Ration Card Cancel: ರಾತ್ರೋರಾತ್ರಿ BPL ಕಾರ್ಡ್ ಇದ್ದವರಿಗೆ ಹೊಸ ನಿಯಮ, 31 ರೊಳಗೆ ಈ ಕೆಲಸ ಮಾಡದಿದ್ದರೆ ಕಾರ್ಡ್ ರದ್ದು.

ಇಂತಹ ಕುಟುಂಬಗಳ ರೇಷನ್ ಕಾರ್ಡ್ ರದ್ದು ಮಾಡಲು ನಿರ್ಧಾರ ಮಡಿದ ಸರ್ಕಾರ.

Ration Card E- KYC Latest Update: ಕಾಂಗ್ರೆಸ್ ನ ಉಚಿತ ಗ್ಯಾರಂಟಿ ಯೋಜನೆಗಳು ಜಾರಿಯಾದಾಗಿನಿಂದ ಪಡಿತರ ಚೀಟಿ ಮೇಲಿನ ಬೇಡಿಕೆ ಹೆಚ್ಚುತ್ತಿದೆ. ಸರ್ಕಾರ ಬಿಪಿಎಲ್ ರೇಷನ್ ಕಾರ್ಡ್ (Ration Card) ದಾರರಿಗೆ ಸಾಕಷ್ಟು ಸೌಲಭ್ಯವನ್ನು ನೀಡುತ್ತಿದೆ. ಈ ನಿಟ್ಟಿನಲ್ಲಿ ಎಲ್ಲರು ಬಿಪಿಎಲ್ ಕಾರ್ಡ್ ಪಡೆಯಲು ಬಯಸುತ್ತಿದ್ದಾರೆ.ಇಗಲೇ ಹೊಸ ರೇಷನ್ ಕಾರ್ಡ್ ಗೆ ಲಕ್ಷಾಂತರ ಜನರು ಅರ್ಜಿ ಸಲ್ಲಿಸಿದ್ದಾರೆ. 

ರೇಷನ್ ಕಾರ್ಡ್ ನಿಂದಾಗಿ ಹೆಚ್ಚುತ್ತಿರುವ ವಂಚನೆಯನ್ನು ತಡೆಗಟ್ಟಲು ಇದೀಗ ಸರ್ಕಾರ ಪ್ರಮುಖ ನಿರ್ಧಾರವನ್ನು ಕೈಗೊಂಡಿದೆ. ಆಧಾರ್ ಕಾರ್ಡ್ ಇದೀಗ ಪ್ರಮುಖ ದಾಖಲೆಯಾಗಿದೆ. ಆಧಾರ್ ಜೊತೆ ಇನ್ನಿತರ ವೈಯಕ್ತಿಕ ದಾಖಲೆಯನ್ನು ಲಿಂಕ್ ಮಾಡಲು ಸರ್ಕಾರ ಈಗಾಗಲೇ ಆದೇಶ ನೀಡಿದೆ. ಇನ್ನು ಇತ್ತೀಚಿಗೆ ರೇಷನ್ ಕಾರ್ಡ್ ಜೊತೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಲು ಕೇಂದ್ರ ಸರ್ಕಾರದಿಂದ ಮಾಹಿತಿ ಹೊರ ಬಿದ್ದಿದೆ. ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಸುದ್ದಿ ವೈರಲ್ ಆಗುತ್ತಿದೆ.

Ration Card E- KYC Latest Update
Image Credit: Thehindu

ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವವರಿಗೆ ಹೊಸ ನಿಯಮ
ಕಾಂಗ್ರೆಸ್ ಸರ್ಕಾರದ ಅನ್ನಭಾಗ್ಯ ಯೋಜನೆಯಲ್ಲಿ ಪ್ರತಿ ವ್ಯಕ್ತಿಗೆ ಹತ್ತು ಕೆಜಿ ಅಕ್ಕಿ ನೀಡುವುದಾಗಿ ಘೋಷಣೆ ಮಾಡಲಾಗಿತ್ತು. ಅಕ್ಕಿ ಸರಬರಾಜಿನ ಕೊರತೆಯಿಂದಾಗಿ ಅಕ್ಕಿ ಬದಲು ಹಣ ನೀಡುವುದಾಗಿ ಸರ್ಕಾರ ಮಾಹಿತಿ ನೀಡಿದೆ. ಈ ಹಿನ್ನಲೆ ಹೊಸ ರೇಷನ್ ಕಾರ್ಡ್ ಅನ್ನು ಪಡೆಯಲು ಹಲವು ಜನ ಕಾಯುತ್ತಿದ್ದಾರೆ. ಇನ್ನು ಅನರ್ಹ ವ್ಯಕ್ತಿಗಳು ಕೂಡ ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸುತ್ತಿದ್ದಾರೆ. ದೇಶದಲ್ಲಿ ನಡೆಯುತ್ತಿರುವ ಅಕ್ರಮವನ್ನು ತಡೆಯಲು ಸರ್ಕಾರ ರೇಷನ್ ಕಾರ್ಡ್ ಹಾಗು ಆಧಾರ್ ಕಾರ್ಡ್ ಲಿಂಕ್ ಅನ್ನು ಕಡ್ಡಾಯಗೊಳಿಸಿದೆ.

ಸೆಪ್ಟೆಂಬರ್ 31 ರೊಳಗೆ ಈ ಕೆಲಸ ಮಾಡದಿದ್ದರೆ ಕಾರ್ಡ್ ರದ್ದು
ಆಹಾರ ಇಲಾಖೆ ಇದೀಗ ಪಡಿತರ ಚೀಟಿದಾರರಿಗೆ ಮಹತ್ವದ ಮಾಹಿತಿಯೊಂದನ್ನು ನೀಡಿದೆ. ಪಡಿತರ ಚೀಟಿದಾರರು ಈ ಹೊಸ ನಿಯಮವನ್ನು ಪಾಲಿಸಬೇಕಿದೆ. ಪಡಿತರ ಚೀಟಿದಾರರು ಕಡ್ಡಾಯವಾಗಿ ಇ- ಕೆವೈಸಿ ಮಾಡಿಸಬೇಕಿದೆ. ಇ-ಕೆವೈಸಿ ಆಗದೆ ಇರುವ ರೇಷನ್ ಕಾರ್ಡ್ ಗಳ ವಿರುದ್ಧ ಇಲಾಖೆ ಕಠಿಣ ಕ್ರಮ ಕೈಗೊಳ್ಳಲಿದೆ. ನಿಮ್ಮ ರೇಷನ್ ಕಾರ್ಡ್ ಗೆ ಇ- ಕೆವೈಸಿ ಮಾಡದಿದ್ದರೆ ರೇಷನ್ ಕಾರ್ಡ್ ನಲ್ಲಿನ ಇರುವ ನಿಮ್ಮ ಹೆಸರು ರದ್ದಾಗಲಿದೆ.

New rule for BPL ration card holders
Image Credit: Asianetnews

ಇ – ಕೆವೈಸಿ ಕಡ್ಡಾಯಗೊಳಿಸಿದ ಆಹಾರ ಇಲಾಖೆ
ಆಹಾರ ಇಲಾಖೆ ನೀಡುರುವ ಮಾಹಿತಿಯ ಪ್ರಕಾರ, ನಿಮ್ಮ ಆಧಾರ್ ಕಾರ್ಡ್ ಅನ್ನು ರೇಷನ್ ಕಾರ್ಡ್ ಹಾಗು ಬ್ಯಾಂಕ್ ಖಾತೆಗೆ ಲಿಂಕ್ ಮಾಡಬೇಕು. ಈ ರೀತಿಯಾಗಿ ಮಾಡುದರಿಂದ ನೀವು ಸರ್ಕಾರ ನೀಡುತ್ತಿರುವ ಉಚಿತ ಅಕ್ಕಿಯ ಲಾಭವನ್ನು ಪಡೆಯಬಹದು.

ಪಡಿತರ ಲಾಭದ ಜೊತೆಗೆ ಕಾಂಗ್ರೆಸ್ ಸರ್ಕಾರ ಐದು ಯೋಜನೆಗಳ ಲಾಭಗಳು ಈ ಇ – ಕೆವೈಸಿ ಅಗತ್ಯವಾಗಿದೆ. ಯೋಜನೆಯ ಲಾಭ ಪಡೆಯಲು ನೀವು ಇ – ಕೆವೈಸಿ ಮಾಡಿಸಬೇಕಿದೆ. ಇನ್ನು ಕೂಡ ನೀವು ಇ – ಕೆವೈಸಿ ಮಾಡದಿದ್ದರೆ ಸರ್ಕಾರದ ಎಲ್ಲ ಉಚಿತ ಯೋಜನೆಗಳಿಂದ ವಂಚಿತರಾಗಬೇಕಾಗುತ್ತದೆ.

Leave A Reply

Your email address will not be published.