲ್ಲಿ ನಟಿಸುವುದನ್ನು ಬಿಟ್ಟಿದ್ದೆ. ನನ್ನಿಂದ ಮನೆಗೆ ಅಂತಹ ಆದಾಯವೇನೂ ಆಗುತ್ತಿರಲಿಲ್ಲ. ಅವನೊಬ್ಬನೇ ಆಕ್ಟ್ ಮಾಡುತ್ತಿದ್ದ. ಅವನಿಂದ ನಮ್ಮ ಮನೆ, ವಜ್ರೇಶ್ವರಿ ಕಂಬೈನ್ಸ್ ನಡೆಯುತ್ತಿತ್ತು. ಅವನು ಯಾವುದೇ ಸಿನಿಮಾ ಮಾಡಿದರೂ, ಎಲ್ಲಿಗೇ ಹೋದರೂ ನನ್ನನ್ನು ಕರೆದುಕೊಂಡು ಹೋಗುತ್ತಿದ್ದ. ನನಗೆ ಅಣ್ಣನ ಸ್ಥಾನ ಕೊಟ್ಟಿದ್ದ. ಇನ್ನು ಇಬ್ಬರು ಪ್ರತ್ಯೇಕವಾಗಿ ಮನೆ ಕಟ್ಟಿಸಿಕೊಳ್ಳುವುದು ಅಂತ ನಿರ್ಧಾರ ಆಗಿದ್ದಾಗ ಸ್ವತ: ಅಪ್ಪುನೇ ರಾಘಣ್ಣನಿಗೆ ಮನೆಯನ್ನು ಕಟ್ಟಿಸಿಕೊಟ್ಟಿದ್ದರು.”ಈ ಮನೆಯನ್ನು ಅಪ್ಪುನೇ ಕಟ್ಟಿಸಿ, ನಮ್ಮ ಕೈಗೆ ಕೊಟ್ಟು ಹೋದ. ಇದು ಸತ್ಯವಾದ ಮಾತು. ಅವನ ಮನೆಗಿಂತ ಹೆಚ್ಚು ಮಾಡಿಕೊಟ್ಟು ಹೋದ. ಇಲ್ಲಾ ಅಂದಿದ್ದರೆ ನನಗೆ ಖಂಡಿತಾ ಈ ಮನೆ ಮಾಡುವುದಕ್ಕೆ ಆಗುತ್ತಿರಲಿಲ್ಲ.” ಎಂದು ರಾಘಣ್ಣ ಹೇಳಿದ್ದಾರೆ.
ಅಪ್ಪುವನ್ನು ಮಗನೆಂದು ಕೆರೆಯುತ್ತಿದ್ದ ರಾಘವೇಂದ್ರ ರಾಜಕುಮಾರ್
ಅಣ್ಣಾವ್ರ ಕುಟುಂಬದಲ್ಲಿ Puneeth Rajkumar ಕಂಡರೆ ಎಲ್ಲಿಲ್ಲದ ಪ್ರೀತಿ. ಅದಕ್ಕೆ ಎಲ್ಲರೂ ಪ್ರೀತಿಯಿಂದ ಅಪ್ಪು ಎಂದೇ ಕರೆಯುತ್ತಿದ್ದರು. ಇನ್ನು ರಾಘಣ್ಣ ಮಗನೇ ಅಂತಲೇ ಕರೆಯುತ್ತಾರೆ. “ನನ್ನ ಮಕ್ಕಳನ್ನು ಎಷ್ಟು ಮಿಸ್ ಮಾಡಿಕೊಳ್ಳುತ್ತೇನೋ, ಅಷ್ಟೇ ಅವನನ್ನೂ ಮಿಸ್ ಮಾಡಿಕೊಳ್ಳುತ್ತೇನೆ. ಎಲ್ಲರೂ ಅವನನ್ನು ತಮ್ಮ ಅಂತ ಕರೀತಾರೆ. ನಾನು ಮಾತ್ರ ಅವನನ್ನು ಮಗನೇ ಅಂತಾನೇ ಕರೆಯೋದು. ನನಗೂ ಅವನಿಗೂ 10 ವರ್ಷ ಅಂತರವಿದೆ. ಚಿಕ್ಕ ಮಗುವಾದಗಿನಿಂದ ಅವನನ್ನು ಶೂಟಿಂಗ್ ಕರೆದುಕೊಂಡು ಹೋಗುವುದು. ಸ್ನಾನ ಮಾಡಿಸುವುದು ಎಲ್ಲದಕ್ಕೂ ಅವಕಾಶ ಸಿಕ್ಕಿತು. ಕೊನೆಯ ಸಿನಿಮಾಗೂ ಸೇವೆ ಮಾಡಿದೆ. ಒಂಥರಾ ಅಪ್ಪ ಮಗನ ನಂಟೇ ಅಲ್ಲವೇ..” ಎಂದು ರಾಘಣ್ಣ ತಮ್ಮನ್ನನು ನೆನೆದಿದ್ದಾರೆ. ತಮ್ಮನಾಗಿ ಬಂದ ಅಪ್ಪನಾಗಿ ಹೋದ ಎಂದು ಕಣ್ಣೀರಿಟ್ಟರು.