Rakshak Bullet: ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ರಕ್ಷಕ್‌ ಬುಲೆಟ್‌ ಜಾತಕ, ಎಷ್ಟು ಮದುವೆಯ ಯೋಗ ಇದೆ ಗೊತ್ತಾ…?

ರಕ್ಷಕ್ ಬುಲೆಟ್ ಜಾತಕದಲ್ಲಿ ಭರ್ಜರಿ ಮದುವೆ ಯೋಗ.

Rakshak Bullet In Bigg Boss Kannada: ಕಲರ್ಸ್ ಕನ್ನಡದಲ್ಲಿ (Colors Kannada) ಕಿರುತರೆಯ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10 ಪ್ರಾರಂಭವಾಗಿ, ಎರಡು ವಾರಗಳು ಕಳೆಯುತ್ತಾ ಬರುತ್ತಿದೆ. ಆರಂಭದಲ್ಲಿ ಸ್ನೇಹಿತರಾಗಿದ್ದವರೂ ಈಗ ಸ್ಪರ್ಧಿಗಳಾಗಿದ್ದಾರೆ.

ಶಾಂತವಾಗಿದ್ದ ಬಿಗ್ ಮನೆ ದಿನದಿಂದ ದಿನಕ್ಕೆ ರಣರಂಗವಾಗುತ್ತಿದೆ. ಈ ನಡುವೆ ಕೆಲವರ ವಯಕ್ತಿಕ ಜೀವನದ ಕೆಲವು ವಿಷಯಗಳು ಒಂದೊಂದಾಗೆ ಹೊರಬೀಳುತ್ತಿದೆ. ಬಿಗ್ ಬಾಸ್ ಮನೆಯಲ್ಲಿ ಲವ್, ಫ್ರೆಂಡ್‌ಶಿಪ್, ಬ್ರೇಕಪ್ ಹೀಗೆ ನಾನಾ ರೀತಿಯ ಗಾಸಿಪ್ ಕಥೆಗಳನ್ನ ನೋಡಬಹುದು. ಇದೀಗ ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ತನ್ನ ಮದುವೆ ಬಗ್ಗೆ ಬಾಯ್ಬಿಟ್ಟಿದ್ದಾರೆ.

Rakshak Bullet In Bigg Boss Kannada
Image Source: The News Media

ರಕ್ಷಕ್ ಬುಲೆಟ್ ಗೆ 05 ಮದುವೆಯ ಯೋಗ

ಬಿಗ್ ಬಾಸ್ ಸ್ಪರ್ಧಿಗಳಾದ ಸಿರಿ, ಸ್ನೇಹಿತ್, ತನಿಷಾ, ರಕ್ಷಕ್ ತಮ್ಮ ವೈಯಕ್ತಿಕ ಬದುಕಿನ ವಿಚಾರಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ. ಸ್ನೇಹಿತ್ ತನ್ನ ಬ್ರೇಕಪ್‌ಗಳ ಕತೆ ಹೇಳಿದ್ರೆ, ಹಿರಿಯ ನಟಿ ಸಿರಿ ತನಗೆ ಮದುವೆ ಬಗ್ಗೆ ಆಸಕ್ತಿ ಇಲ್ಲದೇ ಇರೋದರ ಬಗ್ಗೆ ಮಾತನಾಡಿದ್ದಾರೆ ಆಗ ರಕ್ಷಕ್ ತಮ್ಮ ಮದುವೆ ಬಗ್ಗೆ ಬಾಯ್ಬಿಟ್ಟಿದ್ದಾರೆ. ತಂದೆ ಬುಲೆಟ್ ಪ್ರಕಾಶ್ ಅವರಿದ್ದಾಗ ಒಮ್ಮೆ ರಕ್ಷಕ್ ಜಾತಕ ತೋರಿಸಿದ್ರಂತೆ, ಆಗ ಜ್ಯೋತಿಷಿ ರಕ್ಷಕ್‌ಗೆ 5 ಮದುವೆಯಾಗುವ ಯೋಗದ ಬಗ್ಗೆ ಹೇಳಿದ್ರಂತೆ. ಈ ವಿಚಾರ ಮನೆಮಂದಿ ಮುಂದೆ ರಕ್ಷಕ್ ಹೇಳಿಕೊಂಡಿದ್ದಾರೆ.

Rakshak Bullet In Bigg Boss Kannada
Image Source: Filmibeat

ರಕ್ಷಕ್ ಬುಲೆಟ್ ಅವರ ಮದುವೆ ಯೋಗ ಕೇಳಿ ನಕ್ಕಿದ ಮನೆ ಮಂದಿ

ರಕ್ಷಕ್ ಬುಲೆಟ್ ತನಗೆ 05 ಮದುವೆ ಆಗುವ ಯೋಗ ಇದೆ ಎಂದು ಹೇಳಿದ ಕೂಡಲೇ , ಸ್ನೇಹಿತ್ ಕಾಲೆಳೆದಿದ್ದಾರೆ. ಅದಕ್ಕೇನಾ ವೈಲ್ಡ್ ಕಾರ್ಡ್ ಎಂಟ್ರಿ ಬರಲಿ ಅಂತಾ ಹೇಳ್ತಾ ಇದ್ದಿದ್ದು ಅಂತ ತಮಾಷೆ ಮಾಡಿದ್ದಾರೆ. ರಕ್ಷಕ್ ಹಾಗು ಸ್ನೇಹಿತ್ ಮಾತಿಗೆ ಮನೆಮಂದಿ ನಕ್ಕಿದ್ದಾರೆ ‘ಗುರು ಶಿಷ್ಯರು’ ಚಿತ್ರದ ಮೂಲಕ ರಕ್ಷಕ್ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ಯುವ ನಟನಾಗಿದ್ದು, ಸಾಕಷ್ಟು ಟ್ರೋಲ್‌ಗಳ ಮೂಲಕ ಹೈಲೆಟ್ ಆಗಿದ್ದರು. ಈಗ ಬಿಗ್ ಬಾಸ್ ಮನೆಯಲ್ಲಿ ಖಡಕ್ ಡೈಲಾಗ್ ಹೇಳುವ ಮೂಲಕ ಮಿಂಚ್ತಿದ್ದಾರೆ. ಅಷ್ಟೇ ಅಲ್ಲದೆ ತುಂಬ ಉತ್ತಮವಾಗಿ ಬಿಗ್ ಬಾಸ್ ಆಟ ಆಡುತ್ತಿದ್ದಾರೆ.

Leave A Reply

Your email address will not be published.