Cheque Book: ಹೆಚ್ಚು ಹೆಚ್ಚು ಚೆಕ್ ಬುಕ್ ಬಳಕೆ ಮಾಡುವವರಿಗೆ RBI ಹೊಸ ನಿರ್ದೇಶನ

Bank Cheque Book Rules: ಈಗ ಎಲ್ಲಾ ಆನ್ಲೈನ್(Online) ಆಗಿರುವುದರಿಂದ ಹೆಚ್ಚಿನ ಜನ ಚೆಕ್ ಬುಕ್(Cheque Book) ಗಳನ್ನು ಬಳಸುವುದಿಲ್ಲ.ಆದರೆ ಹಿಂದಿನ ಕಾಲದಲ್ಲಿ ಚೆಕ್ ಬುಕ್ ಗೆ ಬಾರೀ ಪ್ರಾಮುಖ್ಯತೆ ಇತ್ತು. ಅನೇಕರು ತಾವು ಓಡಾಡುವಾಗ ಚೆಕ್ ಬುಕ್ ಅನ್ನು ಜೊತೆಗೆ ತೆಗೆದುಕೊಂಡು ಹೋಗುತ್ತಿದ್ದರು.ತುರ್ತು ಸಂದರ್ಭಗಳಲ್ಲಿ ಚೆಕ್ ಬುಕ್ ಅನ್ನು ಬರೆದು ಅಕೌಂಟ್ ಇಂದ ಹಣ ತೆಗೆಯುವಂತೆ ಹೇಳುತ್ತಿದ್ದರು.

ಆದರೆ ದೊಡ್ಡ ಮೊತ್ತದ ಹಣವನ್ನು ಬ್ಯಾಂಕಿಗೆ ಕಟ್ಟುವಾಗ ಅಥವಾ ತೆಗೆದುಕೊಳ್ಳುವಾಗ ಚೆಕ್ ಬುಕ್ ಅವಶ್ಯಕ.
ಹಾಗಾಗಿ ಚೆಕ್ಕುಬುಕ್ಕಿಗೆ ಸಹಿ ಹಾಕುವ ಮುನ್ನ ನೀವು ಯಾವ ರೀತಿ ಎಚ್ಚರಿಕೆ ವಹಿಸಬೇಕು ಎಂಬುದನ್ನು ನಾವು ಇಲ್ಲಿ ತಿಳಿಸಲಿದ್ದೇವೆ.
ಚೆಕ್ ಬರೆಯುವ ಸಂದರ್ಭದಲ್ಲಿ ನೀವು ಮಾಡುವಂತಹ ಚಿಕ್ಕ ಪುಟ್ಟ ತಪ್ಪುಗಳು ಕೂಡ ನಿಮಗೆ ಸಾಕಷ್ಟು ದೊಡ್ಡ ಮಟ್ಟದ ನಷ್ಟವನ್ನು ಉಂಟುಮಾಡುತ್ತವೆ ಎಂಬುದನ್ನು ನೀವು ನೆನಪಿನಲ್ಲಿಟ್ಟುಕೊಳ್ಳಬೇಕು..

Cheque Book
Image Source: India Today

ಹಾಗಿದ್ದರೆ ಬನ್ನಿ ಚೆಕ್ ಮೇಲೆ ಸಹಿ ಮಾಡುವ ಮುಂಚೆ ಯಾವೆಲ್ಲ ವಿಚಾರಗಳ ಬಗ್ಗೆ ತಿಳಿದುಕೊಳ್ಳಬೇಕು ಇಲ್ಲವಾದಲ್ಲಿ ಚೆಕ್ ಬೌನ್ಸ(Check Bounce) ಆಗುವ ಸಾಧ್ಯತೆ ಕೂಡ ಹೆಚ್ಚಾಗಿರುತ್ತದೆ.ನಿಮಗೆ ಗೊತ್ತಿರಬಹುದು ಚಿಕ್ ಬೌನ್ಸ್ ಆಗುವುದು ಬಹಳ ದೊಡ್ಡ ಅಪರಾಧ.
ಅದಕ್ಕಾಗಿ ಹೆಚ್ಚಿನ ಮೊತ್ತದ ದಂಡ ತರಬೇಕಾಗುತ್ತದೆ.ನೀವು ಮೊದಲಿಗೆ ಬೇರೆಯವರಿಗೆ ಕೊಡುವ ಹಣದ ಚೆಕ್ಅನ್ನು ಬರೆಯುವಕ್ಕಿಂತ ಮುಂಚೆ ಅಕೌಂಟ್ ನಲ್ಲಿ ಹಣ ಇದೆಯೇ ಇಲ್ಲವೇ ಎನ್ನುವುದನ್ನು ಪರಿಶೀಲಿಸಬೇಕಾಗುತ್ತದೆ.

ಒಂದು ವೇಳೆ ನೀವು ಚೆಕ್ ಅನ್ನು ಬರೆದ ಮೇಲೆ ಆ ಅಕೌಂಟ್ ನಲ್ಲಿ ಹಣ ಇಲ್ಲದೆ ಹೋದಲ್ಲಿ ಅದನ್ನು Negotiable Instrument Act 1881 ರ ಪ್ರಕಾರ ಚೆಕ್ ಬೌನ್ಸ್ ಅಪರಾಧದ ಅಡಿಯಲ್ಲಿ ಪರಿಗಣಿಸಲಾಗುತ್ತದೆ ಹಾಗೂ ಕೆಲವು ಇದರ ವಿರುದ್ಧ ಕಾನೂನು ಕ್ರಮ ಜರುಗಿಸುವಂತಹ ಸಾಧ್ಯತೆ ಕೂಡ ಇರುತ್ತದೆ.ಇನ್ನು ಚೆಕ್ ಬರೆಯುವಾಗ ನೆನಪಿನಲ್ಲಿಟ್ಟುಕೊಳ್ಳಬೇಕಾಗಿರುವ ಮತ್ತೊಂದು ಪ್ರಮುಖ ವಿಚಾರ ದಿನಾಂಕವನ್ನು ಸರಿಯಾಗಿ ಬರೆದುಕೊಳ್ಳಬೇಕು ಇಲ್ಲವಾದಲ್ಲಿ ಚೆಕ್ ಬ್ಯಾಂಕಿನಿಂದ ರಿಜೆಕ್ಟ್ ಆಗುವ ಸಾಧ್ಯತೆ ಕೂಡ ಹೆಚ್ಚಾಗಿರುತ್ತದೆ.

Checque Book
Image Source: Mint

ಚೆಕ್ ಮೇಲೆ ಬರೆಯುವಾಗ ಹೆಸರನ್ನು ಕೂಡ ಸರಿಯಾಗಿ ಬರೆಯಬೇಕು ಇಲ್ಲವಾದಲ್ಲಿ ಬ್ಯಾಂಕಿನವರು ಈ ಚೆಕ್ ನ ಹಣವನ್ನು ಕ್ಲಿಯರ್ ಮಾಡೋದಿಲ್ಲ ಅನ್ನೋ ನಿಯಮ ಕೂಡ ಇದೆ. ಈಗಾಗಲೇ ಬ್ಯಾಂಕ್ ಅಕೌಂಟ್ ನಲ್ಲಿ ಇರುವಂತಹ ಅಧಿಕೃತ ಸಿಗ್ನೇಚರ್ ಅನ್ನು ನೀವು ಚೆಕ್ ಬರೆಯುವಾಗಲು ಕೂಡ ದಾಖಲಿಸಬೇಕಾಗುತ್ತದೆ ಇಲ್ಲವಾದಲ್ಲಿ ನಿಮ್ಮ ಚೆಕ್ ಕ್ಲಿಯರ್ ಆಗೋದಿಲ್ಲ.

ಯಾವತ್ತು ಕೂಡ ಚೆಕ್ ಗೆ ಸಹಿ ಹಾಕಿದ ಮೇಲೆ ಅದನ್ನು ಜಾಗೃತಿಯಾಗಿ ಇಟ್ಟುಕೊಳ್ಳಿ ಯಾಕೆಂದರೆ ಒಮ್ಮೆ ಅದನ್ನು ಕಳೆದುಕೊಂಡರೆ ನಿಮ್ಮ ಹಣವನ್ನು ನೀವು ಸಂಪೂರ್ಣವಾಗಿ ಕಳೆದುಕೊಂಡಂತೆ.
ಒಂದು ವೇಳೆ ಮುಂದೊಮ್ಮೆ ಚೆಕ್ ಅನ್ನು ಕ್ಯಾನ್ಸಲ್ ಮಾಡಬೇಕಾದಂತಹ ಸಮಯ ಒದಗಿ ಬಂದರೆ ನೀವು ಚೆಕ್ ನಲ್ಲಿ ಬರೆದಿರುವಂತಹ ಅಕೌಂಟ್ ನಂಬರ್ ಡೀಟೇಲ್ಸ್ ಸೇರಿದಂತೆ ಇನ್ನಿತರ ಮಾಹಿತಿಗಳನ್ನು ನೀವು ಬರೆದಿಟ್ಟುಕೊಳ್ಳುವುದು ಅತ್ಯಂತ ಪ್ರಯೋಜನಕಾರಿಯಾಗಲಿದೆ.

Leave A Reply

Your email address will not be published.