Rakhi Sawant: ರಾಖಿ ಸಾವಂತ್ ಕಣ್ಣು ಈಗ ರಿಷಬ್ ಶೆಟ್ಟಿ ಮೇಲೆ, ಕಾಂತಾರ ನಟನ ಬಗ್ಗೆ ರಾಖಿ ಸಾವಂತ್ ಹೇಳಿದ್ದೇನು…?
ರಿಷಬ್ ಶೆಟ್ಟಿ ಬಗ್ಗೆ ಮಾತನಾಡಿದ ನಟಿ ರಾಖಿ ಸಾವಂತ್.
Rakhi Sawant And Rishab Shetty Latest News: ಬಾಲಿವುಡ್ ನಟಿ, ಕಾಂಟ್ರವರ್ಸಿ ಕ್ವೀನ್ ರಾಖಿ ಸಾವಂತ್ (Rakhi Sawant) ಯಾವಾಗಲು ಸುದ್ದಿಯಲ್ಲಿರುತ್ತಾರೆ. ಆದರೆ ಈ ಬಾರಿ ವಿವಾದವಲ್ಲ, ಬದಲಾಗಿ ಕಾಂತಾರ (Kantara) ಮೂಲಕ ಖ್ಯಾತಿ ಪಡೆದ ನಟ, ನಿರ್ದೇಶಕ, ಕನ್ನಡಿಗ ರಿಷಬ್ ಶೆಟ್ಟಿ (Rishab Shetty) ಬಗ್ಗೆ ಮಾತನಾಡಿದ್ದಾರೆ ಅವರ ನಿರ್ದೇಶನದ ಬಗ್ಗೆ ಅನಿಸಿಕೆ ಹಂಚಿಕೊಂಡಿದ್ದಾರೆ.
ಕಾಂತಾರ ನಿರ್ದೇಶಕನ ನಿರ್ದೇಶನದ ಬಗ್ಗೆ ಕೊಂಡಾಡಿದ್ದಾರೆ. ನನ್ನ ಜೀವನ ಚರಿತ್ರೆ ಸಿನಿಮಾ ಮಾಡಬೇಕು ಅಂತ ರಾಖಿ ಸಾವಂತ್ ಆಸೆ ಬಿಚ್ಚಿಟ್ಟಿದ್ದಾರೆ. ಅದನ್ನು ರಿಷಬ್ ಶೆಟ್ಟಿ ಅವರೇ ನಿರ್ದೇಶನ ಮಾಡಬೇಕು ಅಂತ ಹೇಳಿದ್ದಾರೆ.
ಕಾಂಟ್ರವರ್ಸಿ ಕ್ವೀನ್ ರಾಖಿ ಸಾವಂತ್ ಜೀವನ ಚರಿತ್ರೆ
ತಮ್ಮ ಜೀವನ ಚರಿತ್ರೆ ಸಿನಿಮಾ ಆಗಲಿ ಅಂತ ರಾಖಿ ಸಾವಂತ್ ಬಯಸಿದ್ದಾರಂತೆ. ತಮ್ಮ ಪಾತ್ರವನ್ನು ನಟಿ ವಿದ್ಯಾ ಬಾಲನ್ ಮಾಡಿದ್ರೆ ಸೂಟ್ ಆಗುತ್ತೆ ಅಂತ ರಾಖಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರಾಖಿ ಸಾವಂತ್ ಅವರ ಜೀವನದ ಕಥೆ ಇಟ್ಟುಕೊಂಡು ಸಿನಿಮಾ ಮಾಡಲು ತೆರೆಮರೆಯಲ್ಲಿ ಪ್ಲ್ಯಾನ್ ನಡೆಯುತ್ತಿದೆಯಂತೆ. ಅದಕ್ಕೆ ಕೆಲ ನಿರ್ಮಾಪಕರು ಕೂಡ ಮುಂದೆ ಬಂದಿದ್ದಾರಂತೆ.
ತನ್ನ ಜೀವನ ಚರಿತ್ರೆಗೆ ರಿಷಬ್ ಶೆಟ್ಟಿ ಯವರೇ ನಿರ್ದೇಶಕರು
ರಿಷಬ್ ಶೆಟ್ಟಿ ತನ್ನ ಜೀವನ ಚರಿತ್ರೆ ಸಿನಿಮಾ ಡೈರೆಕ್ಷನ್ ಮಾಡಬೇಕು ಅಂತ ರಾಖಿ ಸಾವಂತ್ ಅಭಿಪ್ರಾಯ ಪಟ್ಟಿದ್ದಾರೆ. ಅವರ ಎಲ್ಲ ಸಿನಿಮಾಕ್ಕೆ ಫಿದಾ ಆದ ಆಕೆ ತನ್ನ ಸಿನಿಮಾನೂ ರಿಷಬ್ ಶೆಟ್ಟಿ ಅವರೇ ನಿರ್ದೇಶನ ಮಾಡಬೇಕೆಂದಿದ್ದಾರೆ. ನಿಮ್ಮ ಪಾತ್ರವನ್ನು ನೀವೇ ಮಾಡಬಹುದಲ್ಲ ಎಂದು ಕೆಲ ನಿರ್ಮಾಪಕರು ರಾಖಿಗೆ ಒತ್ತಾಯಿಸಿದ್ದಾರಂತೆ. ಆದ್ರೆ ಅವ್ರು ವಿದ್ಯಾ ಬಾಲನ್ ಹೆಸರು ಪ್ರಸ್ತಾಪಿಸಿದ್ದಾರಂತೆ. ನನ್ನ ಪಾತ್ರವನ್ನು ನಾನು ಮಾಡುವ ಬಗ್ಗೆ ಯೋಚಿಸಿಲ್ಲ ಎಂದು ರಾಖಿ ಸಾವಂತ್ ಹೇಳಿದ್ದಾರೆ.
ಕಾಂತಾರ 2 ಸಿನಿಮಾದ ತಯಾರಿಯಲ್ಲಿ ರಿಷಬ್ ಬ್ಯುಸಿ
ಕಾಂತಾರ ಭಾರತದಾದ್ಯಂತ ಭಾರೀ ಹೆಸರು ಗಳಿಸಿರೋದ್ರಿಂದ ಇನ್ನಷ್ಟು ಅದ್ಭುತವಾಗಿ ಕಾಂತಾರ 2 ತೆರೆಗೆ ತರಲು ಶೆಟ್ರು ಪ್ಲಾನ್ ಮಾಡಿದ್ದಾರೆ. ಸದ್ಯ ರಿಷಬ್ ಶೆಟ್ಟಿ ಕಾಂತಾರ 2 ಸಿನಿಮಾದ ಸ್ಕ್ರಿಪ್ಟ ತಯಾರಿಯಲ್ಲಿ ಬ್ಯುಸಿ ಇದ್ದಾರೆ. ಹಾಗಾಗಿ ಯಾರ ಕೈಗೂ ಸಿಗುತ್ತಿಲ್ಲವಂತೆ.