Ration Card: ಈ ಕೆಲಸ ಮಾಡದಿದ್ದರೆ ರೇಷನ್ ಕಾರ್ಡ್ ಡಿಲೀಟ್, ಅನ್ನಭಾಗ್ಯ ಯೋಜನೆಯ ಬೆನ್ನಲ್ಲೇ ಇನ್ನೊಂದು ಘೋಷಣೆ.
ರೇಷನ್ ಕಾರ್ಡ್ ಬಳಕೆದಾರರಿಗೆ ಆಹಾರ ಇಲಾಖೆಯ ಅಗತ್ಯ ಮಾಹಿತಿ.
Ration Card E-KYC: ದೇಶದಲ್ಲಿ ಸರ್ಕಾರದ ಸೌಲಭ್ಯಗಳನ್ನೂ ಪಡೆಯಲು ರೇಷನ್ ಕಾರ್ಡ್ (Ration Card)ಅತಿ ಮುಖ್ಯವಾಗಿದೆ. ಸರ್ಕಾರ ಬಡತನ ಎದುರಿಸುತ್ತಿರುವ ಕುಟುಂಬಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ BPL ಕಾರ್ಡ್ ಅನ್ನು ಬಡತನ ರೇಖೆಗಿಂತ ಕೆಳಗಿರುವವರಿಗೆ ನೀಡುತ್ತಿದೆ.
ವ್ಯಕ್ತಿಯ ವಾರ್ಷಿಕ ಆದಾಯವನ್ನು ಪರಿಗಣನೆಗೆ ತೆಗೆದುಕೊಂಡು BPL ಕಾರ್ಡ್ ಅನ್ನು ನೀಡಲಾಗುತ್ತದೆ. ಪಡಿತರ ಚೀಟಿ ಇದ್ದರೆ ಸುಲಭವಾಗಿ ಎಲ್ಲ ಸವಲತ್ತು ಗಳನ್ನೂ ಪಡೆಯಬಹುದಾಗಿದೆ. ಇದೀಗ ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಗಳ ಸೌಲಭ್ಯವನ್ನು ಪಡೆಯಲು ಸಹ ರೇಷನ್ ಕಾರ್ಡ್ ಅಗತ್ಯವಾಗಿದೆ.
ಪಡಿತರ ಚೀಟಿದಾರರಿಗೆ ಅಗತ್ಯ ಮಾಹಿತಿ
ಇದೀಗ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯೂ ಪಡಿತರ ಚೀಟಿದಾರರಿಗೆ ಮುಖ್ಯವಾದ ಮಾಹಿತಿಯೊಂದನ್ನು ನೀಡಿದೆ. ಅನೇಕರು ಆಧಾರ್ ಕಾರ್ಡ್ (Aadhar Card) ಅನ್ನು ರೇಷನ್ ಕಾರ್ಡ್ (Ration Card) ಗೆ ಹಾಗೂ ಬ್ಯಾಂಕ್ ಖಾತೆ (Bank Account) ಗೆ ಲಿಂಕ್ ಮಾಡಿಸಿಲ್ಲ ದಯವಿಟ್ಟು ಈ ಕೆಲಸ ಮಾಡಿ.
ಕುಟುಂಬ ಸದಸ್ಯರ ಇ ಕೇವೈಸಿ ಮಾಡದಿರುವುದು ಆಧಾರ್ ಕಾರ್ಡ್ ಮಾಹಿತಿ ತಪ್ಪಾಗಿರುವುದು ಇಂತಹ ಕಾರಣಗಳಿಂದ ಕೆಲವರು ಅನ್ನ ಭಾಗ್ಯ (Anna Bhagya) ಯೋಜನೆ ಹಣದಿಂದ ವಂಚಿತರಾಗುತ್ತಿದ್ದಾರೆ. ಹಾಗಾಗಿ ನೀವು ತಪ್ಪದೆ ಈ ಕೆಲಸವನ್ನು ಮಾಡುವುದು ಉತ್ತಮ.

ಇಂತವರ ಹೆಸರನ್ನು ರೇಷನ್ ಕಾರ್ಡ್ ನಿಂದ ಡಿಲೀಟ್ ಮಾಡಲಾಗುವುದು
ಇದೀಗ ಆಹಾರ ಇಲಾಖೆ ಇ-ಕೇವೈಸಿ (E-KYC )ಮಾಡಿಸದವರ ಹೆಸರನ್ನು ಪಡಿತರ ಚೀಟಿಯಿಂದ ತೆಗೆದು ಹಾಕಲು ಇಲಾಖೆ ನಿರ್ಧರಿಸಿದೆ. ಇ ಕೇವೈಸಿ ಮಾಡಿಸದೇ ಇರುವವರಿಗೆ ಆಗಸ್ಟ್ 31 ಕೊನೆಯ ದಿನಾಂಕವಾಗಿದೆ. ಒಂದುವೇಳೆ ಇ-ಕೆವೈಸಿ ಮಾಡಿಸದೇ ಇದ್ದರೆ ಅಂತವರ ಹೆಸರನ್ನು ಪಡಿತರ ಚೀಟಿಯಿಂದ ತೆಗೆದುಹಾಕುವ ಜೊತೆಗೆ ಆಹಾರಧಾನ್ಯ ಮತ್ತು ಡಿಬಿಟಿ ನಗದು ಸೌಲಭ್ಯವನ್ನು ಸ್ಥಗಿತಗೊಳಿಸುದಾಗಿ ಆಹಾರ ಇಲಾಖೆ ಎಚ್ಚರಿಕೆ ನೀಡಿದೆ.