Railway Jobs 2023: PUC ಪಾಸ್ ಆದವರಿಗೆ ಭಾರತೀಯ ರೈಲ್ವೆ ಅಲ್ಲಿ ಭರ್ಜರಿ ಉದ್ಯೋಗ, ಇಂದೇ ಅರ್ಜಿ ಹಾಕಿ.
PUC ಪಾಸ್ ಆದವರಿಗೆ ಇಲ್ಲಿದೆ ಸುವರ್ಣ ಅವಕಾಶ, ಇಂದೇ ಭಾರತೀಯ ರೈಲ್ವೆಗೆ ಅರ್ಜಿ ಹಾಕಿ ಉದ್ಯೋಗ ಪಡೆಯಿರಿ.
Railway Jobs 2023 Recruitment: PUC ಪಾಸಾದವರಿಗೆ ಇಲ್ಲಿದೆ ಒಂದು ಉತ್ತಮ ಅವಕಾಶ. ಭಾರತೀಯ ರೈಲ್ವೆ (Indian Railway) ಅಲ್ಲಿ ಉದ್ಯೋಗ ಮಾಡಬೇಕು ಅಂದುಕೊಂಡವರು ಈ ಕೆಲಸಕ್ಕೆ ಅರ್ಜಿ ಹಾಕಬಹುದಾಗಿದೆ. ಈ ಉದ್ಯೋಗದ ಅರ್ಜಿಯನ್ನು ಆನ್ಲೈನ್ ನಲ್ಲಿ ಹಾಕಬಹುದಾಗಿದೆ. ಯುವಕರು ಈ ಸುವರ್ಣ ಅವಕಾಶವನ್ನು ಸದುಪಯೋಗ ಪಡಿಸಿಕೊಂಡರೆ ಉತ್ತಮ ಉದ್ಯೋಗದೊಂದಿಗೆ ಉನ್ನತ ಭವಿಷ್ಯ ಹೊಂದಬಹುದಾಗಿದೆ.
ಯುವಕರು ಪಟಿಯಾಲ ಲೋಕೋಮೋಟಿವ್ ವರ್ಕ್ಸ್ (ಪಿಎಲ್ಡಬ್ಲ್ಯೂ) ಯಲ್ಲಿ ಕೆಲಸ ಹೊಂದಬಹುದಾಗಿದೆ ಹಾಗಾಗಿ ಆಸಕ್ತ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಗೆ ಅನುಗುಣವಾಗಿ ಅಪ್ರೆಂಟಿಸ್ ಹುದ್ದೆಗಳಿಗೆ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು.
ನಿಗದಿತ ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸುವುದು ಕಡ್ಡಾಯ
ಆಸಕ್ತ ಯುವಕರು ಪಿಎಲ್ಡಬ್ಲ್ಯೂನ ಅಧಿಕೃತ ವೆಬ್ಸೈಟ್ plwIndianrailways.gov.in ಭೇಟಿ ನೀಡಬೇಕಾಗುತ್ತದೆ . ಪಿಎಲ್ಡಬ್ಲ್ಯೂ ರೈಲ್ವೆಯಲ್ಲಿ ವಿವಿಧ ಅಪ್ರೆಂಟಿಸ್ಗಳ 295 ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಅರ್ಜಿ ಪ್ರಕ್ರಿಯೆಯು ಅಕ್ಟೋಬರ್ 9 ರಿಂದ ಪ್ರಾರಂಭವಾಗಿದ್ದು, ಕೊನೆಯ ದಿನಾಂಕ ಅಕ್ಟೋಬರ್ 31 ಆಗಿದೆ. ಅಂತಹ ಪರಿಸ್ಥಿತಿಯಲ್ಲಿ, ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕದ ಮೊದಲು ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.
ಹುದ್ದೆಗಳ ಹೆಸರು ಮತ್ತು ಸಂಖ್ಯೆ
ಭಾರತೀಯ ರೈಲ್ವೆಯಲ್ಲಿ ಈ ಹುದ್ದೆಗಳು ಖಾಲಿ ಇದ್ದು, ತಮ್ಮ ವಿದ್ಯಾರ್ಹತೆಗೆ ಅನುಗುಣವಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ.
ಎಲೆಕ್ಟ್ರಿಷಿಯನ್: 140 ಹುದ್ದೆಗಳು
ಮೆಕ್ಯಾನಿಕ್ (ಡೀಸೆಲ್): 40 ಹುದ್ದೆಗಳು
ಮೆಷಿನಿಸ್ಟ್: 15 ಹುದ್ದೆಗಳು
ಫಿಟ್ಟರ್: 75 ಹುದ್ದೆಗಳು
ವೆಲ್ಡರ್: 25 ಹುದ್ದೆಗಳು
ಈ ಹುದ್ದೆಗಳಿಗೆ ಅರ್ಜಿ ಹಾಕಲು ಬೇಕಾಗಿರುವ ಅರ್ಹತೆಗಳು
ರೈಲ್ವೆಯಾ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು SSLC ಹಾಗು PUC ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಹಾಗು 10 ನೇ ತರಗತಿಯಲ್ಲಿ 50% ಅಂಕಗಳನ್ನು ಹೊಂದಿರುವುದು ಅವಶ್ಯಕ. ಮೆಕ್ಯಾನಿಕ್, ಎಲೆಕ್ಟ್ರಿಷಿಯನ್, ಮೆಷಿನಿಸ್ಟ್ ಮತ್ತು ಫಿಟ್ಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸಿನ ಮಿತಿ 15 ರಿಂದ 25 ವರ್ಷಗಳ ನಡುವೆ ಇರಬೇಕು. ಇದಲ್ಲದೆ, ವೆಲ್ಡರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 15 ರಿಂದ 22 ವರ್ಷಗಳ ನಡುವೆ ಇರಬೇಕು.
ಸಂಸ್ಕರಣಾ ಶುಲ್ಕ ಪಾವತಿ ಕಡ್ಡಾಯ
ಈ ಹುದ್ದೆಗಳಿಗೆ ಅರ್ಜಿ ಹಾಕುವವರು ಶುಲ್ಕವನ್ನು ಪಾವತಿಸಬೇಕಾಗಿರುತ್ತದೆ. ಸಂಸ್ಕರಣಾ ಶುಲ್ಕ ಪಾವತಿಯನ್ನು ಆನ್ ಲೈನ್ ಮೋಡ್ ಮೂಲಕ ಸ್ವೀಕರಿಸಲಾಗುವುದು. ಅರ್ಜಿ ಸಲ್ಲಿಸುವ ಎಲ್ಲಾ ಅಭ್ಯರ್ಥಿಗಳು ಸಂಸ್ಕರಣಾ ಶುಲ್ಕವಾಗಿ 100 ರೂ.ಗಳನ್ನು ಪಾವತಿಸಬೇಕಾಗುತ್ತದೆ.ಈ ನಿಟ್ಟಿನಲ್ಲಿ ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಪಿಎಲ್ಡಬ್ಲ್ಯೂನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ಲಾಗ್ ಇನ್ ಆಗಿ ಇನ್ನಿತರ ವಿಷಯಗಳ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ.