Rahu-Ketu: ಬರೋಬ್ಬರಿ 1 ವರ್ಷ ಈ ರಾಶಿಯವರಿಗೆ ರಾಹು-ಕೇತು ಕಾಟ, ಕಷ್ಟ ಕಟ್ಟಿಟ್ಟಬುತ್ತಿ

ಈ ಒಂದು ವರ್ಷ ಈ ರಾಶಿಯವರು ರಾಹು-ಕೇತು ಕಾಟ, ಹಲವು ಕಷ್ಟಗಳನ್ನ ಅನುಭವಿಸಬೇಕಾಗುತ್ತದೆ.

Rashi Prediction: ಜ್ಯೋತಿಷ್ಯದಲ್ಲಿ ಹಲವು ರೀತಿ ನೀತಿಗಳು ಇರುತ್ತದೆ. ಜಾತಕ ಹೊಂದಿದ ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿಆಗಾಗ ಕಷ್ಟ , ನಷ್ಟ, ಸುಖ, ನೆಮ್ಮದಿಯಾ ಕಾಲ ಅಂತ ಬರುತ್ತಿದೆ.ಹಾಗೆಯೆ ಹಲವು ಸಮಸ್ಯೆಗಳಿಗೆ ಪರಿಹಾರಗಳು ಕೂಡ ಇರುವುದು ಸತ್ಯ.

ರಾಹು-ಕೇತು ಗ್ರಹವನ್ನ ನೆರಳು ಗ್ರಹ ಎನ್ನಲಾಗುತ್ತದೆ. ಈ ಗ್ರಹಗಳು ಯಾವಾಗಲೂ ಹಿಮ್ಮುಖವಾಗಿ ಚಲನೆ ಮಾಡುತ್ತವೆ. ಹಾಗಾಗಿ ಸಾಮಾನ್ಯವಾಗಿ ಈ ಗ್ರಹಗಳ ಕಾರಣದಿಂದ ಜೀವನದಲ್ಲಿ ತೊಂದರೆಗಳನ್ನ ಅನುಭವಿಸಬೇಕಾಗುತ್ತದೆ. ಈ ತಿಂಗಳಲ್ಲಿ ಅಂದರೆ ಅಕ್ಟೋಬರ್ 30 ರಂದು ಈ ರಾಹು ಹಾಗೂ ಕೇತು ತಮ್ಮ ರಾಶಿ ಬದಲಾವಣೆ ಮಾಡುತ್ತಿವೆ.

Virgo Horoscope
Image Credit: Original Source

ಈ ರಾಶಿಯವರು ಈ ವರ್ಷ ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ.

ರಾಹು ಮೇಷವನ್ನು ಬಿಟ್ಟು ಮೀನ ರಾಶಿಗೆ ಪ್ರವೇಶಿಸುತ್ತಾನೆ. ಹಾಗೆಯೇ ಕೇತು ತುಲಾ ರಾಶಿಯಿಂದ ಕನ್ಯಾರಾಶಿಗೆ ಪ್ರವೇಶಿಸುತ್ತಾನೆ ಈ ಗ್ರಹಗಳ ಸಂಚಾರದಿಂದ ಸುಮಾರು ಒಂದು ವರ್ಷ ಅನೇಕ ರಾಶಿಯವರಿಗೆ ಬಹಳ ಸಮಸ್ಯೆಗಳಾಗುತ್ತದೆ. ಅವರ ಜೀವನದಲ್ಲಿ ನೆಮ್ಮದಿ ಎನ್ನುವುದೇ ಇರುವುದಿಲ್ಲ. ಹಾಗಾದ್ರೆ ಯಾವ ರಾಶಿಯವರು 1 ವರ್ಷ ಎಚ್ಚರಿಕೆ ವಹಿಸಬೇಕು ಎಂಬುದು ಇಲ್ಲಿದೆ.

ಕನ್ಯಾ ರಾಶಿಯವರ ಭವಿಷ್ಯ

ರಾಹು ಮತ್ತು ಕೇತುವಿನ ರಾಶಿ ಬದಲಾವಣೆಯು ಯಾವುದೇ ಕೆಲಸ ಮಾಡಲು ಹೋದರೂ ಅದರಲ್ಲಿ ಸಮಸ್ಯೆಗಳನ್ನ ನೀವು ಅನುಭವಿಸಬೇಕಾಗುತ್ತದೆ. ಕನ್ಯಾ ರಾಶಿಯವರ ಜೀವನದಲ್ಲಿ ಕಷ್ಟಗಳನ್ನ ಹೆಚ್ಚು ಮಾಡುತ್ತದೆ. ಹಣಕಾಸಿನ ವಿಚಾರವಾಗಿ ಸಹ ತೊಂದರೆ ಆಗುತ್ತದೆ.

Meen Horoscope
Image Credit: Livehindustan

ಮೀನ ರಾಶಿಯವರ ಭವಿಷ್ಯ

ರಾಹುವಿನ ಕಾರಣದಿಂದ ಮೀನ ರಾಶಿಯವರಿಗೆ ಸಮಸ್ಯೆಗಳಾಗುತ್ತದೆ. ಮಾನಸಿಕ ಒತ್ತಡವನ್ನು ಅನುಭವಿಸುವ ಸಾಧ್ಯತೆ ಹೆಚ್ಚಿದೆ ಎನ್ನಬಹುದು. ಪಾಲುದಾರಿಕೆ ವ್ಯವಹಾರದಲ್ಲಿ ಜಾಗರೂಕರಾಗಿ. ಹಣಕಾಸಿನ ವ್ಯವಹಾರ ಮಾಡಬೇಡಿ.

Leo Horoscope
Image Credit: Aajtak

ಸಿಂಹ ರಾಶಿಯವರ ಭವಿಷ್ಯ

ರಾಹು ಮತ್ತು ಕೇತುವಿನ ರಾಶಿ ಬದಲಾವಣೆಯು ನಿಮ್ಮ ವೈಯಕ್ತಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯಗಳಾಗುತ್ತದೆ. ಸಣ್ಣ ಸಣ್ಣ ವಿಚಾರಕ್ಕೆ ಜಗಳ ಆಗುತ್ತದೆ. ಇದರ ಜೊತೆಗೆ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ.

Scorpio Horoscope
Image Credit: Livehindustan

ವೃಶ್ಚಿಕ ರಾಶಿಯವರ ಭವಿಷ್ಯ

ರಾಹು ಮತ್ತು ಕೇತುವಿನ ರಾಶಿ ಬದಲಾವಣೆಯು ನಿಮ್ಮ ಜೀವನದಲ್ಲಿ ಕಷ್ಟಗಳನ್ನ ಹೆಚ್ಚು ಮಾಡುತ್ತದೆ. ವಿವಾಹಿತರು ವೈವಾಹಿಕ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಖಿನ್ನತೆ ಸಹ ಉಂಟಾಗುವ ಸಾಧ್ಯತೆ ಇದೆ ಎನ್ನಬಹುದು.

Leave A Reply

Your email address will not be published.