Ration Card Delete: ಇಂತಹ ಕುಟುಂಬಗಳ BPL ಮತ್ತು ಅಂತ್ಯೋದಯ ರೇಷನ್ ಕಾರ್ಡ್ ರದ್ದು, ಸರ್ಕಾರದ ಇನ್ನೊಂದು ಆದೇಶ.

ಇಂತಹ ಕುಟುಂಬಗಳ ರೇಷನ್ ಕಾರ್ಡ್ ರದ್ದು ಮಾಡಲು ತೀರ್ಮಾನ ಮಾಡಿದ ಕರ್ನಾಟಕ ಸರ್ಕಾರ.

Ration Card Delete Updates: ರಾಜ್ಯದಲ್ಲಿ ಹಲವು ಜನ ಸಾಮಾನ್ಯರು ನಮಗೆ ಪಡಿತರ ಚೀಟಿಯೇ ಇಲ್ಲ ಎಂದು ಚಿಂತೆ ಮಾಡುತ್ತಿದ್ದರೆ, ಇನ್ನು ಹಲವರು ಪಡಿತರ ಚೀಟಿ ಇದ್ದರು ಸಹ ಅದರಿಂದ ಯಾವುದೇ ಪ್ರಯೋಜನ ಪಡೆಯುತ್ತಿಲ್ಲ . ವರದಿಗಳ ಪ್ರಕಾರ ಆರು ತಿಂಗಳಿಂದ ಪಡಿತರ ಪಡೆಯದೇ ಇರುವ 3.26 ಲಕ್ಷಕ್ಕೂ ಅಧಿಕ ಪಡಿತರ ಕಾರ್ಡ್‌ಗಳು ಪತ್ತೆಯಾಗಿವೆ ಎನ್ನಲಾಗಿದೆ.

ಹಾಗಾಗಿ ಸರಕಾರ ಒಂದು ಮಹತ್ವದ ತೀರ್ಮಾನವನ್ನು ತೆಗೆದುಕೊಂಡಿದೆ . ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮೇಲೆ 05 ಗ್ಯಾರೆಂಟಿ ಯೋಜನೆಯಲ್ಲಿ 4 ಯೋಜನೆ ಈಗಾಗಲೇ ಜಾರಿಗೆ ಬಂದಿದ್ದು, ಅದರಲ್ಲಿ ಗ್ರಹಾಲಕ್ಷ್ಮಿ ಯೋಜನೆ ಹಾಗು ಅನ್ನಭಾಗ್ಯ ಯೋಜನೆ ಪಡಿತರ ಚೀಟಿಗೆ ಸಂಬಂಧ ಪಟ್ಟಿದ್ದಾಗಿದೆ.

Ration Card Delete
Image Credit: TV9telugu

ರಾಜ್ಯ ಸರ್ಕಾರದಿಂದ ಪಡಿತರ ಚೀಟಿ ರದ್ದತಿಗೆ ಆದೇಶ

ಪಡಿತರ ಕಾರ್ಡ್‌ (Ration Card) ಬಿಪಿಎಲ್‌ ಅಥವಾ ಅಂತ್ಯೋದಯ ಕಾರ್ಡ್‌ (BPL or Antyodaya Card) ಅನ್ನು ಹೊಂದಿದ್ದರೂ ಕಳೆದ ಆರು ತಿಂಗಳಿಂದ ಯಾರು ಪಡಿತರವನ್ನು ಪಡೆದುಕೊಂಡಿಲ್ಲವೋ ಅಂಥವರ ಕಾರ್ಡ್‌ಗಳನ್ನು ರದ್ದು ಪಡಿಸಲು ಸರ್ಕಾರ ಮುಂದಾಗಿದೆ. ರಾಜ್ಯದಲ್ಲಿ ಅಂತ್ಯೋದಯ, ಪಿಎಚ್​ಎಚ್ ಹಾಗೂ ಎನ್‌ಪಿಎಚ್‌ಎಚ್‌ ಸೇರಿ ಒಟ್ಟು 52,34,148 ಕಾರ್ಡ್‌ಗಳಿವೆ. ಈ ಕಾರ್ಡ್‌ನಲ್ಲಿ 1,52,79,343 ಫಲಾನುಭವಿಗಳಿದ್ದಾರೆ. ರಾಜ್ಯದಲ್ಲಿ 1,27,82,893 ಬಿಪಿಎಲ್​ ಕಾರ್ಡ್​ಗಳಿದ್ದು, ಇದರಡಿ 4,37,65,128 ಫಲಾನುಭವಿಗಳಿದ್ದಾರೆ. ಈ ಎರಡೂ ವಿಭಾಗದಲ್ಲಿ 3.26 ಲಕ್ಷ ಕಾರ್ಡ್‌ಗಳನ್ನು ಅಮಾನತು ಮಾಡಲು ಸರ್ಕಾರ ಮುಂದಾಗಿದೆ ಎಂದು ಹೇಳಲಾಗುತ್ತಿದೆ.

ಪಡಿತರ ಚೀಟಿ ರದ್ದಾದರೆ ಅನ್ನಭಾಗ್ಯ ಹಾಗು ಗ್ರಹಾಲಕ್ಷ್ಮಿಯೋಜನೆ ಹಣ ರದ್ದು

ಅನ್ನಭಾಗ್ಯ ಹಾಗು ಗ್ರಹಾಲಕ್ಷ್ಮಿ ಯೋಜನೆ ಇವೆರಡಕ್ಕೂ ಒಂದು ಲಿಂಕ್ ಇದೆ. ಹೇಗೆಂದರೆ ಇವೆರಡು ಯೋಜನೆಗೂ ಪಡಿತರ ಚೀಟಿ ಅವಶ್ಯಕ ಇದ್ದು, ಅನ್ನಭಾಗ್ಯ ಯೋಜನೆಯ ಲಾಭ ಪಡೆಯದೇ ಇರುವ ಪಡಿತರ ಚೀಟಿ ಅನ್ನು ರದ್ದು ಮಾಡಿದರೆ ಅವರಿಗೆ ಗ್ರಹಾಲಕ್ಷ್ಮಿ ಹಣ ಕೂಡ ಬರುವುದಿಲ್ಲ. ಮತ್ತೆ ಹೊಸ ಪಡಿತರ ಚೀಟಿ ಗೆ ಅರ್ಜಿ ಹಾಕಿ ಪಡಿತರ ಪಡೆಯುವ ತನಕ ಹಲವು ತಿಂಗಳುಗಳೇ ಕಳೆಯುತ್ತದೆ.

Ration Card Delete Updates
Image Credit: Original Source

ಪಡಿತರ ರದ್ದು ಮಾಡುವುದರಿಂದ ರಾಜ್ಯಕ್ಕೆ ಸಿಕ್ಕಾಪಟ್ಟೆ ಲಾಭ ಆಗುತ್ತದೆ

ಈಗಾಗಲೇ ಸರಕಾರ ಹಲವು ಯೋಜನೆಯಿಂದ ಆರ್ಥಿಕ ಸಂಕಷ್ಟ ಅನುಭವಿಸುತ್ತಿದೆ. ಹಾಗಾಗಿ ಯಾವ ಕಡೆಯಿಂದ ಲಾಭ ಮಾಡಿಕೊಳ್ಳುವುದು ಎಂದು ಕಾಯುತ್ತಿರುವ ಸರ್ಕಾರ ಹೊಸ ಪ್ಲಾನ್ ಒಂದನ್ನು ಮಾಡಿಕೊಂಡಿದ್ದೆ.

ಹಲವು ತಿಂಗಳಿನಿಂದ ಪಡಿತರ ಪಡೆಯದ ರೇಷನ್ ಕಾರ್ಡ್ ಅನ್ನು ರದ್ದು ಮಾಡಿ ಅನ್ನಭಾಗ್ಯ ಯೋಜನೆಯಲ್ಲಿ ಹಣವನ್ನು ಉಳಿಸುವ ಪ್ಲಾನ್ ಮಾಡಿದೆ ಅಷ್ಟೇ ಅಲ್ಲದೆ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆಯುವ ಹಾಗೆ ಪಡಿತರ ರದ್ದಾದ ಎಲ್ಲಾ ಕುಟುಂಬಕ್ಕೂ ಗ್ರಹಾಲಕ್ಹ್ಮೀ ಕೂಡ ರದ್ದಾಗುತ್ತದೆ ಯಾಕೆಂದರೆ ಪಡಿತರ ಚೀಟಿ ಇಲ್ಲದ ಕುಟುಂಬ ಗ್ರಹಾಲಕ್ಷ್ಮಿ ಪಡೆಯಲು ಅರ್ಹ ಆಗಿರುವುದಿಲ್ಲ. ಅನ್ನಭಾಗ್ಯ ಹಾಗು ಗ್ರಹ ಲಕ್ಷ್ಮಿಯ ಎರಡು ಹಣವನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಸರಕಾರ ಶ್ರಮಿಸುತ್ತಿದೆ.

Leave A Reply

Your email address will not be published.