Repo Rate: ಗೃಹ ಸಾಲ ಮಾಡಿದವರಿಗೆ RBI ನಿಂದ ಬಹುದೊಡ್ಡ ಘೋಷಣೆ, ರೆಪೋ ದರದ ಕುರಿತಂತೆ ಹೊಸ ನಿರ್ಧಾರ.
ಗೃಹ ಸಾಲ ಹೊಂದಿದವರಿಗೆ ಇಲ್ಲಿದೆ ಬಿಗ್ ನ್ಯೂಸ್, ರೆಪೋ ದರ ಬಗ್ಗೆ ದೊಡ್ಡ ಘೋಷಣೆ.
RBI Governor About Repo Rate: ಭಾರತೀಯ ರಿಸರ್ವ್ ಬ್ಯಾಂಕ್ (RBI) ಆಗಾಗ ಕೆಲವು ನಿಯಮಗಳನ್ನು ಜಾರಿಗೆ ತರುತ್ತದೆ ಅಷ್ಟೇ ಅಲ್ಲದೆ ತನ್ನ ನಿಯಮಗಳಲ್ಲಿ ಅನೇಕ ಬದಲಾವಣೆಯನ್ನು ಸಹಾ ಮಾಡುತ್ತಿರುತ್ತದೆ ಹಾಗೆಯೆ ಗೃಹಸಾಲದ ಕುರಿತು ಕೆಲವು ಬದಲಾವಣೆಯನ್ನು ಮಾಡಿದ್ದೂ ಇದು ಗೃಹಸಾಲ ಮತ್ತು ವಯಕ್ತಿಕ ಸಾಲ ಮಾಡಿದವರ ಸಂತಸಕ್ಕೆ ಕಾರಣವಾಗಿದೆ ಎಂದು ಹೇಳಬಹುದು.
ಹೌದು ರೆಪೋ ದರ ಬಗ್ಗೆ RBI ಮಹತ್ವದ ಘೋಷಣೆಯನ್ನ ಮಾಡಿದ್ದು ಸದ್ಯ RBI ಈ ಘೋಷಣೆ ಬ್ಯಾಂಕಿನಲ್ಲಿ ಸಾಲ ಮಾಡಿದವರ ಸಂತಸಕ್ಕೆ ಕಾರಣವಾಗಿದೆ. ರೆಪೋ ದರದ ಕುರಿತಂತೆ ಈಗ RBI ಮಾಡಿರುವ ಘೋಷಣೆ ಏನೆಂದು ತಿಳಿಯೋಣ.

ರೆಪೋ ದರದಲ್ಲಿನ ಬದಲಾವಣೆಯ ನಿರ್ಧಾರದ ಕುರಿತು ಮಹತ್ವದ ಹೇಳಿಕೆ
ಹಿಂದಿನ ಸಭೆಯಲ್ಲಿ ಅಂದರೆ ಆಗಸ್ಟ್ ತಿಂಗಳಲ್ಲಿ ನೀತಿ ರೆಪೊ ದರವನ್ನು 6.50% ನಲ್ಲಿ ಉಳಿಸಿಕೊಳ್ಳಲು ಎಂಪಿಸಿ ನಿರ್ಧರಿಸಿತು. ವಾಸ್ತವವಾಗಿ ಆಗಸ್ಟ್ ಸೇರಿದಂತೆ ತನ್ನ ಹಿಂದಿನ ಮೂರು ನೀತಿಗಳಲ್ಲಿ, ಸಮಿತಿಯು ಬಡ್ಡಿ ದರಗಳಲ್ಲಿ ಯಥಾಸ್ಥಿತಿಯನ್ನು ಕಾಯ್ದುಕೊಂಡಿದೆ.
ಈ ಬಾರಿಯೂ ರೆಪೊ ದರವನ್ನು ಬದಲಾಯಿಸದೆ ಯಥಾಸ್ಥಿತಿಯನ್ನು ಮುಂದುವರೆಸೋ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗವರ್ನರ್ ಶಕ್ತಿಕಾಂತ್ ದಾಸ್ ಅವರು ನೀತಿ ರೆಪೊ ದರವನ್ನು 6.50% ಕ್ಕೆ ಬದಲಾಯಿಸದೆ ಇರಲು ಕೇಂದ್ರ ಬ್ಯಾಂಕಿನ ಎಂಪಿಸಿ ಸರ್ವಾನುಮತದಿಂದ ನಿರ್ಧರಿಸಿದೆ ಎಂದು ಘೋಷಿಸಿದ್ದಾರೆ.