Actor Rajinikanth : ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ರಜನಿಕಾಂತ್ ಬಸ್ ಕಂಡಕ್ಟರ್ ಆಗಿದ್ದಾಗ ಪಡೆಯುತ್ತಿದ್ದ ಸಂಬಳ.

ಬಸ್ ಕಂಡೆಕ್ಟರ್ ಆಗಿ ಕೆಲಸ ಮಾಡುತ್ತಿದ್ದ ಈ ಸೂಪರ್ ಸ್ಟಾರ್ ನಟ, ಇವರು ಪಡೆಯುತ್ತಿದ್ದ ಸಂಬಳ ಬಗ್ಗೆ ವೈರಲ್ ಆಯಿತು ಸುದ್ದಿ

Rajinikanth Salary As Bus Conductor: ನಟ ಅಥವಾ ನಟಿ, ಯಾರೇ ಆಗಲಿ ಪ್ರತಿಯೊಬ್ಬರಿಗೂ ಒಂದು ವೈಯಕ್ತಿಕ ಜೀವನ ಅಂತ ಇರುತ್ತದೆ. ನಟನೆ ಹಾಗು ಚಿತ್ರರಂಗಕ್ಕೆ ಕಾಲಿಡುವ ಮೊದಲು ಬೇರೆ ಬೇರೆ ವೃತಿಯಲ್ಲಿ ನಟ ನಟಿಯರು ಇರುತ್ತಾರೆ. ಅವಕಾಶ ಸಿಕ್ಕ ನಂತರ ತನ್ನ ಜೀವನ ಶೈಲಿಯನ್ನು ಬದಲಾಯಿಸಿಕೊಂಡು ಗೆಲುವಿನತ್ತ ಸಾಗುತ್ತಾರೆ.

ಅಂತಹ ಒಂದು ಕಷ್ಟಕರ ಜೀವನ ಕಂಡ ಹಲವು ನಟರಲ್ಲಿ ರಜನಿಕಾಂತ್ (Rajinikanth) ಕೂಡ ಒಬ್ಬರಾಗಿದ್ದಾರೆ. ಚಿತ್ರರಂಗಕ್ಕೂ ಬರುವ ಮೊದಲು ಈ ನಟ ಬಸ್ ಕಂಡೆಕ್ಟರ್ (Buss Conductor) ಆಗಿ ಕೆಲಸ ಮಾಡುತ್ತಿದ್ದರು. ನಂತರದಲ್ಲಿ ಹೀರೊ ಆಗಿ, ಅಧಿಕ ಅಭಿಮಾನಿಗಳನ್ನು ಹೊಂದಿ ಈಗ ಐಷಾರಾಮಿ ಜೀವನ ನೆಡೆಸುತ್ತಿದ್ದಾರೆ.                       

Rajinikanth Salary As Bus Conductor
Image Credit: Zeenews

ನಟ ರಜನಿಕಾಂತ್ ಅವರ ಜೀವನದ ಸಾರಾಂಶ
Actor Rajinikanth ಅವರು ಡಿಸೆಂಬರ್ 12, 1950 ರಂದು ಬೆಂಗಳೂರಿನಲ್ಲಿ ಶಿವಾಜಿ ರಾವ್ ಗಾಯಕ್ವಾಡ್ ಆಗಿ ಜನಿಸಿದರು. ರಜನಿ ಬೆಂಗಳೂರು ನಗರದಲ್ಲಿ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡಿದರು.ಶಿವಾಜಿ ರಾವ್ ಗಾಯಕ್ವಾಡ್ ಅವರಿಗೆ ರಜನಿಕಾಂತ್ ಎಂದು ನಾಮಕರಣ ಮಾಡಿ ಸಿನಿಲೋಕಕ್ಕೆ 1975 ರಲ್ಲಿ ಪಾದಾರ್ಪಣೆ ಮಾಡಿದರು, ಇವರ ಮೊದಲ ಸಿನಿಮಾ ಅಪೂರ್ವ ರಾಗಂಗಲ್ ಆಗಿದ್ದು, ಇದು ಅವರಿಗೆ ಮೊದಲು ಹಿಟ್ ಕೊಟ್ಟ ಸಿನಿಮಾ ಆಗಿದೆ. ನಂತರ ಈ ನಟ ಭಾರತೀಯ ಚಿತ್ರರಂಗದ ಮಹಾನ್‌ ನಾಯಕನಾಗಿ ಬೆಳೆದರು. ಅವರು ಮಾಡಿದ ಹಲವಾರು ಸಿನಿಮಾಗಳು ಸೂಪರ್‌ ಹಿಟ್‌ ಆದವು. ಸೂಪರ್‌ ಸ್ಟಾರ್‌ ಎಂಬ ಬಿರುದು ಪಡೆದರು.

ಕೋಟಿ ಕೋಟಿ ಸಂಭಾವನೆ ಪಡೆಯುವ ನಟ ರಜನಿಕಾಂತ್

ನಟ ಸೂಪರ್ ಸ್ಟಾರ್ ರಜನಿಕಾಂತ್ ಅವರು ಹಲವು ವರ್ಷಗಳಿಂದ ಸಿನಿಮಾರಂಗದಲ್ಲಿ ಕೆಲಸ ಮಾಡುತ್ತಿದ್ದು, ಹಿಟ್ ಸಿನಿಮಾಗಳನ್ನೂ ನೀಡಿ ಹಲವು ಬಿರುದುಗಳನ್ನು ಪಡೆದಿದ್ದಾರೆ. ರಜನಿಕಾಂತ್‌ ಸದ್ಯ ದೇಶದ ಅತಿ ಹೆಚ್ಚು ಸಂಭಾವನೆ ಪಡೆಯುವ ಮತ್ತು ಶ್ರೀಮಂತ ನಟರಲ್ಲಿ ಒಬ್ಬರು. ನಟ ಇತ್ತೀಚೆಗೆ ಬಿಡುಗಡೆಯಾದ ಜೈಲರ್‌ಗಾಗಿ 210 ಕೋಟಿ ಸಂಭಾವನೆ ಪಡೆದಿದ್ದಾರೆ. ಅಲ್ಲದೇ ರಜನಿಕಾಂತ್‌ 430 ಕೋಟಿ ರೂಪಾಯಿ ನಿವ್ವಳ ಆಸ್ತಿಯನ್ನು ಹೊಂದಿದ್ದಾರೆ. ಐಷಾರಾಮಿ ಜೀವನಶೈಲಿಯನ್ನು ಆನಂದಿಸುತ್ತಿದ್ದಾರೆ.

Actor Rajinikanth
Image Credit: NDTV

ಬಿಟಿಎಸ್ ಬಸ್ ಕಂಡೆಕ್ಟರ್ ಆಗಿದ್ದ ರಜನಿಕಾಂತ್

ಇವಾಗ ಐಷಾರಾಮಿ ಜೀವನ ನೆಡೆಸುತ್ತಿರುವ ನಟ ರಜನಿಕಾಂತ್ ಆರಂಭದಲ್ಲಿ ಎರಡು ವರ್ಷಗಳ ಕಾಲ ಬೆಂಗಳೂರಿನಲ್ಲಿ ಬಿಟಿಎಸ್ ಬಸ್ ಕಂಡೆಕ್ಟರ್ ಆಗಿ ಕೆಲಸ ಮಾಡುತ್ತಿದ್ದರು. ಮಾರ್ಕೆಟ್‌ನಿಂದ ಶ್ರೀನಗರ ಮಾರ್ಗವಾಗಿ ಓಡಾಡುತ್ತಿದ್ದ 10A ಸಂಖ್ಯೆಯ ಬಸ್‌ನಲ್ಲಿ ಕಂಡಕ್ಟರ್‌ ಆಗಿ ಕೆಲಸ ಮಾಡಿದ್ದಾರೆ.

ಇತ್ತೀಚೆಗಷ್ಟೆ ತಲೈವಾ ಬೆಂಗಳೂರಿಗೆ ಸರ್‌ಪ್ರೈಸ್ ಎಂಟ್ರಿ ಕೊಟ್ಟು ಜಯನಗರ, ಚಾಮರಾಜಪೇಟೆ, ಗಾಂಧಿ ಬಜಾರ್‌ನಲ್ಲಿ ಓಡಾಡಿ ತಮ್ಮ ಹಳೆಯ ನೆನಪನ್ನು ಮೆಲಕು ಹಾಕಿದರು. ಜಯನಗರ ಬಸ್ ಡಿಪೋ-4ಕ್ಕೆ ಭೇಟಿ ಕೊಟ್ಟು ಸಿಬ್ಬಂದಿಗಳ ಜೊತೆ ಫೋಟೋ ತೆಗೆಸಿಕೊಂಡಿದ್ದಾರೆ. ರಜನಿಕಾಂತ್ ಬಸ್ ಕಂಡೆಕ್ಟರ್ ಆಗಿ ಪಡೆಯುತ್ತಿದ್ದ ಸಂಬಳದ ಬಗ್ಗೆ ಅವರ ಸಹೋದರ ಸತ್ಯ ನಾರಾಯಣ ಸಂದರ್ಶನವೊಂದರಲ್ಲಿ ತಿಳಿಸಿದ್ದರು. ರಜನಿಕಾಂತ್ ಬಿಟಿಎಸ್ ಬಸ್ ಕಂಡೆಕ್ಟರ್ ಆಗಿ ಕೆಲಸ ಮಾಡುತ್ತಿದ್ದಾಗ ಪಡೆದ ಮೊದಲ ಸಂಬಳ 700 ರೂಪಾಯಿ ಅಂತೆ ಎಂದು ಹೇಳಿದ್ದಾರೆ .

Leave A Reply

Your email address will not be published.