Rakshak Bullet: ಬಿಗ್ ಬಾಸ್ ಮನೆಯಲ್ಲಿ ರಕ್ಷಕ್ ಬುಲೆಟ್ ಗೆ ಸಿಗುವ ಸಂಭಾವನೆ ಎಷ್ಟು…? ಒಂದು ಎಪಿಸೋಡ್ ಗೆ ಎಷ್ಟು…?
ಬಿಗ್ ಬಾಸ್ ಸ್ಪರ್ಧಿ ರಕ್ಷಕ್ ಬುಲೆಟ್ ಅವರ ಸಂಭಾವನೆ ಕೇಳಿದರೆ ಶಾಕ್, ಒಂದು ದಿನಕ್ಕೆ ಎಷ್ಟು ಹಣ ಸಂಪಾದಿಸುತ್ತಾರೆ ?
Rakshak Bullet Remuneration: ಬಿಗ್ ಬಾಸ್ ಸೀಸನ್ 10 (Bigg Boss Kannada Seaon 10)ಪ್ರಾರಂಭವಾಗಿದು, ಈಗಾಗಲೇ ಹಲವು ಟ್ವೀಸ್ಟ್ ನೊಂದಿಗೆ ಸಂಚಿಕೆಗಳು ಪ್ರಸಾರವಾಗುತ್ತಿದೆ. ಹಲವು ಸೆಲೆಬ್ರೆಟಿಗಳ ಜೊತೆ ಬುಲೆಟ್ ಪ್ರಕಾಶ್ ಅವರ ಮಗ ರಕ್ಷಕ್ ಬುಲೆಟ್ (Rakshak Bullet) ಸಹ ದೊಡ್ಮನೆ ಸೇರಿಕೊಂಡಿದ್ದಾರೆ. ಮೊದಲಿಗೆ ಹೋಲ್ಡ್ನಲ್ಲಿದ್ದ ರಕ್ಷಕ್ ನಂತರ ದೊಡ್ಡ ಮನೆ ಸೇರಿಕೊಂಡಿದ್ದಾರೆ.
ರಕ್ಷಕ್ ಸೇರಿದಂತೆ ಆರು ಮಂದಿಯನ್ನು ಬಿಗ್ ಬಾಸ್ ಅಸಮರ್ಥರು ಅಂತ ಗುರುತಿಸಿದೆ. ಈ ವಾರ ಸಮರ್ಥರಾಗೋಕೆ ಕೆಲ ಟಾಸ್ಕ್ಗಳನ್ನು ನೀಡಿದೆ.ಈ ಹಿಂದೆ ರಕ್ಷಕ್ ಮೇಲೆ ಸಾಕಷ್ಟು ಟ್ರೋಲ್ಗಳಾಗಿದ್ದವು. ಎಷ್ಟೇ ಟ್ರೋಲ್ ಮಾಡಿದ್ರೂ ರೋಸ್ಟ್ ಮಾಡಿದ್ರೂ ನಾನು ತಲೆಕೆಡಿಸಿಕೊಳ್ಳಲ್ಲ ಅಂತ ಬಿಗ್ ಬಾಸ್ ವೇದಿಕೆ ಮೇಲೆ ರಕ್ಷಕ್ ಹೇಳಿದ್ದಾರೆ.
ಬಿಗ್ ಬಾಸ್ ನಲ್ಲಿ ರಕ್ಷಕ್ ಬುಲೆಟ್ ಅವರು ಪಡೆಯುವ ಸಂಭಾವನೆ ಬಗ್ಗೆ ಮಾಹಿತಿ
ಕೆಲವು ನಿರ್ದಿಷ್ಟ ನಿರ್ಬಂಧಗಳೊಂದಿಗೆ ಬಿಗ್ ಬಾಸ್ ಮನೆ ಪ್ರವೇಶ ಪಡೆದ ರಕ್ಷಕ್ ಬುಲೆಟ್ ಅವರ ಸಂಭಾವನೆ ಎಷ್ಟು ಅಂತ ನೆಟ್ಟಿಗರು ಸೋಷಿಯಲ್ ಮೀಡಿಯಾದಲ್ಲಿ ಕೇಳುತ್ತಿದ್ದಾರೆ. ಒಂದು ದಿನಕ್ಕೆ ಎಷ್ಟು ದುಡ್ಡು ಮಾಡ್ತಾರೆ ಅಂತ ಕೇಳ್ತಿದ್ದಾರೆ ಅದಕ್ಕೆ ಉತ್ತರ ಇಲ್ಲಿದೆ.
ಹಲವು ವರದಿಗಳ ಪ್ರಕಾರ ರಕ್ಷಕ್ ಬುಲೆಟ್ ಒಂದು ದಿನಕ್ಕೆ 15 ರಿಂದ 20 ಸಾವಿರ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ. ವಾರಕ್ಕೆ ಒಂದು ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಾರಂತೆ. ಅವರು ಹೆಚ್ಚು ದಿನ ಬಿಗ್ ಬಾಸ್ ನಲ್ಲಿ ಭಾಗವಹಿಸಿದರೆ ಇನ್ನು ಹೆಚ್ಚು ಸಂಪಾದನೆ ಮಾಡಬಹುದು, ಎಷ್ಟು ವಾರ ಆಟ ಆಡುತ್ತಾರೋ ಅಷ್ಟು ಸಂಪಾದನೆ ಮಾಡಬಹುದು.
ಪ್ರಬಲ ಸ್ಪರ್ಧಿಗಳ ಗೇಮ್ ಶುರು
ಬಿಗ್ ಬಾಸ್ ನಲ್ಲಿ ಪ್ರತಿ ಸ್ಪರ್ಧಿಯು ಕೂಡ ಗೆಲ್ಲುವ ಹಟದಿಂದ ಬಂದಿರುತ್ತಾರೆ. ತಮ್ಮನ್ನು ತಾವು ಸಮರ್ಥಿಸಿಕೊಳ್ಳುವುದರಿಂದ ಹಿಡಿದು, ಹಲವು ಆಟಗಳನ್ನು ಗೆದ್ದು ಬಿಗ್ ಮನೆಯಲ್ಲಿ ಉಳಿದುಕೊಳ್ಳಬೇಕಾಗುತ್ತದೆ. ಪ್ರತಿ ಸ್ಪರ್ಧಿಗಳಿಗೂ ಇಂತಿಷ್ಟು ಅಂತ ಸಂಭಾವನೆ ಇರುತ್ತದೆ .ಎಷ್ಟು ವಾರ ಬಿಗ್ ಬಾಸ್ ಮನೆಯಲ್ಲಿ ಇರುತ್ತಾರೋ ಅದರ ಆಧಾರದ ಮೇಲೆ ಇವರ ಸಂಭಾವನೆ ನಿಗದಿ ಪಡಿಸಲಾಗುತ್ತದೆ. ಇದರ ಬಗ್ಗೆ ಸ್ಪಷ್ಟ ಮಾಹಿತಿ ಇರುವುದಿಲ್ಲ ಎನ್ನಬಹುದು.