Ram Charan: ವರುಣ್ ತೇಜ್ ಮದುವೆಯಲ್ಲಿ ರಾಮ್ ಚರಣ್ ಧರಿಸಿದ್ದ ವಾಚ್ ಬೆಲೆ ಎಷ್ಟು ಗೊತ್ತೆ..? ದುಬಾರಿ ವಾಚ್.

ವರುಣ್ ತೇಜ್ ಮದುವೆಯಲ್ಲಿ ದುಬಾರಿ ಬೆಲೆಯಲ್ಲಿ ವಾಚ್ ಧರಿಸಿದ ನಟ ರಾಮ್ ಚರಣ್.

Ram Charan Watch Price: ನಟ ವರುಣ್ ತೇಜ್ (Varun Tej) ಮದುವೆ ಇಟಲಿಯಲ್ಲಿ ಬಹಳ ಭರ್ಜರಿ ಆಗಿ ನೆರೆವೇರಿತು. ಇವರ ಮದುವೆ ಕಾರ್ಯಕ್ರಮದಲ್ಲಿ ಕುಟುಂಬದವರು ಹಾಗು ಸ್ನೇಹಿತರು ಭಾಗಿ ಆಗಿದ್ದರು. ರಾಮ ಚರಣ್ (Ram Charan) ಫ್ಯಾಮಿಲಿ ಹಾಗು ಅಲ್ಲೂ ಫ್ಯಾಮಿಲಿ ಯವರ ಉಪಸ್ಥಿತಿ ಇನ್ನು ಸುಂದರವೆನಿಸಿತು. ಮೆಗಾ ಹೀರೊ ರಾಮ್ ಚರಣ್ ತನ್ನ ಕಿರಿಯ ಸಹೋದರನ ಮದುವೆಯಲ್ಲಿ ತನ್ನ ಕಾಸ್ಟ್ಯೂಮ್(Costume) ಮೂಲಕ ಇನ್ನಷ್ಟು ಮಿಂಚಿದರು.

ಇವರ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ . ಈಗಾಗಲೇ ವರುಣ್ ತೇಜ್ ಅವರ ಮದುವೆ ಫೋಟೋಸ್ ಹಾಗು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅಭಿಮಾನಿಗಳು ಪ್ರತಿಯೊಬ್ಬರ ಬಗೆಯು ಕಾಮೆಂಟ್ಸ್ ಮಾಡುತ್ತಾ, ಮದುವೆಯ ಸಂಭ್ರಮದ ಖುಷಿಯಲ್ಲಿ ಭಾಗಿಯಾಗಿದ್ದಾರೆ.                                                                                                                                                     

Ram Charan Watch Price
Image Credit: Apizeenews                    

ರಾಮ್ ಚರಣ್ ಸ್ಟೈಲ್ ಅಂಡ್ ಲುಕ್

ರಾಮ್ ಚರಣ್ ಅವರು ಹಿಟ್ ಮೇಲೆ ಹಿಟ್ ಸಿನಿಮಾಗಳನ್ನು ನೀಡಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ರಾಜಮೌಳಿ ನಿರ್ದೇಶನದ RRR ಚಿತ್ರದ ನಂತರ ರಾಮ್ ಚರಣ್ ಇನ್ನಷ್ಟು ಜನಪ್ರಿಯತೆಯನ್ನು ಗಳಿಸಿದರು. ಮೊನ್ನೆ ನಡೆದ ತನ್ನ ಸಹೋದರನಾದ ವರುಣ್ ತೇಜ್ ಅವರ ಮದುವೆ ಕಾರ್ಯಕ್ರಮಕ್ಕೆ ಕುಟುಂಬ ಸಮೇತ ಇಟಲಿಗೆ ಹೋದ ರಾಮ್ ಚರಣ್ ಮದುವೆಯ ಸಂಭ್ರಮದಲ್ಲಿ ಭಾಗವಹಿಸಿದರು.

ಮದುವೆಯಲ್ಲಿ ಬಹಳ ಸುಂದರವಾಗಿ ಕಾಣುತಿದ್ದ ನಟ ರಾಮ್ ಚರಣ್ ಅವರ ಡ್ರೆಸ್ಸಿಂಗ್ ತುಂಬ ಚೆನ್ನಾಗಿದ್ದು, ಬಹಳ ದುಬಾರಿ ಬಟ್ಟೆಯನ್ನು ಧರಿಸಿದರು ಅಷ್ಟೇ ಅಲ್ಲದೆ ಅವರ ಕೈಯಲ್ಲಿದ್ದ ವಾಚ್ ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಬಹಳ ದುಬಾರಿ ವಾಚ್ ಅನ್ನು ಧರಿಸಿದ್ದ ನಟ ರಾಮ್ ಚರಣ್ ಫೋಟೋಗಳಲ್ಲಿ ಮಿಂಚಿದರು.

Ram Charan Latest News
Image Credit: Gulte

ದುಬಾರಿ ವಾಚ್ ಧರಿಸಿದ್ದ ನಟ ರಾಮ್ ಚರಣ್

ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ ಮದುವೆ ಬುಧವಾರ ಇಟಲಿಯ ಟಸ್ಕನಿಯಲ್ಲಿ ನಡೆಯಿತು. ಈ ಮದುವೆ ಸಮಾರಂಭದಲ್ಲಿ ಎಲ್ಲ ಫೋಟೋಗಳಿಗಿಂತ ಪವನ್ ಕಲ್ಯಾಣ್ ಜೊತೆ ರಾಮ್ ಚರಣ್ ತೆಗೆಸಿಕೊಂಡಿರುವ ಫೋಟೋ ಅತ್ಯಂತ ಆಕರ್ಷಕವಾಗಿದೆ. ಚಿಕ್ಕಪ್ಪನ ಜೊತೆ ರಾಮ್‌ ಚರಣ್ ನಗುತ್ತ ಕ್ಯಾಮರಾಗೆ ಪೋಸ್‌ ನೀಡಿದ್ದು , ಇವರಿಬ್ಬರೂ ಒಟ್ಟಿಗೆ ಇರುವ ಚಿತ್ರಗಳು ತೀರಾ ಕಡಿಮೆ ಎನ್ನಲಾಗಿದೆ , ಆ ಚಿತ್ರದಲ್ಲಿ ಹೆಚ್ಚಾಗಿ ಗಮನಸೆಳೆದಿದ್ದು ಮಾತ್ರ ರಾಮ್ ಚರಣ್ ಧರಿಸಿದ್ದ ವಾಚ್.

ರಾಮ್ ಚರಣ್ ಧರಿಸಿರುವ ವಾಚ್ ಪೆಟಕ್ ಫಿಲಿಪ್ ಮಾಡೆಲ್ ಆಗಿದೆ. ಇದರ ಬೆಲೆ 2,85,000 ಡಾಲರ್. ಅಂದರೆ ನಮ್ಮ ಭಾರತೀಯ ಕರೆನ್ಸಿ ಪ್ರಕಾರ 2 ಕೋಟಿ 85 ಲಕ್ಷಗಳು ಆಗಿರುತ್ತದೆ. ಒಟ್ಟಾರೆಯಾಗಿ ಎಲ್ಲಾ ನಟರು ಹಾಗು ಕುಟುಂಬದವರು ಒಟ್ಟಿಗೆ ಸೇರಿ ಭರ್ಜರಿ ಮದುವೆ ಕಾರ್ಯಕ್ರಮವನ್ನು ಚಂದಗಾಣಿಸಿದ್ದಾರೆ.

Leave A Reply

Your email address will not be published.