Ragi Malt: ಸರ್ಕಾರೀ ಶಾಲೆಯಲ್ಲಿ ಓದುವ ಎಲ್ಲಾ ಮಕ್ಕಳಿಗೆ ಇನ್ನುಮುಂದೆ ರಾಗಲಿದೆ ರಾಗಿ ಮಾಲ್ಟ್, ಹೊಸ ಯೋಜನೆ ಜಾರಿಗೆ.
ಶಾಲಾ ವಿದ್ಯಾರ್ಥಿಗಳಿಗಾಗಿ ಬಿಸಿಯೂಟದಲ್ಲಿ ಹೊಸ ಬದಲಾವಣೆ.
Ragi Malt For School Children: ಈಗಾಗಲೇ ರಾಜ್ಯದ ಎಲ್ಲಾ ಶಾಲೆಯಲ್ಲೂ ಬಿಸಿಯೂಟದ ಸೌಲಭ್ಯ ಇದೆ. ಈ ವ್ಯವಸ್ಥೆ ಜಾರಿಗೆ ಬಂದು ಹಲವು ವರ್ಷಗಳು ಕಳೆದರು ಇನ್ನು ಯಶಸ್ವಿಯಾಗಿ ನಡೆದುಕೊಂಡು ಹೋಗುತ್ತಿದೆ. ಅಷ್ಟೇ ಅಲ್ಲದೆ ಈಗ ಮಕ್ಕಳಲ್ಲಿ ಪೌಷ್ಟಿಕ ಅಂಶ ಹೆಚ್ಚಿಸುವ ಉದ್ದೇಶದಿಂದ ಮೊಟ್ಟೆ, ಚಿಕ್ಕಿ, ಬಾಳೆ ಹಣ್ಣುಗಳ ಆಯ್ಕೆಯನ್ನು ನೀಡಲಾಗಿದೆ.
ಮಕ್ಕಳಿಗೆ ಎಲ್ಲಾ ಸಮಯದಲ್ಲೂ ಊಟ ಹಾಗು ಇನ್ನಿತರ ಸೌಲಭ್ಯದ ಜೊತೆಗೆ ಇನ್ನಷ್ಟು ಬದಲಾವಣೆ ಮಾಡಲಾಗಿದೆ ಎಂದು ಸರಕಾರ ವರದಿ ಮಾಡಿದೆ. ಈ ಹೊಸ ಯೋಜನೆಯ ಉದ್ದೇಶವೇ ಮಕ್ಕಳಲ್ಲಿ ಅಪೌಷ್ಟಿಕತೆಯನ್ನು ತೊಲಗಿಸುವುದಾಗಿದೆ.

ಶಾಲಾ ಮಕ್ಕಳಿಗೆ ರಾಗಿ ಮಾಲ್ಟ್ ವಿತರಣೆ
ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಜೊತೆ, ಮೊಟ್ಟೆ,ಚಿಕ್ಕಿ, ಬಾಳೆಹಣ್ಣನ್ನು ನೀಡುತ್ತಿದ್ದು, ಅದರ ಜೊತೆ ಇನ್ನು ಮುಂದೆ ರಾಗಿ ಮಾಲ್ಟ್ ನೀಡಲಾಗುವುದೆಂದು ಶಿಕ್ಷಣ ಸಚಿವ ಮಧು ಎಸ್ ಬಂಗಾರಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ರಾಜ್ಯದ ಶಾಲಾ ವಿದ್ಯಾರ್ಥಿಗಳಿಗೆ ಅಪೌಷ್ಠಿಕತೆಯನ್ನು ನಿವಾರಿಸೋ ನಿಟ್ಟಿನಲ್ಲಿ ಶೀಘ್ರವೇ ಪೌಷ್ಠಿಕಾಂಶ ಯುಕ್ತ ಆಹಾರ ನೀಡೋದಾಗಿ ಸರ್ಕಾರ ಹೇಳಿತ್ತು. ಅದರ ಭಾಗವಾಗಿ ಡಿಸೆಂಬರ್ ನಿಂದ ಒಂದು ಲೋಟ ರಾಗಿ ಮಾಲ್ಟ್ ವಿತರಿಸೋದಕ್ಕೆ ನಿರ್ಧರಿಸಿದೆ ಎಂದರು .
ಬೇಸಿಗೆ ಕಾಲದಲ್ಲಿ ರಾಗಿ ಮಾಲ್ಟ್ ಆರೋಗ್ಯ ದ್ರಷ್ಟಿಯಿಂದ ಉತ್ತಮ ಆಗಿದೆ
ಮಧ್ಯಾಹ್ನದ ಬಿಸಿಯೂಟ ಯೋಜನೆ ಅನೇಕ ವರ್ಷಗಳಿಂದ ಉತ್ತಮವಾಗಿ ನಡೆಯುತ್ತಾ ಬಂದಿದೆ. ಊಟದ ಜೊತೆಗೆ ಮಕ್ಕಳಲ್ಲಿ ಅಪೌಷ್ಠಿಕತೆ ತಡೆಯುವ ದೃಷ್ಟಿಯಿಂದ ವಾರದಲ್ಲಿ ಎರಡು ದಿನ ಮೊಟ್ಟೆ, ಮೊಟ್ಟೆ ಸೇವಿಸದವರಿಗೆ ಚಿಕ್ಕಿ, ಬಾಳೆಹಣ್ಣು ನೀಡಲಾಗುತ್ತಿದೆ. ಡಿಸೆಂಬರ್ ನಲ್ಲಿ ಇದರ ಜೊತೆಗೆ Ragi Malt ನೀಡಲು ತೀರ್ಮಾನಿಸಲಾಗಿದೆ ಹಾಗು ಮಳೆಗಾಲ ಮುಕ್ತಾಯವಾಗಿ ಬಿಸಿಲ ತಾಪ ದಿನೇ ದಿನೇ ಹೆಚ್ಚಾಗುತ್ತಿದೆ.

ಇಂತಹ ಸಮಯದಲ್ಲಿ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಹಾಗೂ ಪೌಷ್ಟಿಕ ಆಹಾರ ನೀಡುವ ದೃಷ್ಟಿಯಿಂದ ರಾಗಿ ಮಾಲ್ಟ್ ನೀಡಲು ತೀರ್ಮಾನ ಕೈಗೊಳ್ಳಲಾಗಿದೆ. ಎನ್ ಜಿಓ ಒಂದರ ಮೂಲಕ ಎರಡು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಮಕ್ಕಳಿಗೆ ರಾಗಿ ಗಂಜಿ ನೀಡಲಾಗಿತ್ತು. ಇದು ಯಶಸ್ವಿಯಾಗಿದ್ದು, ಈ ಶೈಕ್ಷಣಿಕ ವರ್ಷಾಂತ್ಯದಿಂದ ರಾಗಿ ಮಾಲ್ಟ್ ಎಲ್ಲಾ ಶಾಲಾ ವಿದ್ಯಾರ್ಥಿಗಳಿಗೆ ನೀಡಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಶಿಕ್ಷಣ ಸಚಿವ ಮಧು ಎಸ್ ಬಂಗಾರಪ್ಪ ಹೇಳಿದ್ದಾರೆ.