Reliance SBI Card: ಭರ್ಜರಿ ಕ್ಯಾಶ್ ಬ್ಯಾಕ್ ಜೊತೆಗೆ ಬಂಪರ್ ರಿಯಾಯಿತಿ, ಬಂತು ರಿಲಯನ್ಸ್ SBI ಕ್ರೆಡಿಟ್ ಕಾರ್ಡ್.
SBI ಜೊತೆ ಸೇರಿಕೊಂಡು ರಿಲಯನ್ಸ್ ಕಾರ್ಡ್ ಲಾಂಚ್ ಮಾಡಿದ ಮುಕೇಶ್ ಅಂಬಾನಿ.
Reliance SBI Credit Cards Launch: ರಿಲಯನ್ಸ್ ಎಸ್‌ಬಿಐ ಕಾರ್ಡ್ ಪ್ರೈಮ್ (Reliance SBI Card) ಹಾಗು ಎಸ್‌ಬಿಐ ಕಾರ್ಡ್ (SBI Card) ಎರಡು ರೂಪಾಂತರದಲ್ಲಿ ಬರುತ್ತದೆ. ಜೀವನಶೈಲಿಯಿಂದ ದಿನಸಿವರೆಗೆ, ಗ್ರಾಹಕ ಎಲೆಕ್ಟ್ರಾನಿಕ್ಸ್‌ನಿಂದ ಫಾರ್ಮಾವರೆಗೆ ಮತ್ತು ಇನ್ನೂ ಹಲವು ಕ್ಷೇತ್ರಗಳು ಈ ಕಾರ್ಡ್‌ನ ಪ್ರಯೋಜನಗಳ ಅಡಿಯಲ್ಲಿ ಬರುತ್ತವೆ.
ದೀಪಾವಳಿಗೂ ಮುಂಚಿತವಾಗಿ ಎಸ್‌ಬಿಐ ಕಾರ್ಡ್ ಮತ್ತು ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ರಿಟೇಲ್ ಸಹಯೋಗದೊಂದಿಗೆ ಸಹ-ಬ್ರಾಂಡೆಡ್ ಕಾರ್ಡ್ Reliance SBI Card ಅನ್ನು ಹೊರತಂದಿವೆ. ಈ ಹೊಸ ಕಾರ್ಡ್ ವಿವಿಧ ಬಹುಮಾನಗಳನ್ನು ನೀಡುತ್ತದೆ. ಅಷ್ಟೇ ಅಲ್ಲದೇ ರಿಲಯನ್ಸ್ ರಿಟೇಲ್ ಸ್ಟೋರ್ ಗಳಲ್ಲಿನ ವಹಿವಾಟಿನ ಮೇಲೆ ಗ್ರಾಹಕರಿಗೆ ವಿಶೇಷ ಪ್ರಯೋಜನಗಳು ಮತ್ತು ಕೊಡುಗೆಗಳನ್ನು ನೀಡಲಾಗುವುದು ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
ರಿಲಯನ್ಸ್ SBI ಕಾರ್ಡ್ PRIME ಬಹುಮಾನಗಳು
ರಿಲಯನ್ಸ್ ಎಸ್‌ಬಿಐ ಕಾರ್ಡ್‌ಗೆ ವಾರ್ಷಿಕ ನವೀಕರಣ ಶುಲ್ಕ 2,999 ರೂ. ಆಗಿರುತ್ತದೆ ಅಷ್ಟೇ ಅಲ್ಲದೇ 3,00,000 ವಾರ್ಷಿಕ ವೆಚ್ಚದ ಮೈಲಿಗಲ್ಲನ್ನು ಸಾಧಿಸಿದ ನಂತರ ನವೀಕರಣ ಶುಲ್ಕ ವಿನಾಯಿತಿ ಇರುತ್ತದೆ .
ರಿಲಯನ್ಸ್ ರಿಟೇಲ್ ಸ್ಟೋರ್‌ಗಳಲ್ಲಿUPI ಪಾವತಿಗಳನ್ನು ಹೊರತುಪಡಿಸಿ 100 ರೂ.ಗೆ 10 ರಿವಾರ್ಡ್ ಪಾಯಿಂಟ್‌ಗಳು ಸಿಗಲಿದೆ ಇತರ ಚಿಲ್ಲರೆ ಖರೀದಿಗಳಿಗೆ (ಇಂಧನ, ಆಸ್ತಿ ಬಾಡಿಗೆ ಮತ್ತು ವಾಲೆಟ್ ಅಪ್‌ಲೋಡ್ ಹೊರತುಪಡಿಸಿ) ಖರ್ಚು ಮಾಡಿದ ರೂ. 100 ಗೆ 2 ರಿವಾರ್ಡ್ ಪಾಯಿಂಟ್‌ಗಳು ಸಿಗಲಿದೆ . ಊಟ, ಚಲನಚಿತ್ರಗಳು ಮತ್ತು ಮನರಂಜನೆ, ದೇಶೀಯ ಏರ್‌ಲೈನ್‌ಗಳು ಮತ್ತು ಅಂತರಾಷ್ಟ್ರೀಯ ವೆಚ್ಚಗಳಿಗಾಗಿ 100 ರೂ.ಗೆ 5 ರಿವಾರ್ಡ್ ಪಾಯಿಂಟ್‌ಗಳು ಸಿಗಲಿದೆ.
ರಿಲಯನ್ಸ್ ಎಸ್‌ಬಿಐ ಕಾರ್ಡ್‌ನ ಪ್ರಯೋಜನಗಳು
ರಿಲಯನ್ಸ್ ಎಸ್‌ಬಿಐ ಕಾರ್ಡ್‌ಗೆ ವಾರ್ಷಿಕ ನವೀಕರಣ ಶುಲ್ಕವು 499 ರೂ. ಆಗಿದೆ. 1,00,000 ವಾರ್ಷಿಕ ವೆಚ್ಚದ ಮೈಲಿಗಲ್ಲನ್ನು ಸಾಧಿಸಿದ ನಂತರ ನವೀಕರಣ ಶುಲ್ಕ ವಿನಾಯಿತಿ ಇದ್ದು. ಇತರ ಚಿಲ್ಲರೆ ಖರೀದಿಗಳಿಗೆ (ಇಂಧನ, ಆಸ್ತಿ ಬಾಡಿಗೆ ಮತ್ತು ವ್ಯಾಲೆಟ್ ಅಪ್‌ಲೋಡ್ ಹೊರತುಪಡಿಸಿ) ಖರ್ಚು ಮಾಡಿದ ರೂ. 100 ಗೆ 1 ರಿವಾರ್ಡ್ ಪಾಯಿಂಟ್. ಸೇರುವ ಶುಲ್ಕದ ಪಾವತಿಯ ಮೇಲೆ ರೂ. 500 ಮೌಲ್ಯದ ರಿಲಯನ್ಸ್ ರಿಟೇಲ್ ವೋಚರ್. ಭಾಗವಹಿಸುವ ರಿಲಯನ್ಸ್ ರಿಟೇಲ್ ಸ್ಟೋರ್‌ಗಳಲ್ಲಿ (ಯುಪಿಐ ಪಾವತಿಗಳನ್ನು ಹೊರತುಪಡಿಸಿ) ಖರ್ಚು ಮಾಡಿದ ರೂ 100 ಗೆ 5 ರಿವಾರ್ಡ್ ಪಾಯಿಂಟ್‌ಗಳು.
ಊಟ ಮತ್ತು ಚಲನಚಿತ್ರಗಳಿಗೆ 100 ರೂ.ಗೆ 5 ರಿವಾರ್ಡ್ ಪಾಯಿಂಟ್‌ಗಳು. ಭಾಗವಹಿಸುವ ವಿವಿಧ ರಿಲಯನ್ಸ್ ರಿಟೇಲ್ ಸ್ಟೋರ್‌ಗಳ ರೂ. 3,200 ಮೌಲ್ಯದ ಹೆಚ್ಚುವರಿ ರಿಯಾಯಿತಿ ವೋಚರ್‌ಗಳನ್ನು ಸೇರುವ ಶುಲ್ಕದ ನಂತರ 45 ದಿನಗಳ ಒಳಗೆ ತಲುಪಿಸಲಾಗುತ್ತದೆ. ಹಿಂದಿನ ವರ್ಷದಲ್ಲಿ ರೂ 1 ಲಕ್ಷ ವಾರ್ಷಿಕ ಖರ್ಚುಗಳ ನವೀಕರಣ ಶುಲ್ಕವನ್ನು ಮನ್ನಾ ಮಾಡಿದ್ದೂ, ಎಲ್ಲಾ ಪೆಟ್ರೋಲ್ ಪಂಪ್‌ಗಳಲ್ಲಿ 1% ಇಂಧನ ಸರ್ಚಾರ್ಜ್ ಮನ್ನಾ ಮಾಡಲಾಗುತ್ತದೆ.