Rakshak Bullet Interview: ಅಪ್ಪ ಕಟ್ಟಿದ ಮನೆಯನ್ನು ರಕ್ಷಕ್ ಮಾರಾಟ ಮಾಡಿದ್ದು ಯಾಕೆ…? ಕಾರಣ ಸಮೇತ ಉತ್ತರಿಸಿದ ರಕ್ಷಕ್.
ತನ್ನ ತಂದೆ ಕಟ್ಟಿದ ಮನೆಯನ್ನು ಮಾರಿದ ಕುರಿತು ಮಾಹಿತಿ ಹಂಚಿಕೊಂಡ ಬುಲೆಟ್ ಪ್ರಕಾಶ್ ಅವರ ಮಗ ರಕ್ಷಕ್ ಬುಲೆಟ್.
Rakshak Bullet Reveals Reason Why He Sold Bullet Prakash Built House: ರಕ್ಷಕ್ ಬುಲೆಟ್ (Rakshak Bullet) ಆಗಾಗ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಲ್ಲಿರುತ್ತಾರೆ. ಚಿತ್ರರಂಗದಲ್ಲಿ ಹಲವು ದಶಕಗಳ ಕಾಲ ತಮ್ಮ ನಟನೆಯಿಂದಲೇ ಗುರುತಿಸಿಕೊಂಡಿದ್ದ ಬುಲೆಟ್ ಪ್ರಕಾಶ್ (Bullet Prakash) ಅವರ ಏಕೈಕ ಮಗ ರಕ್ಷಕ್ ಬುಲೆಟ್ ಆಗಿದ್ದಾರೆ. ಯಾವುದೇ ಗಾಡ್ ಫಾದರ್ ಇಲ್ಲದೆ, ಸಾಮಾನ್ಯ ವ್ಯಕ್ತಿಯಾಗಿ ಬಂದು ಕನ್ನಡದ ಕಾಮಿಡಿ ನಟನಾಗಿ ಮಿಂಚಿ, ಎಲ್ಲರ ಜನಮನದಲ್ಲಿ ಉಳಿದಿದ್ದಾರೆ.
ಹೀಗೆ ಸಿನಿಮಾರಂಗದಲ್ಲಿ ದುಡಿದು, ಅದರಿಂದ ಬಂದ ಹಣದಿಂದಲೇ ಬೆಂಗಳೂರಿನ ಹೆಬ್ಬಾಳದ ಬಳಿ ಸ್ವಂತ ಕನಸಿನ ಮನೆ ನನಸಾಗಿಸಿಕೊಂಡಿದ್ದರು. ಆ ಮನೆಯನ್ನೇ ಪುತ್ರ ರಕ್ಷಕ್ ಕೆಲ ತಿಂಗಳ ಹಿಂದೆಯೇ ಮಾರಿದ್ದಾರೆ.

ಬಿಗ್ ಬಾಸ್ ಸ್ಪರ್ಧಿಯಾಗಿ ರಕ್ಷಕ್ ಬುಲೆಟ್
ಬಿಗ್ ಬಾಸ್ ಸೀಸನ್ 10 ಕನ್ನಡ ಇದರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ ರಕ್ಷಕ್ ಬುಲೆಟ್ ಒಂದು ತಿಂಗಳು ಮಾತ್ರ ಬಿಗ್ ಮನೆಯಲ್ಲಿ ಉಳಿದುಕೊಂಡರು. ಇವರು ಇಷ್ಟು ಬೇಗ ಬಿಗ್ ಮನೆಯಿಂದ ಹೊರ ಬರುತ್ತಾರೆಂದು ಯಾರು ಊಹೆ ಮಾಡಿರಲಿಲ್ಲ ಯಾಕೆಂದರೆ ತುಂಬ ಚೆನ್ನಾಗಿ ಆಟ ಆಡುತ್ತಿದ್ದರು ಹಾಗು ಆಕ್ಟಿವ್ ಆಗಿದ್ದರು. ಆದರೆ ಇವರ ಕೆಲವು ಅತಿಯಾದ ಮಾತು ಅವರಿಗೆ ಮುಳುವಾಗಿರಬಹುದು ಎನ್ನಲಾಗಿದೆ.
ಬುಲೆಟ್ ಪ್ರಕಾಶ್ ಕಟ್ಟಿಸಿದ ಸುಂದರ ಮನೆ
ಅಪ್ಪನ ನೆನಪು ತುಂಬ ಕಾಡುತ್ತಿತ್ತು. ಹಾಗಾಗಿ ಮನೆ ಮಾರಬೇಕಾಯಿತು ಎಂದು ಮನೆ ಮಾರಿದ್ದು ಏಕೆ ಎಂಬುದನ್ನು ಸ್ವತಃ ರಕ್ಷಕ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.. ಕಾಮೆಂಟ್ ಹಾಕುವವರೂ ಅನಿಸಿದ್ದೆಲ್ಲ ಹಾಕುತ್ತಾರೆ. ನಮ್ಮ ಸ್ಥಿತಿಗತಿ ಅವರಿಗೆ ಗೊತ್ತಿರುವುದಿಲ್ಲ. ನಾನು ತೆಗೆದುಕೊಂಡ ನಿರ್ಧಾರ, ನನಗಷ್ಟೇ ಅಲ್ಲದೆ, ನಮ್ಮ ಮನೆಯವರೂ ಒಪ್ಪಿದ್ದಾರೆ. ಹಾಗಾಗಿ ಈ ನಿರ್ಧಾರಕ್ಕೆ ಬಂದೆ ಎಂದಿದ್ದಾರೆ.
“ಅದು ನನ್ನ ನಿರ್ಧಾರ ಅಲ್ಲ. ಅಮ್ಮ ಇದ್ರು. ಅಕ್ಕ ಇದ್ರು. ನಾನೊಬ್ಬನೇ ನಿರ್ಧರಿಸಿಲ್ಲ. ಅಪ್ಪ ಆ ಮನೆ ಕಟ್ಟಲು ಪಟ್ಟ ಕಷ್ಟ ಅವರಿಗೇ ಗೊತ್ತಿತ್ತು. ಆ ಮನೆಯಲ್ಲಿ ಹೋಮ್ ಥಿಯೇಟರ್ ಇತ್ತು, ಜಿಮ್ ಇತ್ತು, ಡಾನ್ಸ್ ಕ್ಲಾಸ್ ಇತ್ತು. ಏಳು ಬೆಡ್‌ರೂಮ್ ಮನೆ ನಮ್ಮದು. ಲಿಫ್ಟ್ ಬೇರೆ ಇತ್ತು. ಆ ಮನೆ ಮಾರೋಕೆ ನನಗೂ ಬೇಜಾರಿತ್ತು. ಆದರೆ ಅಪ್ಪನ ನೆನಪುಗಳು ಮತ್ತು ಆ ಮನೆ ನಮಗೆ ಆಗಿಬರಲಿಲ್ಲ, ಹಾಗಾಗಿ ಮಾರಿದ್ದೇವೆ” ಎಂದು ಶೋಕಿಗೋಸ್ಕರ ಮನೆ ಮಾರಿದ ಎಂದು ಹರಿದಾಡಿದ ಸುದ್ದಿಗೆ ರಕ್ಷಕ್ ಉತ್ತರ ನೀಡಿದ್ದಾರೆ.

ಮನೆ ಮಾರಿದ ದುಡ್ಡನ್ನು ಹಾಳು ಮಾಡಿಲ್ಲಾ
ಕುಟುಂಬದ ಒಪ್ಪಿಗೆ ಮೇರೆಗೆ ಮನೆ ಮಾರಿದೆ. ಹಾಗಂತ ಆ ಮನೆ ಮಾರಿ ನಾನೇನು ಹಣ ಹಾಳು ಮಾಡಿಲ್ಲ. ಅದೇ ದುಡ್ಡಲ್ಲಿ, ಅದ್ದೂರಿಯಾಗಿ ನನ್ನ ಅಕ್ಕನ ಮದುವೆ ಮಾಡಿದ್ದೇನೆ. ಅದಕ್ಕೂ ಒಂದಷ್ಟು ಮಾತು ಬಂದವು, ಅವರು ದುಡ್ಡು ಕೊಟ್ಟರು, ಇವರು ಕೊಟ್ಟರು ಅಂತ.. ಯಾರೂ ದುಡ್ಡು ಕೊಟ್ಟಿಲ್ಲ. ನಮ್ಮಪ್ಪನ ಮನೆ ಮಾರಿದ್ರಲ್ಲಿಯೇ ಅಕ್ಕನ ಮದುವೆ ಮಾಡಿದ್ದೇನೆ. ಅದೇ ದುಡ್ಡಲ್ಲಿ ಬೇರೆ ಪ್ರಾಪರ್ಟಿ ತೆಗೊಂದುಕೊಂಡಿದ್ದೇವೆ. ಬಾಡಿಗೆ ಬರೋವಂತ ಪ್ರಾಪರ್ಟಿ ಖರೀದಿಸಿದ್ದೇನೆ.
ಕಾಟನ್ ಪೇಟೆಯಲ್ಲಿಯೂ ಒಂದು ಬಿಲ್ಡಿಂಗ್ ಇದೆ. ಅದನ್ನೂ ಬಾಡಿಗೆ ಬರೋತರ ಮಾಡಿಕೊಂಡಿದ್ದೇನೆ. ಸೇಫ್ ಆಗಿರಬೇಕು ಎಂದುಕೊಂಡು ಮನೆ ಮಾರಿದ್ದೇನೆಯೇ ಹೊರತು. ಹಾಳು ಮಾಡಲು ಮನೆ ಮಾರಿಲ್ಲ. ಹಳೆಯ ಕಾರ್ ಅಪಘಾತ ಆಗಿತ್ತು. ಅಕ್ಕನ ಮದುವೆ ಸಮಯದಲ್ಲಿ ಒಂದು ಕಾರು ತೆಗೆದುಕೊಂಡೆ. ಬೇರೆಯವರು ಮಾತನಾಡಿಕೊಳ್ಳಬಹುದು. ಶೋಕಿಗೋಸ್ಕರ ಮನೆ ಮಾಡಿಕೊಂಡ ಅಂತ ಆದರೆ ನನ್ನ ಕಷ್ಟವೇ ಬೇರೆ ಇತ್ತು ಅಂದಿದ್ದಾರೆ.