Realme: 12GB RAM ಮೊಬೈಲ್ ಬೆಲೆಯಲ್ಲಿ ಭರ್ಜರಿ 33 % ಡಿಸ್ಕೌಂಟ್, ಹೊಸ ಮೊಬೈಲ್ ಖರೀದಿಗೆ ಇದು ಬೆಸ್ಟ್ ಟೈಮ್.

Realme ಮೊಬೈಲ್ ಮೇಲೆ ಆಕರ್ಷಕ ರಿಯಾಯಿತಿ ಘೋಷಣೆ

Realme X50 Pro Smart Phone: ಮೊಬೈಲ್ ಖರೀದಿ ಮಾಡಬೇಕು ಅಂತ ಅಂದುಕೊಂಡವರಿಗೆ ಈ ಸುದ್ದಿ ಬಹಳ ಉಪಯುಕ್ತಕರ ಆಗಲಿದೆ ಹಾಗು ಸಂತೋಷ ಕೂಡ ನೀಡಲಿದೆ . ಯಾಕೆಂದರೆ ನಾವು ಇಲ್ಲಿ ತಿಳಿಸುವ ವಿಶೇಷ ಫೋನ್ ಈಗ ಮಾರುಕಟ್ಟೆಯಲ್ಲಿ ಬಹಳ ಕಡಿಮೆ ಬೆಲೆಗೆ ನಿಮ್ಮ ಕೈ ಸೇರಲಿದೆ.

ಹಾಗಾಗಿ ಈ ಮೊಬೈಲ್ ಅನ್ನು ಖರೀದಿಸಿ. ರಿಯಲ್‌ಮಿ ಫೋನ್‌ಗಳಿಗೆ (Realme smartphones) ಸ್ಮಾರ್ಟ್‌ಫೋನ್‌ಗಳ ವಿಭಾಗದಲ್ಲಿ ಭಾರೀ ಬೇಡಿಕೆ ಇದೆ. ಅದರಲ್ಲೂ ಭಾರತದ ಗ್ರಾಹಕರು ರಿಯಲ್‌ಮಿ ಫೋನ್‌ಗಳಿಗೆ ಆಕರ್ಷಿತರಾಗಿದ್ದಾರೆ. ಈ ನಡುವೆ ರಿಯಲ್‌ಮಿಯ ಈ ಫೋನ್‌ಗೆ ದೊಡ್ಡ ಮಟ್ಟದ ಡಿಸ್ಕೌಂಟ್‌ ಘೋಷಣೆ ಮಾಡಿದೆ.

Realme X50 Pro Smart Phone
Image Credit: Smartprix

ರಿಯಲ್‌ಮಿ X50 ಪ್ರೊ (Realme X50 Pro) ಫೋನ್ ನ ರಚನೆ ಹಾಗು ವಿಶೇಶತೆ

ರಿಯಲ್‌ಮಿ X50 ಪ್ರೊ ಸ್ಮಾರ್ಟ್‌ಫೋನ್ 6.44 ಇಂಚಿನ ಸೂಪರ್ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದ್ದು, 409 ppi ಪಿಕ್ಸೆಲ್ ಸಾಂದ್ರತೆ ಮತ್ತು 1080 x 2400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯ ನೀಡಲಿದೆ.ಈ ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 865 ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದ್ದು, ಈ ಮೂಲಕ ಅತ್ಯುತ್ತಮವಾದ ಕಾರ್ಯಕ್ಷಮತೆಯನ್ನು ಪಡೆದುಕೊಳ್ಳಬಹುದಾಗಿದೆ. ಹಾಗೆಯೇ ಹಾರ್ಡ್‌ವೇರ್ ಕಾನ್ಫಿಗರೇಶನ್ ಫೋನ್ ಬಳಕೆದಾರರಿಗೆ ತಲ್ಲೀನಗೊಳಿಸುವ ಗೇಮಿಂಗ್ ಅನುಭವವನ್ನು ನೀಡಲು ಅಡ್ರಿನೋ 650 GPU ಮತ್ತು 12 GB RAM ಆಯ್ಕೆ ನೀಡಲಾಗಿದೆ.

ರಿಯಲ್‌ಮಿ X50 ಪ್ರೊ (Realme X50 Pro)ಕ್ಯಾಮೆರಾ ಹಾಗು ಬ್ಯಾಟರಿ ಸಾಮರ್ಥ್ಯ

ರಿಯಲ್‌ಮಿ X50 ಪ್ರೊ ಫೋನ್ ಕ್ವಾಡ್ ರಿಯರ್‌ ಕ್ಯಾಮೆರಾ ಆಯ್ಕೆ ಪಡೆದಿದ್ದು, ಇದರಲ್ಲಿ ಪ್ರಮುಖವಾಗಿ 64 ಮೆಗಾಪಿಕ್ಸೆಲ್‌ ಪ್ರಾಥಮಿಕ ಕ್ಯಾಮೆರಾ, 12 ಮೆಗಾಪಿಕ್ಸೆಲ್‌ ಟೆಲಿಫೋಟೋ, 8 ಮೆಗಾಪಿಕ್ಸೆಲ್‌ ಅಲ್ಟ್ರಾ-ವೈಡ್-ಆಂಗಲ್ ಮತ್ತು 2 ಮೆಗಾಪಿಕ್ಸೆಲ್‌ ಡೆಪ್ತ್ ಲೆನ್ಸ್‌ ಆಯ್ಕೆ ಪಡೆದಿದೆ. ಈ ಸೆನ್ಸರ್‌ಗಳು ಹೆಚ್‌ಡಿಆರ್ , ಪನೋರಮಾ, 20x ಡಿಜಿಟಲ್ ಮತ್ತು 2x ಆಪ್ಟಿಕಲ್ ಜೂಮ್ ಮತ್ತು ಬೊಕೆ ಫೀಚರ್ಸ್‌ ಪಡೆದಿವೆ.

ಹೆಚ್ಚುವರಿಯಾಗಿ ಈ ಸ್ಮಾರ್ಟ್‌ಫೋನ್ ISOCELL ಪ್ಲಸ್ ಸೆನ್ಸರ್‌ ಆಯ್ಕೆ ಪಡೆದಿದ್ದು, ಅತ್ಯುತ್ತಮ ಚಿತ್ರಗಳನ್ನು ಸೆರೆಹಿಡಿಯಲು ಅನುಕೂಲ ಮಾಡಿಕೊಡುತ್ತದೆ. ಹಾಗೆಯೇ ಮುಂಭಾಗದಲ್ಲಿ 32 ಮೆಗಾಪಿಕ್ಸೆಲ್ ಮತ್ತು 8 ಮೆಗಾಪಿಕ್ಸೆಲ್ ಲೆನ್ಸ್‌ ಆಯ್ಕೆ ನೀಡಲಾಗಿದ್ದು, ಇವು ಎಕ್ಸ್ಮೋರ್ ಆರ್‌ಎಸ್‌ ಸೆನ್ಸರ್‌ ಮತ್ತು F2.5 ಭೌತಿಕ ದ್ಯುತಿರಂಧ್ರದೊಂದಿಗೆ ಕಾಣಿಸಿಕೊಂಡಿವೆ. ಪರಿಣಾಮ ಯಾರೆಲ್ಲಾ ಕ್ಯಾಮೆರಾ ಪ್ರಿಯರಿದ್ದಾರೋ ಅವರು ಕಣ್ಣು ಮುಚ್ಚಿಕೊಂಡು ಈ ಫೋನ್ ಖರೀದಿ ಮಾಡಬಹುದಾಗಿದೆ. ಉಳಿದಂತೆ ಈ ಫೋನ್‌ 4,200 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದೆ.

Realme X50 Pro Smart Phone Price
Image Credit: Techbroll

ರಿಯಲ್‌ಮಿ X50 ಪ್ರೊ (Realme X50 Pro) ನ ಬೆಲೆ ಹಾಗು ಆಫರ್ ಗಳ ಸಂಪೂರ್ಣ ಮಾಹಿತಿ

ರಿಯಲ್‌ಮಿ X50 ಪ್ರೊ ಫೋನ್‌ ಸಾಮಾನ್ಯ ದರ 48,999 ರೂ.ಗಳಾಗಿದ್ದು, ನೀವು ಇದನ್ನು ಆಫರ್‌ ಬೆಲೆ 32,489 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಯಾಕೆಂದರೆ ಫ್ಲಿಪ್‌ಕಾರ್ಟ್‌ (Flipkart) ಈ ಫೋನ್‌ಗೆ 33% ರಷ್ಟು ರಿಯಾಯಿತಿ ನೀಡಿದೆ. ಇಷ್ಟು ಮಾತ್ರವಲ್ಲದೆ ಬ್ಯಾಂಕ್‌ ಆಫರ್ ಸಹ ಇದ್ದು, ಈ ಮೂಲಕ ಇನ್ನಷ್ಟು ಹಣವನ್ನು ಈ ಫೋನ್‌ ಖರೀದಿ ವೇಳೆ ಉಳಿತಾಯ ಮಾಡಬಹುದಾಗಿದೆ.

ಈ ಸ್ಮಾರ್ಟ್‌ಫೋನ್‌ ಖರೀದಿ ಮಾಡುವಾಗ ನೀವು ಫ್ಲಿಪ್‌ಕಾರ್ಟ್‌ ಆಕ್ಸಿಸ್ ಬ್ಯಾಂಕ್‌ ಕ್ರೆಡಿಟ್‌ ಕಾರ್ಡ್‌ (Flipkart Axis Bank Credit Card) ಬಳಕೆ ಮಾಡಿದ್ರೆ 5% ಕ್ಯಾಶ್‌ಬ್ಯಾಕ್ ಪಡೆದುಕೊಳ್ಳಬಹುದಾಗಿದೆ. ಇದರೊಂದಿಗೆ ಡೆಬಿಟ್ ಕಾರ್ಡ್ ಇಎಮ್‌ಐ ಆಯ್ಕೆ ಸಹ ಇದ್ದು, ಈ ಮೂಲಕ ನೀವು ತಿಂಗಳಿಗೆ 2,012ರೂ.ಗಳನ್ನು ಪಾವತಿ ಮಾಡಿ ಈ ಫೋನ್‌ ಖರೀದಿ ಮಾಡಬಹುದು. ಜೊತೆಗೆ ಸ್ಟ್ಯಾಂಡರ್ಡ್ ಇಎಮ್‌ಐ ಆಯ್ಕೆ ಸಹ ಇದೆ.

Leave A Reply

Your email address will not be published.