Actor Rajinikanth: ಬಯಲಾಯಿತು ರಜನಿಕಾಂತ್ ಇನ್ನೊಂದು ಮುಖ, ಸ್ಟಾರ್ ನಟಿಗೆ ಖಡಕ್ ವಾರ್ನಿಂಗ್ ನೀಡಿದ ತಲೈವಾ.

ರಜನಿಕಾಂತ್ ವಾರ್ನಿಂಗ್ ಕೊಟ್ಟ ಆ ನಟಿ ಯಾರು, ಏನು ಕಾರಣ?

Rajinikanth Warned Amala Paul: ರಜನಿಕಾಂತ್ (Rajinikanth) ಚಿತ್ರರಂಗದಲ್ಲಿ ಬಹುಪ್ರಖ್ಯಾತಿ ಪಡೆದ ನಟನಾಗಿದ್ದು, ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದವರಾಗಿದ್ದಾರೆ. ರಜನಿಕಾಂತ್ ಪುತ್ರಿ ಐಶ್ವರ್ಯರವರು ನಟ ಧನುಷ್ (Dhanush) ರವರನ್ನು ವಿವಾಹ ಆಗಿದ್ದು ಇಬ್ಬರ ನಡುವೆ ಭಿನ್ನಾಭಿಪ್ರಾಯಗಳು ಆರಂಭವಾಗಿದ್ದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ.

ರಜನಿಕಾಂತ್ ಹಾಗೂ ಧನುಷ್ ಮನೆಯವರು ಇಬ್ಬರನ್ನೂ ಒಂದು ಮಾಡಲು ಮತ್ತೆ ಪ್ರಯತ್ನಿಸುತ್ತಿದ್ದು ಹಿರಿಯರಿಗಾಗಿ ಇಬ್ಬರೂ ಮತ್ತೆ ಒಂದಾಗುತ್ತಾರೆ ಎನ್ನಲಾದರೂ ಇದುವರೆಗೂ ಆ ಸಮಯ ಬಂದಿಲ್ಲ.18 ವರ್ಷಗಳ ಕಾಲ ವೈವಾಹಿಕ ಜೀವನ ನೆಡೆಸಿದ ಇವರು ಈಗ ಡಿವೋರ್ಸ್ ಗೆ ಕಾರಣ ಏನು ಎಂಬುದು ಇಂದಿಗೂ ಕಗ್ಗಂಟಾಗಿ ಉಳಿದಿದೆ. ಕಳೆದ ವರ್ಷ ಜನವರಿಯಲ್ಲಿ ರಜನಿಕಾಂತ್ ಪುತ್ರಿ ಐಶ್ವರ್ಯ ಹಾಗೂ ಅಳಿಯ ಧನುಷ್ ತಾವು ಕಾನೂನಿನ ಮೂಲಕ ಬೇರಾಗುತ್ತಿರುವುದಾಗಿ ಅನೌನ್ಸ್ ಮಾಡಿದ್ದರು. 

Rajinikanth Warned Amala Paul
Image Credit: Hosakannada

ಧನುಷ್ ಹಾಗೂ ಐಶ್ವರ್ಯ ನಡುವೆ ಬೇರೆ ನಟಿ

ಧನುಷ್ ಹಾಗೂ ಐಶ್ವರ್ಯ ನಡುವೆ ಬೇರೆ ನಟಿ ಬಂದಿದ್ದೇ ಇವರಿಬ್ಬರ ಡಿವೋರ್ಸ್ಗೆ ಕಾರಣ ಎಂಬ ಮಾತು ಕೇಳಿಬರುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಇತ್ತೀಚೆಗೆ ತಮಿಳಿನ ಖ್ಯಾತ ಪತ್ರಕರ್ತ ಮತ್ತು ಸಿನಿಮಾ ವಿಮರ್ಶಕ ಚೆಯ್ಯಾರು ಬಾಲು ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ಆ ನಟಿ ಯಾರು ಎಂಬುದನ್ನು ರಿವೀಲ್ ಮಾಡಿದ್ದಾರೆ.

ಧನುಷ್​ ಮತ್ತು ಅಮಲಾ ನಡುವೆ ಆಪ್ತತೆ ಇರುವ ವಿಚಾರ ಧನುಷ್​ ಅವರ ಮಾವ ರಜನಿಕಾಂತ್​ಗೆ ತಿಳಿದಿತ್ತು. ಹೀಗಾಗಿ ಅಮಲಾ ಅವರ ಮನೆಗೆ ತೆರಳಿದ ರಜಿನಿಕಾಂತ್​, ಆಕೆಗೆ ವಾರ್ನಿಂಗ್​ ನೀಡಿದ್ದರು ಎಂದು ಸೆಯ್ಯಾರು ಬಾಲು ಮಾಹಿತಿ ನೀಡಿದ್ದರು.

Actor Rajinikanth latest news
Image Credit: Hosakannada

ಬೆದರಿಕೆ ಹಾಕಿದ ನಟ ರಜನಿಕಾಂತ್

ವೇಳಯಿಲ್ಲ ಪಟ್ಟದಾರಿ ಸಿನಿಮಾ ಹಾಗೂ ಅದರ ಸೀಕ್ವೆಲ್ನಲ್ಲಿ ಧನುಷ್ ಹಾಗೂ ಅಮಲಾ ಪೌಲ್ ಜೊತೆಯಾಗಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ನಟಿಸುವಾಗಿ ಇಬ್ಬರ ನಡುವೆ ಸ್ನೇಹ ಉಂಟಾಗಿ, ನಂತರ ಇನ್ನಷ್ಟು ಹತ್ತಿರವಾಗಿದ್ದರು. ಈ ವಿಚಾರ ರಜನಿಕಾಂತ್ ಗೆ ಕೂಡಾ ತಿಳಿದಿತ್ತು.’ಧನುಷ್ ಕುಟುಂಬಸ್ಥನಾಗಿದ್ದು, ಆತನಿಗೂ ಪತ್ನಿ ಮತ್ತು ಮಕ್ಕಳಿದ್ದಾರೆ. ಅತನೊಂದಿಗಿನ ಸಂಬಂಧ ಬಿಟ್ಟು ಬಿಡದಿದ್ದರೆ ನನ್ನ ಇನ್ನೊಂದು ಮುಖ ನೋಡಬೇಕಾಗುತ್ತದೆ’ ಎಂದು ರಜನೀಕಾಂತ್ ಅಮಲಾಗೆ ಬೆದರಿಕೆ ಹಾಕಿದ್ದರಂತೆ. ಈ ಘಟನೆಯ ನಂತರ ಅಮಲಾಗೆ ತಮಿಳಿನಲ್ಲಿ ಅವಕಾಶಗಳು ಕಡಿಮೆಯಾದ ಕಾರಣ ಅವರು ಕೇರಳಕ್ಕೆ ಹೋಗಿದ್ದಾರೆ ಎಂದು ಸೆಯ್ಯಾರು ಬಾಲು ಹೇಳಿದ್ದಾರೆ.

Leave A Reply

Your email address will not be published.