Loan End: ಬ್ಯಾಂಕ್ ಸಾಲ ಮಾಡಿರುವ ಎಲ್ಲರಿಗೂ RBI ನಿಂದ ಹೊಸ ನಿಯಮ, ನೀವೇ ಬ್ಯಾಂಕಿಗೆ ದಂಡ ಹಾಕಬಹುದು.
ಸಾಲ ಪಡೆದಿರುವ ಗ್ರಾಹಕರಿಗೆ ಬ್ಯಾಕಿನಿಂದ ಈ ತೊಂದರೆಯಾದರೆ ಬ್ಯಾಂಕ್ ಗೆ ದಂಡ ವಿಧಿಸುವ ಅಧಿಕಾರ ನಿಮಗಿರುತ್ತದೆ.
RBI New Order For Loan Repayment: ಜನ ಸಾಮಾನ್ಯರು ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳುವ ನಿಟ್ಟಿನಲ್ಲಿ ಬ್ಯಾಂಕ್ ನಲ್ಲಿ ಸಾಲ ಮಾಡುತ್ತಾರೆ. ಸಾಲ ಮಾಡುವಾಗ ತನ್ನ ಚರಾಸ್ತಿ ಅಥವಾ ಸ್ಥಿರಾಸ್ಥಿಯನ್ನು ಬ್ಯಾಂಕ್ ನಲ್ಲಿ ಇಟ್ಟು ಬ್ಯಾಂಕ್ ನಿಂದ ಸಾಲ ಪಡೆಯುತ್ತಾರೆ. ನಂತರ ಬ್ಯಾಂಕ್ ಗೆ ಬಡ್ಡಿ ಸಮೇತ ಪಡೆದ ಸಾಲವನ್ನು ತೀರಿಸಿ ಬ್ಯಾಂಕ್ ನಲ್ಲಿ ಇಟ್ಟ ಮೂಲ ಆಸ್ತಿ ಪತ್ರವನ್ನು ಮರಳಿ ಪಡೆಯಲಾಗುತ್ತದೆ.
ಆದರೆ ಕೆಲವು ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳು ಗ್ರಾಹಕರು ಸಾಲವನ್ನು ತೀರಿಸಿದರೂ ಆಸ್ತಿ ಪತ್ರವನ್ನು ವಾಪಾಸು ನೀಡದೆ ಗ್ರಾಹಕರನ್ನು ತೊಂದರೆಗೆ ಒಳಪಡಿಸುತ್ತಾರೆ. ಇಂತಹ ಪರಿಸ್ಥಿಯನ್ನು ಸರಿ ಮಾಡುವ ನಿಟ್ಟಿನಲ್ಲಿ RBI ಒಂದು ಮಹತ್ವದ ನಿರ್ಧಾರವನ್ನು ಪಡೆದುಕೊಂಡಿದೆ.
ಬ್ಯಾಂಕ್ ಗಳ ಮೇಲೆ ದಂಡ ವಿಧಿಸಲಾಗುತ್ತದೆ.
ಗ್ರಾಹಕರು ಬ್ಯಾಂಕ್ ನಿಂದ ಪಡೆದ ಸಾಲವನ್ನು ನಿಗದಿತ ಸಮಯಕ್ಕೆ ಬಡ್ಡಿ ಸಮೇತ ತೀರಿಸಿದ ನಂತರ ಅವರು ಇಟ್ಟ ಮೂಲ ಆಸ್ತಿ ಪತ್ರವನ್ನು ವಾಪಾಸು ನೀಡುವುದು ಬ್ಯಾಂಕ್ ನ ಕರ್ತವ್ಯ. ಆದರೆ ಕೆಲವು ಬ್ಯಾಂಕ್ ಗಳು ಆಸ್ತಿ ಪತ್ರವನ್ನು ಗ್ರಾಹಕರಿಗೆ ವಾಪಾಸು ನೀಡದೆ ಸತಾಯಿಸುತ್ತಾರೆ. ಇದರಿಂದ ಗ್ರಾಹಕರು ಬಹಳ ಸಂಕಷ್ಟಕ್ಕೆ ಒಳಪಡಬೇಕಾಗುತ್ತದೆ.
ಇನ್ನು ಮುಂದೆ ಬ್ಯಾಂಕ್ ಆಗಲಿ ಯಾವುದೇ ಹಣಕಾಸು ಸಂಸ್ಥೆಗಳಾಗಲಿ ಸಾಲ ಮರು ಪಾವತಿಯ ನಂತರ ಗ್ರಾಹಕರ ಮೂಲ ಆಸ್ತಿ ಪತ್ರವನ್ನು 30 ದಿನಗಳ ಒಳಗಾಗಿ ವಾಪಾಸು ನೀಡತಕ್ಕದ್ದು. ಒಂದೊಮ್ಮೆ ಬ್ಯಾಂಕ್ ಗ್ರಾಹಕರ ಆಸ್ತಿ ಪತ್ರವನ್ನು ನಿಗದಿತ ದಿನಗಳ ಒಳಗೆ ನೀಡುವಲ್ಲಿ ವಿಫಲವಾದರೆ ದಿನವೊಂದಕ್ಕೆ 5 ಸಾವಿರ ರೂ. ದಂಡವನ್ನು ಗ್ರಾಹಕರಿಗೆ ನೀಡಬೇಕು ಎಂದು ಎಲ್ಲಾ ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳಿಗೆ ಆರ್ಬಿಐ ನಿರ್ದೇಶನ ನೀಡಿದೆ. ಈ ನಿಯಮ ಡಿಸೆಂಬರ್ 1 ರಿಂದಲೇ ಅನ್ವಯವಾಗಲಿದೆ.
RBI ನ ಈ ನಿಯಮ ಕಡ್ಡಾಯವಾಗಿ ಪಾಲಿಸತಕ್ಕದ್ದು
ಗ್ರಾಹಕರಿಗೆ ಆಗುವ ತೊಂದರೆಗಳನ್ನು ತಪ್ಪಿಸುವ ಉದ್ದೇಶಕ್ಕಾಗಿ RBI ಈ ನಿಯಮವನ್ನು ಜಾರಿಗೆ ತಂದಿದ್ದು. ಪ್ರತಿ ಬ್ಯಾಂಕ್ ಹಾಗು ಹಣಕಾಸು ಸಂಸ್ಥೆಗಳು ಈ ನಿಯಮವನ್ನು ಪಾಲಿಸತಕ್ಕದ್ದು. ಇದಲ್ಲದೆ ನೋಂದಣಿ ಸಂಬಂಧಿಸಿದ ಶುಲ್ಕ ಕೈಬಿಡುವಂತೆಯೂ ಆರ್ಬಿಐ ಹೇಳಿದೆ. ಹೊಸ ನಿಯಮಾವಳಿಗಳು ಬ್ಯಾಂಕ್ಗಳು ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು ಇಲ್ಲವಾದರೆ ಕ್ರಮ ಕೈಗೊಳ್ಳುವುದಾಗಿ RBI ಎಚ್ಚರಿಕೆ ನೀಡಿದೆ.
ಈ ನಿಯಮದಿಂದ ಸಾಲಗಾರರಿಗೆ ಆಗುವ ಪ್ರಯೋಜನಗಳು
ಗ್ರಾಹಕರು ಸಾಲ ಮರು ಪಾವತಿಸಿದ ನಂತರದ 30 ದಿನಗಳಲ್ಲಿ ಬ್ಯಾಂಕ್ ನಿಂದ ಮೂಲ ಆಸ್ತಿ ದಾಖಲೆಗಳನ್ನು ಸ್ವೀಕರಿಸಲು ಅರ್ಹರಾಗಿರುತ್ತಾರೆ. ಒಂದೊಮ್ಮೆ ಬ್ಯಾಂಕ್ ಮೂಲ ಆಸ್ತಿ ಪತ್ರ ನೀಡುವಲ್ಲಿ ವಿಳಂಬವಾದರೆ ಸಾಲಗಾರರು ಪ್ರತಿ ದಿನ 5 ಸಾವಿರ ರೂ. ಪರಿಹಾರ ಪಡೆಯಬಹುದು.
ಮೂಲ ಆಸ್ತಿ ದಾಖಲೆಗಳಿಗೆ ನಷ್ಟ ಅಥವಾ ಹಾನಿಯಾದರೆ ಹಣಕಾಸು ಸಂಸ್ಥೆಗಳು ನಕಲು ಅಥವಾ ಪ್ರಮಾಣೀಕೃತ ಪ್ರತಿಗಳನ್ನು ಸಾಲಗಾರರಿಗೆ ಒದಗಿಸಬೇಕು, ದಾಖಲೆ ಹಾನಿಯಾಗಿದ್ದರೆ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಬ್ಯಾಂಕ್ಗಳಿಗೆ ಹೆಚ್ಚುವರಿ 30 ದಿನ ನೀಡಲಾಗುತ್ತದೆ.
ಏಕೈಕ ಸಾಲಗಾರ ಅಥವಾ ಜಂಟಿ ಸಾಲಗಾರನ ಮರಣ ಆದರೆ ಮೂಲ ದಾಖಲೆಗಳನ್ನು ಹಿಂದಿರುಗಿಸಲು ಬ್ಯಾಂಕ್ಗಳು ಸುರಕ್ಷಿತ ಕ್ರಮ ವಹಿಸಬಹುದು. ಸಾಲಗಾರರು ತಮ್ಮ ಬ್ಯಾಂಕ್ ಶಾಖೆಯಿಂದ ಅಥವಾ ದಾಖಲೆಗಳು ಲಭ್ಯವಿರುವ ಶಾಖೆಯಿಂದ ದಾಖಲೆಗಳನ್ನು ಸಂಗ್ರಹಿಸುವ ಆಯ್ಕೆ ಹೊಂದಿರುತ್ತಾರೆ. ಇಷ್ಟೆಲ್ಲಾ ಅನುಕೂಲಗಳು ಬ್ಯಾಂಕ್ ನಿಂದ ಗ್ರಾಹಕರಿಗೆ ಸಿಗುತ್ತದೆ.