7 Seater Car: 20 ಕಿ.ಮೀ ಮೈಲೇಜ್ ನೀಡುವ ಈ 7 ಸೀಟರ್ ಕಾರಿಗೆ ಹೆಚ್ಚಾಗಿದೆ ಬೇಡಿಕೆ, ಬುಕ್ ಮಾಡಲು ಜನಸಂದಣಿ

7 ಆಸನ ಇರುವ ಪ್ಯಾಮಿಲಿ ಕಾರನ್ನು ಖರೀದಿ ಮಾಡುವ ಆಸೆ ಇದ್ದರೆ, ಅಗ್ಗದ ಬೆಲೆಯಲ್ಲಿ ಈ ಕಾರನು ಖರೀದಿಸಿ.

Renault Triber 7 Seater Car: ಕಾರು ಖರೀದಿ ಮಾಡುವ ಕನಸು ಹೆಚ್ಚಿನವರಲ್ಲಿ ಇರುತ್ತದೆ. ಅದರಲ್ಲೂ ಭಾರತೀಯರು ಪ್ಯಾಮಿಲಿ ಕಾರುಗಳ ಖರೀದಿ ಬಗ್ಗೆ ಆಲೋಚಿಸುತ್ತಿರುತಾರೆ. ಆದರೆ ಪ್ಯಾಮಿಲಿ ಕಾರು ಖರೀದಿ ಮಾಡಬೇಕೆಂದರೆ 10-12 ಲಕ್ಷ ಬೇಕಾಗಿರುತ್ತದೆ. ಹಾಗಾಗಿ ಎಷ್ಟೋ ಜನರು ಕಾರು ಖರೀದಿ ಮಾಡದೇ ಸುಮ್ಮನಾಗಿ ಬಿಡುತ್ತಾರೆ.

ಆದರೆ ಬಜೆಟ್ ಬೆಲೆಯಲ್ಲಿ 7 ಸೀಟರ್ ಕಾರೊಂದು ಲಭ್ಯವಿದೆ ಎಂದು ಹಲವರಿಗೆ ತಿಳಿದಿಲ್ಲ. ಮಾರುಕಟ್ಟೆಯಲ್ಲಿ ಹ್ಯಾಚ್‌ ಬ್ಯಾಕ್ ಮತ್ತು ಕಾಂಪ್ಯಾಕ್ಟ್ ಎಸ್‌ಯುವಿಗಳು 7 ಲಕ್ಷ ಅಥವಾ ಅದಕ್ಕಿಂತ ಕಡಿಮೆ ಬಜೆಟ್‌ನಲ್ಲಿ ಲಭ್ಯವಿವೆ. ನೀವು 7 ಆಸನಗಳ ಕಾರನ್ನು ಖರೀದಿಸಲು ಬಯಸಿದರೆ, ಈಗ ನಿಮ್ಮ ಕನಸು ನನಸಾಗಬಹುದು. ರೂ.7 ಲಕ್ಷದ ಬಜೆಟ್‌ನಲ್ಲಿ 7 ಆಸನಗಳ ಕಾರನ್ನು ನೀವು ಮನೆಗೆ ಕೊಂಡೊಯ್ಯಬಹುದು.

Renault Triber Feature
Image Credit: The Quint

Renault Triber Feature
ರೆನಾಲ್ಟ್ ಟ್ರೈಬರ್ ಕಾರು ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್, ಸ್ಟೀರಿಂಗ್-ಮೌಂಟೆಡ್ ಆಡಿಯೊ ಕಂಟ್ರೋಲ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇಯೊಂದಿಗೆ 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಮೊಬೈಲ್ ಫೋನ್ ಸಂಪರ್ಕದಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಇವುಗಳ ಹೊರತಾಗಿ, ರೆನಾಲ್ಟ್ ಟ್ರೈಬರ್ MPV ಪುಶ್-ಬಟನ್ ಸ್ಟಾರ್ಟ್/ಸ್ಟಾಪ್, ಸೆಂಟರ್ ಕನ್ಸೋಲ್‌ನಲ್ಲಿ ಕೂಲ್ಡ್ ಸ್ಟೋರೇಜ್ ಮತ್ತು ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಸಹ ಪಡೆಯುತ್ತದೆ. ಇದರ ಹೊರತಾಗಿ, ಸಾಮಾನ್ಯ ಕೀ ಬದಲಿಗೆ ಸ್ಮಾರ್ಟ್ ಕಾರ್ಡ್ ಪ್ರವೇಶ ಕೀ ಸಹ ಅದರ ಉನ್ನತ ರೂಪಾಂತರಗಳಲ್ಲಿ ಲಭ್ಯವಿದೆ.

ರೆನಾಲ್ಟ್ ಟ್ರೈಬರ್ (Renault triber) ಕಾರಿನ ಸುರಕ್ಷತೆಯ ವೈಶಿಷ್ಟ್ಯಗಳು

ರೆನಾಲ್ಟ್ ಟ್ರೈಬರ್ ಕಾರು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP), ಹಿಲ್ ಸ್ಟಾರ್ಟ್ ಅಸಿಸ್ಟ್ (HSA), ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್ (TCS) ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ನಂತಹ ಪ್ರಮುಖ ವೈಶಿಷ್ಟ್ಯಗಳನ್ನು ಹೊಂದಿದೆ. ಜೊತೆಗೆ ನಾಲ್ಕು ಏರ್‌ಬ್ಯಾಗ್‌ಗಳು, ಇಬಿಡಿಯೊಂದಿಗೆ ಎಬಿಎಸ್, ರಿಯರ್ ಪಾರ್ಕಿಂಗ್ ಸೆನ್ಸಾರ್, ರಿಯರ್ ವ್ಯೂ ಕ್ಯಾಮೆರಾ ಸಹ ಲಭ್ಯವಿದೆ. ಈ ಕಾರು ನವೀಕರಿಸಿದ ವೈಶಿಷ್ಟ್ಯಗಳೊಂದಿಗೆ ತನ್ನ ವಿಭಾಗದಲ್ಲಿ ಅತ್ಯುತ್ತಮ ಸ್ಥಳ ಮತ್ತು ಸೌಕರ್ಯವನ್ನು ನೀಡುತ್ತದೆ. ಇನ್ನು ಸುರಕ್ಷತೆ ವಿಷಯಕ್ಕೆ ಬಂದರೆ ಜಾಗತಿಕ NCAP ಕ್ರ್ಯಾಶ್ ಟೆಸ್ಟ್‌ನಲ್ಲಿ ಟ್ರೈಬರ್‌ಗೆ 4-ಸ್ಟಾರ್ ರೇಟಿಂಗ್ ನೀಡಲಾಗಿದೆ.

Renault Triber 7 Seater Car
Image Credit: Hindustan Times

ರೆನಾಲ್ಟ್ ಟ್ರೈಬರ್ (Renault triber) ಕಾರಿನ ಎಂಜಿನ್ ಸಾಮರ್ಥ್ಯ ಮತ್ತು ಮೈಲೇಜ್
ರೆನಾಲ್ಟ್ ಟ್ರೈಬರ್ ಕಾರು 1-ಲೀಟರ್ ನ್ಯಾಚುರಲ್ಲಿ ಆಸ್ಪಿರೇಟೆಡ್ 3-ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಇದು 72 bhp ಗರಿಷ್ಠ ಪವರ್ ಮತ್ತು 96 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಕಾರು 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ AMT ಗೇರ್‌ಬಾಕ್ಸ್ ಆಯ್ಕೆಯನ್ನು ಹೊಂದಿದೆ. ಈ ಕಾರು 20 ಕಿ.ಮೀ ಮೈಲೇಜ್ ನೀಡುತ್ತದೆ.

Renault Triber Price

ರೆನಾಲ್ಟ್ ಟ್ರೈಬರ್ ಕಾರಿಗೆ ಭಾರತದಲ್ಲಿ ಯಾವುದೇ ನೇರ ಪ್ರತಿಸ್ಪರ್ಧಿಗಳು ಇಲ್ಲ. ಏಕೆಂದರೆ ಇದರ ಬೆಲೆಯಲ್ಲಿ ಇನ್ಯಾವುದೇ 7 ಸೀಟರ್ ಕಾರು ಇಲ್ಲ. ಹಾಗಾಗಿ ಬೆಲೆಯನ್ನು ಮಾತ್ರ ಪರಿಗಣಿಸಿದರೆ, ಈ ವಿಭಾಗದಲ್ಲಿ ಮಾರುತಿ ಸ್ವಿಫ್ಟ್ ಮತ್ತು ಹ್ಯುಂಡೈ ಗ್ರಾಂಡ್ ಐ10 ನಿಯೋಸ್‌ನೊಂದಿಗೆ ಸ್ಪರ್ಧಿಸುತ್ತದೆ. ಹಾಗೆಯೇ ಮಹೀಂದ್ರಾ ಬೊಲೆರೊವನ್ನು ಸಹ ಸ್ಪರ್ಧಿ ಎಂದು ಪರಿಗಣಿಸಬಹುದು. ರೆನಾಲ್ಟ್ ಟ್ರೈಬರ್ 7-ಆಸನಗಳ ಕಾರಿನ ಬೆಲೆ ರೂ. 6.3 ಲಕ್ಷದಿಂದ ಆರಂಭವಾಗಿ ರೂ. 8.97 ಲಕ್ಷ (ಎಕ್ಸ್ ಶೋ ರೂಂ)ವೆರೆಗೆ ಇದೆ. ಕಂಪನಿಯು ಇದನ್ನು RXE, RXL, RXT ಮತ್ತು RXZ ಎಂಬ ನಾಲ್ಕು ರೂಪಾಂತರಗಳಲ್ಲಿ ಮಾರಾಟ ಮಾಡುತ್ತಿದೆ.

Leave A Reply

Your email address will not be published.