Raksha QR Code: ವಾಹನಕ್ಕೆ ಕ್ಯೂಆರ್ ಕೋಡ್, ಅಪಘಾತವಾದ್ರೆ ಮನೆಯವರು, ಪೊಲೀಸ್, ಆಸ್ಪತ್ರೆಗೆ ಸಂದೇಶ.
ರಕ್ಷಾ ಕ್ಯೂಆರ್ ಕೋಡ್ ಅಳವಡಿಕೆಯಿಂದ ಅಪಘಾತ ಸಂಭವಿಸಿದವರ ರಕ್ಷಣೆಗೆ ಸಹಾಯವಾಗುತ್ತದೆ.
Raksha QR Code For Safety Of Vehicle Drivers: ವಾಹನಗಳ ಚಲಾವಣೆಯಲ್ಲಿ ಅನಿರೀಕ್ಷಿತವಾಗಿ ಅಪಘಾತ ಸಂಭವಿಸುವುದು ಸಹಜವಾಗಿದೆ. ಈ ರೀತಿ ಅಪಘಾತ ಸಂಭವಿಸಿದಾಗ ಅಪಘಾತವಾದ ವ್ಯಕ್ತಿಯ ಮಾಹಿತಿ ಪಡೆಯಲು ಸಾಧ್ಯವಾಗದೆ ತೊಂದರೆ ಉಂಟಾಗುತ್ತಿರುತ್ತದೆ.
ಇಂತಹ ಸಮಸ್ಯೆಯನ್ನು ಬಗೆಹರಿಸಲು ವಾಹನಗಳಿಗೆ ರಕ್ಷಾ ಕ್ಯೂಆರ್ ಕೋಡ್ ಅಳವಡಿಕೆ ಸಾಫ್ಟವೆರ್ ಅನ್ನು ಹೈವೇ ಡಿಲೈಟ್ ಸಂಸ್ಥೆ ಬಿಡುಗಡೆಗೊಳಿಸಿದೆ. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ಸಂಸ್ಥಾಪಕ ರಾಜೇಶ್ ಘಟನೆಟ್ಟಿ ಅಪಘಾತ ಸಂಭವಿಸಿದವರ ರಕ್ಷಣೆಗಾಗಿ ವಾಹನಗಳಿಗೆ ಕ್ಯೂಆರ್ ಕೋಡ್ ಅಂಟಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ರಕ್ಷಾ ಕ್ಯೂಆರ್ ಕೋಡ್ ಬಳಕೆಯ ವಿಧಾನ
ರಸ್ತೆಯಲ್ಲಿ ಯಾವುದಾದರು ವಾಹನಕ್ಕೆ ಅಪಘಾತವಾದರೆ ಆ ವಾಹನದ ಮೇಲೆ ಅಂಟಿಸಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಅಪಘಾತವಾದ ವ್ಯಕ್ತಿಯ ಕುಟುಂಬಕ್ಕೆ ಮಾಹಿತಿ ನೀಡ ಬಹುದಾಗಿದೆ. ಕರೆ ಮಾಡಿದ ವ್ಯಕ್ತಿಯ ಹಾಗು ಕರೆ ಸ್ವೀಕರಿಸಿದ ವ್ಯಕ್ತಿಯ ಮಾಹಿತಿಯನ್ನು ಗೌಪ್ಯವಾಗಿ ಇರಿಸಲಾಗುತ್ತದೆ ಕರೆ ಮಾಡಿದವರಿಗೆ ಇದರಿಂದ ಯಾರಿಗೂ ತೊಂದರೆ ಆಗುವುದಿಲ್ಲ. ಹಾಗು ನಮ್ಮ ಸಂಸ್ಥೆ ಅಪಘಾತವಾದ ಸ್ಥಳದ ಮಾಹಿತಿ ಪಡೆದು ಪಕ್ಕದಲ್ಲಿನ ಆಸ್ಪತ್ರೆ ಹಾಗು ಪೊಲೀಸ್ ಠಾಣೆಗೆ ಮಾಹಿತಿ ರವಾನಿಸುತ್ತೇವೆ ಎಂದು ತಿಳಿಸಿದ್ದಾರೆ.
ರಕ್ಷಾ ಕ್ಯೂಆರ್ ಕೋಡ್ ಪಡೆಯುವ ವಿಧಾನ
ವಾಹನಗಳಿಗೆ ರಕ್ಷಾ ಕ್ಯೂಆರ್ ಕೋಡ್ ಪಡೆಯಲು ವಾಹನದ ಮಾಲೀಕರು ಹೈವೇ ಡಿಲೈಟ್ ನೊಂದಿಗೆ ವಾರ್ಷಿಕ ಶುಲ್ಕ 365 ರೂಪಾಯಿ ಪಾವತಿ ನೋಂದಣಿ ಮಾಡಿಕೊಳ್ಳಬೇಕು ಮತ್ತು ವಾಹನದ ವಿಮೆ, ಆರೋಗ್ಯ ವಿಮೆ, ರಕ್ತದ ಗುಂಪು ಹಾಗು ಕುಟುಂಬದ ತುರ್ತು ಮಾಹಿತಿಯ ವಿವರಗಳನ್ನು ಇದರಲ್ಲಿ ಸೇರಿಸಬೇಕು ಹಾಗು ಈ ಎಲ್ಲ ಮಾಹಿತಿಗಳು ಸುರಕ್ಷಿತವಾಗಿರುತ್ತದೆ ಎಂದು ತಿಳಿಸಲಾಗಿದೆ ಹಾಗು ರಕ್ಷಾ ಕ್ಯೂಆರ್ ಕೋಡ್ ಅಳವಡಿಕೆಯಿಂದ ಹಲವು ಜೀವಗಳನ್ನು ಕಾಪಾಡಬಹುದು ಎಂಬ ಮಾಹಿತಿ ಸಂಸ್ಥೆ ನೀಡಿದೆ.