Smart TV: ಗೌರಿ ಗಣೇಶ ಹಬ್ಬಕ್ಕೆ ಹೊಸ ಟಿವಿ ಖರೀದಿ ಮಾಡುವವರಿಗೆ ಬಂಪರ್ ಆಫರ್, ಕಡಿಮೆ ಬೆಲೆಗೆ ಮನೆಗೆ ತನ್ನಿ ಟಿವಿ.
ಈ ವರ್ಷದ ಗಣೇಶ ಹಬ್ಬಕ್ಕೆ ಮನೆಗೆ ತನ್ನಿ ಹೊಸ ಟಿವಿ ಕಡಿಮೆ ಬೆಲೆಗೆ,
Redmi Smart Fire TV: ಹಬ್ಬದ ಸಮಯದಲ್ಲಿ ಪ್ರತಿ ಮನೆಯಲ್ಲಿ ಏನಾದರೂ ಖರೀದಿ ಮಾಡುವ ಪ್ಲ್ಯಾನ್ ಇದ್ದೆ ಇರುತ್ತದೆ. ಹಬ್ಬಕ್ಕೆ ಖರೀದಿ ಮಾಡಿದರೆ ಒಳ್ಳೆ ನೆನಪು ಇರುತ್ತದೆ ಹಾಗೆಯೇ ಆಫರ್ ಕೂಡ ಇರುತ್ತದೆ ಎಂಬ ಕಾರಣಕ್ಕೆ.
ಹಾಗೆಯೇ ಈ ಬಾರಿಯೂ ಗೌರಿ ಗಣೇಶ ಹಬ್ಬಕ್ಕೆ ಏನಾದರೂ ಖರೀದಿ ಮಾಡುವ ಪ್ಲ್ಯಾನ್ ನಿಮಗೂ ಇದೆಯೇ, ಹಾಗಿದ್ದರೆ ಗೌರಿ ಗಣೇಶ ಹಬ್ಬದ ಸಂಭ್ರಮಕ್ಕೆ ಇನ್ನು ಎರಡು ದಿನಗಳಷ್ಟೇ ಬಾಕಿ ಇದೆ. ಇದೇ ಸಮಯದಲ್ಲಿ ಹಲವು ಜನಪ್ರಿಯ ಟೆಕ್ ಬ್ರ್ಯಾಂಡ್ಗಳು ತಮ್ಮ ವಿಭಿನ್ನ ಪ್ರಾಡಕ್ಟ್ಗಳನ್ನು ಪರಿಚಯಿಸುವುದು ಸಾಮಾನ್ಯವಾಗಿದೆ.

ಹೊಸ Redmi 4K ಟಿವಿ
Redmi Smart ಫೈರ್ ಟಿವಿ 4K ಭಾರತಕ್ಕೆ ಎಂಟ್ರಿ ನೀಡಿದೆ. ಗೌರಿ ಗಣೇಶ ಹಬ್ಬಕ್ಕೆ ಹೊಸ ಸ್ಮಾರ್ಟ್ಟಿವಿ ಖರೀದಿಸಬೇಕೆಂದುಕೊಂಡವರಿಗೆ ಹೊಸ ಆಯ್ಕೆ ನೀಡಿದೆ. ಇನ್ನು ಈ ಸ್ಮಾರ್ಟ್ಟಿವಿ ಮಾಲಿ G52 MC1 GPU ಜೊತೆಗೆ ಕ್ವಾಡ್-ಕೋರ್ A55 ಪ್ರೊಸೆಸರ್ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಬ್ಲೂಟೂತ್ 5.0, ವೈ-ಫೈ, ಏರ್ಪ್ಲೇ 2 ಮತ್ತು ಮಿರಾಕಾಸ್ಟ್ ಕನೆಕ್ಟಿವಿಟಿ ಆಯ್ಕೆಗಳನ್ನು ನೀಡಿದೆ.
Redmi Smart ಫೈರ್ ಟಿವಿ 4K ವಿಶೇಷತೆ
Redmi Smart ಫೈರ್ ಟಿವಿ 4K 32 ಇಂಚಿನ ಬೆಜೆಲ್ ಲೆಸ್ ಡಿಸ್ಪ್ಲೇಯನ್ನು ಹೊಂದಿದೆ. ಈ ಡಿಸ್ಪ್ಲೇ 3,840 x 2,160 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದೆ. ಈ ಟಿವಿ ಕಂಪನಿಯ ವಿವಿಡ್ ಪಿಕ್ಚರ್ ಎಂಜಿನ್ ಅನ್ನು ಹೊಂದಿದ್ದು, ಡಾಲ್ಬಿ ಆಡಿಯೊ ಜೊತೆಗೆ 24W ಸ್ಟೀರಿಯೋ ಸ್ಪೀಕರ್ಗಳನ್ನು ಮತ್ತು DTS:X ಟೆಕ್ನಾಲಜಿಯನ್ನು ಒಳಗೊಂಡಿದೆ. ಇನ್ನು ಈ ಸ್ಮಾರ್ಟ್ಟಿವಿ ಕ್ವಾಡ್-ಕೋರ್ A55 ಪ್ರೊಸೆಸರ್ ವೇಗವನ್ನು ಹೊಂದಿದೆ ಮತ್ತು ಮಾಲಿ G52 MC1 GPU ಸಪೋರ್ಟ್ ಪಡೆದಿದ್ದು, ಫೈರ್ ಓಎಸ್ನಲ್ಲಿ ಕಾರ್ಯನಿರ್ವಹಿಸಲಿದೆ.

Redmi ಸ್ಮಾರ್ಟ್ ಫೈರ್ ಟಿವಿ Amazon ನೊಂದಿಗೆ ಪಾಲುದಾರಿಕೆ ಹೊಂದಿದೆ
Redmi Smart ಫೈರ್ ಟಿವಿ 4K ಸ್ಮಾರ್ಟ್ಟಿವಿ ವಿವಿಡ್ ಪಿಕ್ಚರ್ ಎಂಜಿನ್ ಟೆಕ್ನಾಲಜಿಯನ್ನು ಒಳಗೊಂಡಿದೆ. ಇದು ನಯವಾದ ಮತ್ತು ಸೊಗಸಾದ ನೋಟವನ್ನು ಹೊಂದಿದ್ದು, ತಲ್ಲೀನಗೊಳಿಸುವ ಮನರಂಜನಾ ಅನುಭವದ ಭರವಸೆ ನೀಡುತ್ತದೆ. ಇದಲ್ಲದೆ ಸ್ಮಾರ್ಟ್ಟಿವಿ Amazon ಜೊತೆಗಿನ ಪಾಲುದಾರಿಕೆಯನ್ನು ಹೊಂದಿರುವುದರಿಂದ ಇನ್ಬಿಲ್ಟ್ ಅಲೆಕ್ಸಾ ಬೆಂಬಲದೊಂದಿಗೆ ಬರಲಿದೆ. ಇನ್ನು ಸ್ಮಾರ್ಟ್ಟಿವಿ ಬ್ಲೂಟೂತ್ 5.0 ಕನೆಕ್ಟಿವಿಟಿಯೊಂದಿಗೆ ಡ್ಯುಯಲ್-ಬ್ಯಾಂಡ್ ವೈಫೈ ಅನ್ನು ಬೆಂಬಲಿಸುತ್ತದೆ.
ಹೊಸ ಫಂಕ್ಷನ್ ಗಳೊಂದಿಗೆ ಬಿಡುಗಡೆಗೊಂಡಿದೆ
ಇನ್ನು ಸ್ಮಾರ್ಟ್ಟಿವಿಯು ಪಿಕ್ಚರ್-ಇನ್-ಪಿಕ್ಚರ್ ಟೆಕ್ನಾಲಜಿಯನ್ನು ಬೆಂಬಲಿಸಲಿದೆ. ಟಿವಿ ವೀಕ್ಷಣೆಯ ಅನುಭವಕ್ಕೆ ಅಡ್ಡಿಯಾಗದಂತೆ ಮಲ್ಟಿ ಫಂಕ್ಷನ್ಗಳನ್ನು ನಿರ್ವಹಿಸಲು ಅನುಮತಿಸಲಿದೆ. Redmi Smart ಫೈರ್ TV 4K 2GB RAM ಮತ್ತು 8GB ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ. ಅಮೆಜಾನ್ ಪ್ರೈಮ್ ಸೇರಿದಂತೆ 12,000 ಕ್ಕೂ ಹೆಚ್ಚು ಅಪ್ಲಿಕೇಶನ್ಗಳೊಂದಿಗೆ ಚಲನಚಿತ್ರಗಳು ಮತ್ತು ಟಿವಿ ಕಾರ್ಯಕ್ರಮಗಳಿಗೆ ಪ್ರವೇಶವನ್ನು ನೀಡಲಿದೆ.

ಇವುಗಳಲ್ಲಿ ಅಮೆಜಾನ್ ಪ್ರೈಮ್ ವೀಡಿಯೊ, ನೆಟ್ಫ್ಲಿಕ್ಸ್, ಡಿಸ್ನಿ+ ಹಾಟ್ಸ್ಟಾರ್, ಜಿಯೋ ಸಿನಿಮಾ ಮತ್ತು ಝೀ5 ಪ್ರಮುಖ ವಾಗಿವೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈ-ಫೈ 802.11 ಎಸಿ ಮತ್ತು ಬ್ಲೂಟೂತ್ 5.0, ಮೂರು HDMI ಪೋರ್ಟ್ಗಳು, ಎರಡು USB ಪೋರ್ಟ್ಗಳು ಮತ್ತು AV ಮತ್ತು 3.5mm ಆಡಿಯೊ ಜ್ಯಾಕ್ ಅನ್ನು ಒಳಗೊಂಡಿದೆ.
ಭಾರತದಲ್ಲಿ Redmi Smart ಫೈರ್ ಟಿವಿ 4K ಬೆಲೆ
ಭಾರತದಲ್ಲಿ Redmi Smart ಫೈರ್ ಟಿವಿ 4K ಬೆಲೆ ಕೇವಲ 26,999 ರೂ.ಆಗಿದೆ. ಈ ಸ್ಮಾರ್ಟ್ ಟಿವಿ Mi.com ಮತ್ತು Amazon ಮೂಲಕ ಮಾರಾಟವಾಗಲಿದೆ. ಹೆಚ್ಚುವರಿಯಾಗಿ, ಕಂಪನಿಯು ಸ್ಮಾರ್ಟ್ ಟಿವಿಯಲ್ಲಿ ಉಚಿತವಾಗಿ 1-ವರ್ಷದ ವಿಸ್ತೃತ ವಾರಂಟಿಯನ್ನು ನೀಡುತ್ತಿದೆ.