Thalaivar 171: ತಲೈವಾ 171 ಚಿತ್ರಕ್ಕೆ ರಜಿನಿಕಾಂತ್ ಪ್ರತಿ ದಿನಕ್ಕೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ…? ಅಬ್ಬಬ್ಬಾ ಇಷ್ಟೊಂದ.
ತಲೈವಾ 171 ಸಿನಿಮಾಕ್ಕೆ ರಜನಿಕಾಂತ್ ಪಡೆಯುವ ಸಂಭಾವನೆ ಕೇಳಿದರೆ ಶಾಕ್ ಆಗುವುದಂತೂ ಗ್ಯಾರೆಂಟಿ
Rajinikanth Remuneration For Thalaivar Movie: ಜೈಲರ್ (Jailer) ಸಿನಿಮಾದ ಮೂಲಕ ಕಮ್ ಬ್ಯಾಕ್ ಮಾಡಿದ ನಟ ರಜನಿಕಾಂತ್ (Rajinikanth) ಮತ್ತೆ ಬಹುಬೇಡಿಕೆಯ ನಟರ ಪಟ್ಟಿಯಲ್ಲಿ ಸೇರಿಕೊಂಡಿದ್ದಾರೆ. ರೋಬೊ ಸಿನಿಮಾದ ನಂತರ ರಜನಿಕಾಂತ್ ಅವರ ಯಾವ ಸಿನಿಮಾವು ಅಷ್ಟೊಂದು ಹಿಟ್ ಕಂಡಿಲ್ಲ.
ಈಗ ಜೈಲರ್ ಸಿನಿಮಾ ರಜನಿಕಾಂತ್ ಅವರಿಗೆ ಗ್ರೀನ್ ಸಿಗ್ನಲ್ ಆಗಿ ಸಿಕ್ಕಿದೆ ಎನ್ನಬಹದು. ‘ಜೈಲರ್’ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿ ದಾಖಲೆ ಬರೆದಿತ್ತು. 500 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಧೂಳೆಬ್ಬಿಸಿತ್ತು. ಸದ್ಯ ರಜನಿಕಾಂತ್ ತಲೈವರ್ 171 (Thalaivar 171) ಸಿನಿಮಾ ಕೆಲಸದಲ್ಲಿ ಬ್ಯುಸಿಯಾಗಿದ್ಧಾರೆ.

ಜೈಲರ್ ಸಿನಿಮಾ ಸಕ್ಸಸ್
ಜೈಲರ್ ಸಿನಿಮಾ ಗೆಲುವಿನತ್ತ ಸಾಗುತ್ತಿದಂತೆ ಇಡೀ ಚಿತ್ರರಂಗ ಸಂಭ್ರಮಿಸಿತ್ತು. ಜೈಲರ್ ಸಿನಿಮಾ ಬ್ಲಾಕ್ ಆಫೀಸ್ ಕೊಳ್ಳೆಹೊಡೆದಿದ್ದು, ನಿರೀಕ್ಷೆಗೂ ಮೀರಿ ಆದಾಯ ಗಳಿಸಿತು. ಸಿನಿಮಾ ಸಕ್ಸಸ್ ಬೆನ್ನಲ್ಲೇ ನಿರ್ಮಪಕರ ಕಲಾವಿದರಿಗೆ ತಂತ್ರಜ್ಞರಿಗೆ ಸಂಭಾವನೆ ಮಾತ್ರವಲ್ಲದೇ ಉಡುಗೊರೆಗಳ ಹೊಳೆ ಹರಿಸಿದ್ದರು.
ಇನ್ನು ರಜನಿಕಾಂತ್, ನೆಲ್ಸನ್ ಹಾಗೂ ಅನಿರುದ್ದ್‌ಗೆ ಚೆಕ್ ಜೊತೆಗೆ ಐಷಾರಾಮಿ ಕಾರುಗಳು ಗಿಫ್ಟ್ ಕೊಟ್ಟಿದ್ದರು. ಇದೇ ವೇಳೆ ರಜನಿಕಾಂತ್ ಜೊತೆ ಮತ್ತೊಂದು ಸಿನಿಮಾ ಮಾತುಕತೆ ನಡೆಸಿ ಅಡ್ವಾನ್ಸ್ ಕೂಡ ಕೊಟ್ಟಿದ್ದರು ಎನ್ನಲಾಗ್ತಿದೆ. ಮುಂದಿನ ವರ್ಷ ಮಧ್ಯ ಭಾಗದಲ್ಲಿ ತಲೈವಾ 171 ಸಿನಿಮಾ ಶುರುವಾಗಲಿದೆ ಎನ್ನಲಾಗಿದೆ .
ತಲೈವರ್ 171 ಸಿನಿಮಾಕ್ಕೆ ರಜನಿಕಾಂತ್ ಪಡೆಯುವ ಸಂಭಾವನೆ
ಸದ್ಯ ತಲೈವರ್ 171 ಚಿತ್ರಕ್ಕೆ ಸೂಪರ್ ಸ್ಟಾರ್ ಸಂಭಾವನೆ ಕೇಳಿದವರು ಶಾಕ್ ಆಗಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ಸನ್ ಪಿಕ್ಚರ್ಸ್ ಸಂಸ್ಥೆ ತಲೈವರ್ 171 ಸಿನಿಮಾ ನಿರ್ಮಾಣ ಮಾಡಲಿದೆ.’ಜೈಲರ್’ ಸಕ್ಸಸ್ ನೋಡಿ ರಜನಿಕಾಂತ್ ಕೇಳಿದ್ದಷ್ಟು ಸಂಭಾವನೆ ಕೊಡಲು ನಿರ್ಮಾಪಕರು ಮುಂದಾಗಿದ್ದಾರೆ ಎನ್ನಲಾಗ್ತಿದೆ.

ಇನ್ನು ಚಿತ್ರದ ಕಥೆಗೆ ತಕ್ಕಂತೆ ರಜನಿಕಾಂತ್ ಹಾಗೂ ಲೋಕೇಶ್ ಕನಕರಾಜ್‌ಗೆ ಸಂಭಾವನೆ ಕೊಡುತ್ತಿದ್ದಾರೆ ಎನ್ನಲಾಗುತ್ತಿದೆ. ಪ್ರಭಾಸ್, ಸಲ್ಮಾನ್ ಖಾನ್, ಶಾರುಕ್ ಖಾನ್, ದಳಪತಿ ವಿಜಯ್ ಎಲ್ಲರನ್ನು ಹಿಂದಿಕ್ಕಿ ರಜನಿಕಾಂತ್ ದಾಖಲೆ ಬರೆದಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.
ತಲೈವರ್ 171 ಚಿತ್ರಕ್ಕಾಗಿ ರಜನಿಕಾಂತ್ ಬರೋಬ್ಬರಿ 280 ಕೋಟಿ ರೂ. ಸಂಭಾವನೆ ಜೇಬಿಗಿಳಿಸುತ್ತಿದ್ದಾರೆ ಎನ್ನುವ ಚರ್ಚೆ ಕಾಲಿವುಡ್‌ನಲ್ಲಿ ನಡೀತಿದೆ. ಈ ಹಿಂದೆ ಜಾಕಿಚಾನ್ ಏಷ್ಯಾದಲ್ಲೇ ಅತಿಹೆಚ್ಚು ಸಂಭಾವನೆ ಪಡೆದ ನಟ ಎನಿಸಿಕೊಂಡಿದ್ದರು. ಆದರೆ ರಜನಿಕಾಂತ್ ಆ ದಾಖಲೆ ಮುರಿದಿದ್ದಾರೆ ಎನ್ನುವ ಚರ್ಚೆ ಶುರುವಾಗಿದೆ. ‘ಜೈಲರ್’ ಸಿನಿಮಾ ಗ್ರಾಸ್ ಕಲೆಕ್ಷನ್ 600 ಕೋಟಿ ರೂ. ದಾಟಿತ್ತು ಎನ್ನಲಾಗಿದೆ .