Price Hike: ದಸರಾ ಹಬ್ಬದ ಖುಷಿಯಲ್ಲಿದ್ದ ಜನರಿಗೆ ಬೇಸರದ ಸುದ್ದಿ, ಅಕ್ಕಿ ಮತ್ತು ಗೋಧಿ ಬೆಲೆಯಲ್ಲಿ ಮತ್ತೆ ಇಷ್ಟು ಏರಿಕೆ.

ದಿನ ಬಳಕೆಯ ಅಕ್ಕಿ ಹಾಗು ಗೋಧಿ ದರದಲ್ಲಿ ಬಾರಿ ಏರಿಕೆ, ಬೇಸರದಲ್ಲಿ ಜನಸಾಮಾನ್ಯರು

Rice And Wheat Price Hike: ದಿನ ಬಳಕೆಯ ವಸ್ತುಗಳು ದಿನದಿಂದ ದಿನಕ್ಕೆ ಬಾರಿ ದುಬಾರಿ ಆಗುತ್ತಿದೆ. ಇವಾಗಂತೂ ಹಬ್ಬದ ಸಂಭ್ರಮ ಎಲ್ಲಾ ದಿನಸಿ ವಸ್ತುಗಳನ್ನು ಖರೀದಿ ಮಾಡಿ ಹಬ್ಬ ಗಳನ್ನೂ ಆಚರಿಸಬೇಕಾಗುತ್ತದೆ.

ಹಲವು ದಿನಗಳ ಹಿಂದೆ ಟೊಮೆಟೊ ಬೆಲೆ ಗಗನಕ್ಕೇ ಏರಿ ಜನ ಟೊಮೆಟೊ ತಿನ್ನದೇ ಇರೋ ಪರಿಸ್ಥಿತಿ ಎದುರಾಗಿತ್ತು. ತದನಂತರ ಹಾಲಿನ ಬೆಲೆ ಹಾಗು ಬೇಳೆ ಬೆಲೆ ಹೆಚ್ಚಾಗಿ ಜನ ಅದಕ್ಕೆ ಹೊಂದಿಕೊಳ್ಳಲು ಕಷ್ಟ ಆಗಿದ್ದು, ಈಗ ಮತ್ತೆ ಅದೇ ಶಾಕ್ ಜನರಿಗೆ ಒತ್ತಡವನ್ನು ಹೆಚ್ಚು ಮಾಡಿದೆ. ಜನತೆಯಲ್ಲಿ ಮತ್ತೆ ಆತಂಕದ ವಾತವಾರಣ ನಿರ್ಮಾಣವಾಗಿದೆ.     

Rice And Wheat Price Hike
Image Credit: Newsonair

ಬೆಲೆ ಏರಿಕೆಯಿಂದ ತತ್ತರಿಸಿದ ಜನ ಸಾಮಾನ್ಯರು

ರಾಜ್ಯದಲ್ಲಿ ಅಕ್ಕಿ ಹಾಗು ಗೋಧಿ ಬಹಳ ಪ್ರಮುಖ ಆಹಾರ ಪದಾರ್ಥವಾಗಿದೆ. ನಮ್ಮಲ್ಲಿ ಅಕ್ಕಿ ಹಾಗು ಗೋಧಿಯನ್ನು ನಾವು ಜಾಸ್ತಿ ಸೇವಿಸುತ್ತೇವೆ. ಅದು ಇಲ್ಲದೆ ಮನೆಯಲ್ಲಿ ಅಡುಗೆಯೇ ಇಲ್ಲ ಅನ್ನಬಹುದು. ನಾವು ದಿನನಿತ್ಯ ಸೇವಿಸುವ ಅಕ್ಕಿ ಹಾಗು ಗೋಧಿ ಬೆಲೆ ಹೆಚ್ಚಾಗಿದ್ದು. ಇನ್ನು ಮುಂದೆ ಏನು ಊಟ ಮಾಡುವುದು ಎಂಬ ಸಮಸ್ಯೆ ಜನ ಸಮಾನ್ಯರಲ್ಲಿ ಮೂಡಿದೆ. ದಿನನಿತ್ಯದ ಆಹಾರ ಪದಾರ್ಥಗಳ ಬೆಲೆ ಈ ರೀತಿಯಾಗಿ ಹೆಚ್ಚಾದ್ದರೆ ಇನ್ನು ಜನ ಸಾಮಾನ್ಯರು ಬದುಕುವುದು ತುಂಬ ಕಷ್ಟ ಎನ್ನಬಹುದು.

Rice And Wheat Price Hike
Image Credit: Theagrotechdaily

ಅಕ್ಕಿ ಹಾಗು ಗೋಧಿ ಬೆಲೆಯಲ್ಲಿ ಬಾರಿ ಏರಿಕೆ

ಈ ನಡುವೆ ಎಲ್ಲಾ ದಿನಸಿ ಸಾಮಗ್ರಿಗಳ ಬೆಲೆ ಏರಿಕೆ ಆಗುತ್ತಿದ್ದು, ಇದಕ್ಕೆ ಮುಖ್ಯ ಕಾರಣ ಮಳೆ ಸಮಸ್ಯೆ ಎನ್ನಲಾಗಿದ್ದು, ಸಮಯಕ್ಕೆ ಸರಿಯಾಗಿ ಮಳೆ ಬಾರದೇ ಹಲವು ಕಡೆಗಳಲ್ಲಿ ಹಾಕಿದ್ದ ಬೆಳೆ ನಾಶವಾಗಿದ್ದು. ಇದು ಅಕ್ಕಿ ಅಲ್ಲದೇ ಇತರೆ ವಸ್ತುಗಳ ಬೆಲೆಯಲ್ಲಿ ಹೆಚ್ಚಳ ವಾಗಲು ಕಾರಣವಾಗಿದೆ ಎನ್ನಲಾಗಿದೆ.

ದಿನ ಬಳಕೆಯ ಅಕ್ಕಿ 25 ಕೆಜಿ ತೂಕದ ಮೂಟೆಯ ಬೆಲೆಯಲ್ಲಿ 1300 ರೂ.ನಿಂದ 1600 ರೂ.ತನಕ ಹೆಚ್ಚಳವಾಗಿದ್ದು, ಅಲ್ಲಿಗೆ ಪ್ರತಿ ಕೆಜಿಗೆ ಮೂರು ರೂ ಹೆಚ್ಚಳ ಆಗಿದೆ. ಗೋಧಿ ಕೂಡ ಕ್ವಿಂಟಾಲ್‌ಗೆ 200 ರಿಂದ 300 ರೂ.ಗೆ ಹೆಚ್ಚಳವಾಗಿದೆ. ಇನ್ನೂ ಇದಲ್ಲದೇ ಕಡ್ಲೆಬೇಳೆ, ತೊಗರಿ, ಉದ್ದು ಸೇರಿದಂತೆ ಇತರೆ ಅಡುಗೆ ಸಾಮಾಗ್ರಿಗಳ ಬೆಲೆಯಲ್ಲಿ ಹೆಚ್ಚಳವಾಗಿದೆ.

Leave A Reply

Your email address will not be published.