Rahul Gandhi: ರಾಹುಲ್ ಗಾಂಧಿ ಯಾಕೆ ಇನ್ನೂ ಮದುವೆಯಾಗಿಲ್ಲ, ಸ್ಪಷ್ಟನೆ ನೀಡಿದ ರಾಹುಲ್ ಗಾಂಧಿ.

ಯಾಕಿನ್ನೂ ಮದುವೆಯಾಗಿಲ್ಲ ಅನ್ನುವ ಪ್ರಶ್ನೆಗೆ ಉತ್ತರ ನೀಡಿದ ರಾಹುಲ್ ಗಾಂಧಿ.

Rahul Gandhi About Marriaage: ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ (Rahul Gandhi) ಬಗ್ಗೆ ಯಾವಾಗಲು ಚರ್ಚೆ ಆಗುತ್ತಾ ಇರುತ್ತದೆ. ಕೆಲವು ಬಾರಿ ಯಡವಟ್ಟು ಮಾಡಿಕೊಳ್ಳುವ ಇವರು ಟೀಕೆಗಳಿಗೆ ಒಳಗಾಗುತ್ತಿರುತ್ತಾರೆ. ಆಗಾಗ ಸುದ್ದಿಯಾಗುವ ಇವರು ಎಲ್ಲವನ್ನು ನಗು ನಗುತ್ತಲೇ ಸ್ವೀಕರಿಸುತ್ತಾರೆ ಎನ್ನಬಹುದು.ರಾಹುಲ್ ಗಾಂಧಿ ಯವರಿಗೆ ಯಾವಾಗಲು ಎದುರಾಗುವ ಎರಡು ಪ್ರಶ್ನೆಗಳಿವೆ.

ಎಲ್ಲಿ ಹೋದರು ಕೂಡ ಅವರು ಸಾಮಾನ್ಯವಾಗಿ ಎರಡು ಪ್ರಮುಖ ಪ್ರಶ್ನೆಗಳನ್ನು ಎದುರಿಸಬೇಕಾಗುತ್ತದೆ. ಆ ಪೈಕಿ ಮೊದಲ ಪ್ರಶ್ನೆ ರಾಹುಲ್ ಗಾಂಧಿ ಯಾವಾಗ ಪ್ರಧಾನಮಂತ್ರಿ ಆಗುತ್ತಾರೆ ಹಾಗೂ ಇನ್ನೊಂದು ರಾಹುಲ್ ಗಾಂಧಿ ಮದುವೆ ಯಾವಾಗ? ಈ ಎರಡನೇ ಪ್ರಶ್ನೆಗೆ ರಾಹುಲ್ ಗಾಂಧಿಯೇ ಉತ್ತರ ನೀಡಿದ್ದಾರೆ.

Rahul Gandhi Latest News
Image Credit: TV9kannada

ವಿದ್ಯಾರ್ಥಿಯ ಪ್ರಶ್ನೆಗೆ ರಾಹುಲ್ ಗಾಂಧಿ ಉತ್ತರ

ರಾಜಸ್ಥಾನದ ಜೈಪುರದ ಮಹಾರಾಣಿ ಕಾಲೇಜಿನಲ್ಲಿ ಅಲ್ಲಿನ ವಿದ್ಯಾರ್ಥಿವೃಂದದೊಂದಿಗೆ ನಡೆದ ಸಂವಾದದಲ್ಲಿ ರಾಹುಲ್​ ಗಾಂಧಿಗೆ ಒಂದು ಪ್ರಶ್ನೆ ಎದುರಾಗಿದೆ. ಅದೇನೆಂದರೆ ನೀವು ಸುಂದರವಾಗಿದ್ದೀರಿ, ತುಂಬಾ ಚೆನ್ನಾಗಿ ಕಾಣಿಸುತ್ತೀರಿ,

ಆದರೂ ಇನ್ನೂ ಯಾಕೆ ಮದುವೆ ಆಗಿಲ್ಲ ಎಂದು ಯುವತಿಯೊಬ್ಬಳು 53 ವರ್ಷದ ರಾಹುಲ್ ಗಾಂಧಿಯನ್ನು ಕೇಳಿದ್ದಳು. ನಾನು ನನ್ನ ಕೆಲಸ ಹಾಗೂ ಕಾಂಗ್ರೆಸ್ ಪಕ್ಷದ ಚಟುವಟಿಕೆಗಳಲ್ಲಿ ಸಂಪೂರ್ಣವಾಗಿ ಸಿಲುಕಿಕೊಂಡಿರುವುದರಿಂದ ಮದುವೆ ಆಗಿಲ್ಲ ಎಂದು ರಾಹುಲ್ ಉತ್ತರ ನೀಡಿದ್ದಾರೆ.

Rahul Gandhi Visit Rajasthan Maharani College
Image Credit: Original Source

ಕಾಂಗ್ರೆಸ್ ನಾಯಕರಿಗೆ ಹಲವಾರು ವ್ಯಯಕ್ತಿಕ ಪ್ರಶ್ನೆ ಕೇಳಿದ ವಿದ್ಯಾರ್ಥಿಗಳು

ವಿದ್ಯಾರ್ಥಿಗಳು ರಾಜಕೀಯ, ವ್ಯಯಕ್ತಿಕ ಎಂದು ಯಾವುದು ಲೆಕ್ಕಿಸದೆ ಹಲವು ಪ್ರಶ್ನೆ ಗಳನ್ನು ರಾಹುಲ್ ಗಾಂಧಿಯವರಿಗೆ ಕೇಳಿದ್ದಾರೆ. ಅವುಗಳಲ್ಲಿ ವಿದ್ಯಾರ್ಥಿಯೊಬ್ಬ ತ್ವಚೆಗೆ ಏನು ಹಚ್ಚುತ್ತೀರಿ ಎಂದು ರಾಹುಲ್ ಗಾಂಧಿ ಯವರನ್ನು ಪ್ರಶ್ನೆ ಮಾಡಿದ್ದಾನೆ. ಅದಕ್ಕೂ ಉತ್ತರ ನೀಡಿದ ರಾಹುಲ್ ಗಾಂಧಿಯವರು ನಾನು ಮುಖಕ್ಕೆ ಯಾವುದೇ ಕ್ರೀಮ್ ಅಥವಾ ಸೋಪ್ ಬಳಸುವುದಿಲ್ಲ.

ಮುಖವನ್ನು ಬರೀ ನೀರಿನಿಂದ ತೊಳೆಯುತ್ತೇನೆ ಎಂದಿದ್ದಾರೆ. ಇನ್ನು ಈ ಸಂವಾದದಲ್ಲಿ ರಾಹುಲ್ ಗಾಂಧಿ ಕುರಿತ ಇನ್ನಷ್ಟು ವಿಚಾರಗಳ ಬಗ್ಗೆ ಕೇಳಲಾಗಿದ್ದು, ಅವರ ಇಷ್ಟದ ತಿಂಡಿ-ತಿನಿಸು, ಊಟ, ಆಸಕ್ತಿ ಇತ್ಯಾದಿಯ ಮಾಹಿತಿ ಬಹಿರಂಗಗೊಂಡಿದೆ. ಒಟ್ಟಾರೆಯಾಗಿ ವಿದ್ಯಾರ್ಥಿಗಳು ಕೇಳಿದ ಎಲ್ಲ ಪ್ರಶ್ನೆಗಳಿಗೂ ಆದಷ್ಟು ಉತ್ತರ ನೀಡಲು ರಾಹುಲ್ ಗಾಂಧಿ ಪ್ರಯತ್ನಿಸಿದ್ದಾರೆ.

Leave A Reply

Your email address will not be published.