Rashmika Mandanna: ಅಸಿಸ್ಟೆಂಟ್ ಮದುವೆಗೆ ಸಿಂಪಲ್ ಸೀರೆಯುಟ್ಟು ಬಂದ ರಶ್ಮಿಕಾ, ನೋಡಲು ಸಿಂಪಲ್ ಆದರೆ ಸಖತ್ ದುಬಾರಿ.
ಅಸಿಸ್ಟೆಂಟ್ ಮದುವೆಗೆ ರಶ್ಮಿಕಾ ಮಂದಣ್ಣ ಧರಿಸಿಕೊಂಡು ಬಂದ ಸೀರೆಯ ಬೆಲೆ ಎಷ್ಟು.
Rashmika Mandanna At Her Assistant Marriage: ನ್ಯಾಷನಲ್ ಕ್ರಶ್ (National Crush) ಎಂದು ಪ್ರಖ್ಯಾತಿ ಹೊಂದಿರುವ ರಶ್ಮಿಕಾ ಮಂದಣ್ಣ (Rashmika Mandanna) ಯಾರಿಗೆ ಗೊತ್ತಿಲ್ಲ ಹೇಳಿ, ಯಾವಾಗಲು ಕಾಂಟ್ರವರ್ಸಿಯಲ್ಲಿ ಇರುವ ಇವರು ಹೈದರಾಬಾದ್ನಲ್ಲಿ ತಮ್ಮ ಅಸಿಸ್ಟೆಂಟ್ ಆಗಿರುವ ಸಾಯಿ (Sai) ಮದುವೆಯಲ್ಲಿ ಕಾಣಿಸಿಕೊಂಡರು.
ರಶ್ಮಿಕಾ ಸ್ಟಾರ್ ಹೀರೋಯಿನ್ ಆಗಿದ್ದರು ಕೊಡ ಬಹಳ ಸಿಂಪಲ್ ಆಗಿ ಮದುವೆಯಲ್ಲಿ ಕಾಣಿಸಿಕೊಂಡಿದ್ದು, ಸಿಂಪಲ್ ಆಗಿ ಮಿಂಚಿದ್ದಾರೆ. ವಿವಾಹ ಸಮಾರಂಭದ ವಿಡಿಯೋಗಳು ವೈರಲ್ ಆಗಿದ್ದು. ಈ ಸಮಾರಂಭದಲ್ಲಿ ರಶ್ಮಿಕಾ ಧರಿಸಿದ್ದ ಸೀರೆ ಕೂಡ ಎಲ್ಲರ ಗಮನಸೆಳೆದಿದೆ.

ರಶ್ಮಿಕಾ ಮಂದಣ್ಣ ರವರ ಸ್ಮಾರ್ಟ್ ಲುಕ್ ಹಾಗು ದುಬಾರಿ ಸೀರೆಯ ಬೆಲೆ
Rashmika Mandanna ತಮ್ಮ ಅಸಿಸ್ಟೆಂಟ್ ಅವರ ಮದುವೆಗೆ ಹಾಜರಾಗಿದ್ದು, ಸಿಂಪಲ್ ಸ್ಯಾರಿ ಧರಿಸಿದ ರಶ್ಮಿಕಾ ಸನ್ ಗ್ಲಾಸ್ ಹಾಕಿ ಫ್ರಿ ಹೇರ್ ಬಿಟ್ಟು ಸಖತ್ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ. ಸಿಂಪಲ್ ಲುಕ್ನಲ್ಲಿ ಕಾಣಿಸಿಕೊಂಡಿರುವುದನ್ನು ಅಭಿಮಾನಿಗಳು ಮೆಚ್ಚಿದ್ದಾರೆ.
ರಶ್ಮಿಕಾ ಧರಿಸಿದ ಆರೆಂಜ್ ಬಣ್ಣದ ಸಿಂಪಲ್ ಸೀರೆ ಮೇಲೆ ಹೆಂಗಳೆಯರ ಕಣ್ಣು ಬಿದ್ದಿದೆ. ಈ ಸೀರೆ ಬೆಲೆ ಎಷ್ಟು ಎಂದು ಹುಡುಕಾಡಿದ್ದಾರೆ. ಆ ಸೀರೆಯ ಬೆಲೆ ಸುಮಾರು 35 ಸಾವಿರ ಇರಲಿದೆಯಂತೆ. ಡಿಸೈನರ್ ಅನಿತಾ ಡೋಂಗ್ರೆ ಮಿಧಾ ವಿನ್ಯಾಸಗೊಳಿಸಿದ ಆರೆಂಜ್ ಕಲರ್ ಸೀರೆಯಲ್ಲಿ ರಶ್ಮಿಕಾ ಕಾಣಿಸಿಕೊಂಡಿದ್ದಾರೆ.

ನವಜೋಡಿಗಳಿಗೆ ಆಶೀರ್ವಾದ ಮಾಡಿದ ರಶ್ಮಿಕಾ ಮಂದಣ್ಣ
ನವ ಜೋಡಿಗೆ ಶುಭಾಶಯ ಹೇಳಲು ಸ್ಟೇಜ್ ಮೇಲೆ ಹೋದಾಗ ರಶ್ಮಿಕಾ ರವರ ಕಾಲಿಗೆ ಬಿದ್ದ ನವಜೋಡಿಗಳು ಅವರಿಂದ ಆಶೀರ್ವಾದ ಪಡೆದರು. ಒಟ್ಟಾರೆಯಾಗಿ Rashmika Mandanna ಸಿಂಪಲ್ ಲುಕ್ ಗೆ ಅಭಿಮಾನಿಗಳು ಫಿದಾ ಆಗಿರುವುದಂತೂ ಖಚಿತ.