RBI Rule: ಬ್ಯಾಂಕ್ ಸಾಲ ಮಾಡಿದವರಿಗೆ RBI ನಿಂದ ಸಿಹಿಸುದ್ದಿ, ಜಾರಿಗೆ ಬಂತು ಹೊಸ ನಿಯಮ.
ಬ್ಯಾಂಕ್ ನಲ್ಲಿ ಸಾಲ ಇರುವವರಿಗೆ ದೊಡ್ಡ ರಿಲೀಫ್ ಸಿಕ್ಕಿದೆ, RBI ನಿಂದ ಹೊಸ ನಿಯಮ ಜಾರಿ.
RBI Loan Repayment Rule: ಬ್ಯಾಂಕ್ ಗಳಲ್ಲಿ ಹಾಗು ಹಣಕಾಸು ಸಂಸ್ಥೆಗಳಲ್ಲಿ ಸಾಲ ಮಾಡಿಕೊಂಡವರಿಗೆ ಈ ಮಾಹಿತಿ ಬಹಳ ಖುಷಿ ಕೊಡುತ್ತದೆ ಎನ್ನಬಹುದು. ಇತ್ತೀಚೆಗೆ ಬಾಕಿ ಇರುವ ಸಾಲ ವಸೂಲಾತಿಯ ಕುರಿತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೊಸ ನಿಯಮಗಳನ್ನು ಜಾರಿಗೆ ತಂದಿದೆ.
RBI ಹೇಳಿಕೆ ಪ್ರಕಾರ ಹಣಕಾಸು ಸಂಸ್ಥೆಗಳು ಮತ್ತು ಅವುಗಳ ವಸೂಲಾತಿ ಏಜೆಂಟರು ಸಾಲಗಾರರಿಗೆ ಬೆಳಿಗ್ಗೆ 8 ಗಂಟೆಯ ಮೊದಲು ಮತ್ತು ಸಂಜೆ 7 ಗಂಟೆಯ ನಂತರ ಕರೆ ಮಾಡುವಂತಿಲ್ಲ. ಒಂದೊಮ್ಮೆ ಕರೆ ಮಾಡಿದರೆ ಅದು ಅಪರಾಧ ಎಂದು ಹೇಳಿದೆ.

ಸಾಲ ವಸೂಲಾತಿಯ ಕುರಿತು ಕಠಿಣ ಕ್ರಮ ಕೈಗೊಂಡ RBI
“ಉದ್ದೇಶಿತ ನಿರ್ದೇಶನಗಳ ಮೂಲ ತತ್ವವೆಂದರೆ ಹೊರಗುತ್ತಿಗೆ ವ್ಯವಸ್ಥೆಗಳು ಗ್ರಾಹಕರಿಗೆ ತನ್ನ ಬಾಧ್ಯತೆಗಳನ್ನ ಪೂರೈಸುವ ಸಾಮರ್ಥ್ಯವನ್ನ ಕಡಿಮೆ ಮಾಡುವುದಿಲ್ಲ ಅಥವಾ ಮೇಲ್ವಿಚಾರಣಾ ಪ್ರಾಧಿಕಾರದ ಪರಿಣಾಮಕಾರಿ ಮೇಲ್ವಿಚಾರಣೆಗೆ ಅಡ್ಡಿಯಾಗುವುದಿಲ್ಲ ಎಂದು ಆರ್ಇ ಖಚಿತಪಡಿಸಿಕೊಳ್ಳಬೇಕು” ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೇಳಿದೆ.
ಡೈರೆಕ್ಟ್ ಸೇಲ್ಸ್ ಏಜೆಂಟ್ಸ್ (DSA) / ಡೈರೆಕ್ಟ್ ಮಾರ್ಕೆಟಿಂಗ್ ಏಜೆಂಟ್ಸ್ (DMA) / ರಿಕವರಿ ಏಜೆಂಟ್ಸ್ (ವಾಣಿಜ್ಯ ಬ್ಯಾಂಕುಗಳು, ಸಹಕಾರಿ ಬ್ಯಾಂಕುಗಳು ಮತ್ತು ಎನ್ಬಿಎಫ್ಸಿಗಳಿಗೆ ಅನ್ವಯಿಸುತ್ತದೆ) ಗಾಗಿ ಆರ್ಇಗಳು ಮಂಡಳಿ ಅನುಮೋದಿತ ನೀತಿ ಸಂಹಿತೆಯನ್ನ ಜಾರಿಗೆ ತರಬೇಕು ಎಂದು ಕರಡು ಹೇಳಿದೆ.
ಸಾಲಗಾರರಿಗೆ ಇಂತಹ ಸಮಯದಲ್ಲಿ ಕರೆ ಮಾಡುವಂತಿಲ್ಲ
ಸಾಲ ವಸೂಲಾತಿಗೆ ತರಬೇತಿ ಪಡೆದ ಹಾಗು ತಮ್ಮ ಜವಾಬ್ದಾರಿಗಳನ್ನ ಕಾಳಜಿ ಮತ್ತು ಸೂಕ್ಷ್ಮತೆಯಿಂದ ನಿರ್ವಹಿಸಲು ಸೂಕ್ತರಾದ ಡಿಎಸ್ಎ / ಡಿಎಂಎ / ರಿಕವರಿ ಏಜೆಂಟರನ್ನು ಆರ್ಇಗಳು ಖಚಿತಪಡಿಸಿಕೊಳ್ಳಬೇಕು. ವಿಶೇಷವಾಗಿ ಗ್ರಾಹಕರಿಗೆ ಕರೆ ಮಾಡುವ ಸಮಯದ ನಿಯಮಗಳು ಮತ್ತು ಷರತ್ತುಗಳನ್ನ ತಿಳಿಸುವುದು.ಇದಲ್ಲದೆ, ಆರ್ಇಗಳು ಮತ್ತು ಅವರ ವಸೂಲಾತಿ ಏಜೆಂಟರು ಬೆಳಿಗ್ಗೆ 8:00 ಕ್ಕಿಂತ ಮೊದಲು ಮತ್ತು ಸಂಜೆ 7:00 ರ ನಂತರ ಸಾಲಗಾರ / ಖಾತರಿದಾರನಿಗೆ ಕರೆ ಮಾಡುವುದನ್ನ ನಿಷೇಧಿಸಲಾಗಿದೆ.

ಸಾಲಗಾರರಿಗೆ ಬೆದರಿಕೆ ಹಾಗು ಕಿರುಕುಳ ನೀಡುವಂತಿಲ್ಲ
ಮೊಬೈಲ್ ಅಥವಾ ಸಾಮಾಜಿಕ ಮಾಧ್ಯಮಗಳ ಮೂಲಕ ಅನುಚಿತ ಸಂದೇಶಗಳನ್ನು ಕಳುಹಿಸಬಾರದು, ಬೆದರಿಕೆ ಮತ್ತು ಅನಾಮಧೇಯ ಕರೆಗಳನ್ನ ಮಾಡಬಾರದು, ಸಾಲಗಾರ / ಖಾತರಿದಾರನಿಗೆ ನಿರಂತರವಾಗಿ ಕರೆ ಮಾಡಬಾರದು ಮತ್ತು ಸುಳ್ಳು ಮತ್ತು ದಾರಿತಪ್ಪಿಸುವ ಪ್ರಾತಿನಿಧ್ಯಗಳನ್ನ ನೀಡಬಾರದು. ಆರ್ಇಗಳು ಮತ್ತು ಅವರ ವಸೂಲಾತಿ ಏಜೆಂಟರು ತಮ್ಮ ಸಾಲ ವಸೂಲಾತಿಯಲ್ಲಿ ಸಾಲಗಾರರಿಗೆ ಯಾವುದೇ ಬೆದರಿಕೆ ನೀಡುವುದು, ಕಿರುಕುಳ ನೀಡುವುದು, ಮಾನಸಿಕವಾಗಿ ಹಾಗು ದೈಹಿಕವಾಗಿ ಹಿಂಸೆ ಮಾಡುವುದು ಮಾಡುವಂತಿಲ್ಲ. ಹಾಗು ಸಾಲಗಾರರಿಗೆ ಸಾರ್ವಜನಿಕವಾಗಿ ಅವಮಾನಿಸುವ ಅಥವಾ ಅವರ ಕುಟುಂಬ ಸದಸ್ಯರ ಗೌಪ್ಯತೆಗೆ ತೊಂದರೆ ಆಗುವಂತೆ ಮಾಡುವಂತಿಲ್ಲ ಎಂದು RBI ಹೇಳಿದೆ.