Rashmika Mandanna: ಮೊಬೈಲ್ ನಲ್ಲಿ ವಿಜಯ್ ದೇವರಕೊಂಡ ಧ್ವನಿ ಕೇಳಿ ನಾಚಿ ನೀರಾದ ರಶ್ಮಿಕಾ, ವಿಡಿಯೋ ವೈರಲ್.
ಟಿವಿ ಶೋ ನಡೆಯುತ್ತಿದ್ದ ಮಧ್ಯೆದಲ್ಲೇ ನಟ ವಿಜಯ್ ದೇವರಗೊಂಡಗೆ ಕರೆ ಮಾಡಿದ ನಟಿ ರಶ್ಮಿಕಾ ಮಂದಣ್ಣ, ನಟನ ಮಾತಿಗೆ ನಟಿ ನಾಚಿ ನೀರಾಗಿದ್ದಾರೆ
Rashmika Mandanna Phone Call To Vijay Deverakonda : ಬಹುಭಾಷಾ ನಟಿ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna)ಆಗಾಗ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಲ್ಲಿರುವುದು ನಾವು ಕಾಣುತ್ತೇವೆ. ಈಕೆ ಈಗ ಸದ್ಯಕ್ಕೆ ಸಿನಿಮಾ ಕೆಲಸದಲ್ಲಿ ಬ್ಯುಸಿ ಆಗಿದ್ದು, ಪುಷ್ಪ 2 ಸಿನಿಮಾದ ಕೆಲಸ ಮುಗಿಸಿದ್ದಾರೆ ಎನ್ನಲಾಗಿದೆ.
ಈಗ ನಟಿ ಬಾಲಿವುಡ್ನಲ್ಲಿ ಮೂರನೇ ಸಿನಿಮಾ ಮಾಡಿದ್ದು ಇದರಲ್ಲಿ ರಣಬೀರ್ ಕಪೂರ್ (Ranbir Kapoor) ಜೊತೆ ನಟಿಸಿದ್ದಾರೆ.ಅಷ್ಟೇ ಅಲ್ಲದೆ ಈಗಾಗಲೇ ಹಲವು ಸಿನಿಮಾಗಳಲ್ಲಿ ಆಯ್ಕೆ ಆಗಿದ್ದು, ಇನ್ನಷ್ಟು ಸಿನಿಮಾ ಇವರ ಕೈ ಸೇರಿದೆ ಎನ್ನಲಾಗಿದೆ. ಈಗ ಸದ್ಯಕ್ಕೆ ಎಲ್ಲಾ ಕಡೆ ರಣಬೀರ್ ಕಪೂರ್ ಜೊತೆ ರಶ್ಮಿಕಾ ಮಂದಣ್ಣ ಕಾಣುತ್ತಿದ್ದಾರೆ.

ಟಿವಿ ಷೋ ನಲ್ಲಿ ಕಾಣಿಸಿಕೊಂಡ ನಟಿ ನಾಚಿದ್ದೇಕೆ?
ನಟಿ ರಶ್ಮಿಕಾ ಮಂದಣ್ಣ ಅವರು ತಮ್ಮ ಸಿನಿಮಾ ಪ್ರಚಾರಕ್ಕಾಗಿ ರಣಬೀರ್ ಕಪೂರ್ ಜೊತೆ ತೆಲುಗಿನ ಹಿರಿಯ ನಟ ಬಾಲಯ್ಯ ಅವರು ನಡೆಸಿಕೊಡುವ ಅನ್ಸ್ಟಾಪೆಬಲ್ ವಿತ್ ಎನ್ಬಿಕೆ ಶೋನಲ್ಲಿ ಭಾಗವಹಿಸಿದ್ದರು. ಬಾಲಯ್ಯ ಅವರು ಅತಿಥಿಯಾಗಿ ಬಂದಿದ್ದ ರಶ್ಮಿಕಾಗೆ ವಿಜಯ್ ದೇವರಕೊಂಡ ವಿಚಾರವಾಗಿ ರೇಗಿಸಿದ್ದು ನಟಿ ಫುಲ್ ನಾಚಿಕೊಂಡಿದ್ದಾರೆ.
ಆಹಾ ಯೂಟ್ಯೂಬ್ ಚಾನೆಲ್ ಈ ಒಂದು ಶೋನ ಪ್ರೋಮೋ ಶೇರ್ ಮಾಡಿದೆ.ಈ ಸಂದರ್ಭದಲ್ಲಿ ವಿಶೇಷವಾದ ಒಂದು ಘಟನೆ ನಡೆದಿದೆ. ಇನ್ನು ನಟಿಯಲ್ಲಿ ಇಬ್ಬರಲ್ಲಿ ಒಬ್ಬರನ್ನು ಚೂಸ್ ಮಾಡಿ ಎಂದೂ ಕೇಳಲಾಗಿದೆ. ಇದರಲ್ಲಿ ವಿಜಯ್ ದೇವರಕೊಂಡ ಆಪ್ಶನ್ ಇತ್ತು. ಆ ಸಂದರ್ಭದಲ್ಲಿಯೂ ನಟಿ ನಾಚಿಕೊಂಡಿದ್ದಾರೆ.

ಶೋ ನಡೆಯುವಾಗಲೇ ನಟ ವಿಜಯ್ ದೇವರಕೊಂಡಗೆ ಕಾಲ್ ಮಾಡಿದ ರಶ್ಮಿಕಾ ಮಂದಣ್ಣ
ಬಾಲಯ್ಯ ಅವರು ನಟಿ ರಶ್ಮಿಕಾ ಮಂದಣ್ಣ ಬಳಿ ನಟ ವಿಜಯ್ ದೇವರಕೊಂಡಗೆ ಕಾಲ್ ಮಾಡುವಂತೆ ಹೇಳಿದ್ದಾರೆ ಆ ಸಂದರ್ಭದಲ್ಲಿ ರಶ್ಮಿಕಾ ಮೊಬೈಲ್ನಿಂದ ವಿಜಯ್ ದೇವರಕೊಂಡಗೆ ಕಾಲ್ ಮಾಡಲಾಗಿದೆ. ಈ ಸಂದರ್ಭ ವಿಜಯ್ ದೇವರಕೊಂಡ ವಾಟ್ಸಪ್ ಎಂದು ಕೇಳಿದ್ದಾರೆ.
ರಶ್ಮಿಕಾ ಅವರು ವಿಜಯ್ ದೇವರಕೊಂಡ ಧ್ವನಿ ಕೇಳುತ್ತಿದ್ದಂತೆ ಕೊಟ್ಟ ರಿಯಾಕ್ಷನ್ ಸಖತ್ ವೈರಲ್ ಆಗಿದೆ. ನಟಿ ಮೊಬೈಲ್ ಕೈಯಲ್ಲಿ ಹಿಡಿದುಕೊಂಡು ನಾಚಿಕೊಂಡಿದ್ದಾರೆ. ಈಗಾಗಲೇ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಅವರ ಸಂಬಂಧದ ಬಗ್ಗೆ ಅನುಮಾನಗಳಿದ್ದು, ರಶ್ಮಿಕಾ ಅವರ ನಾಚಿಕೆ ನೋಡಿದರೆ ಇವರಿಬ್ಬರು ಇನ್ನಷ್ಟು ಕ್ಲೋಸ್ ಆಗಿದ್ದಾರೆ ಎನ್ನಬಹದು.