Renjusha Menon: ಫ್ಲಾಟ್ ನಲ್ಲಿ ಶವವಾಗಿ ಪತ್ತೆಯಾದ ಖ್ಯಾತ ನಟಿ, ನಟಿಯ ಸಾವಿನ ಹಿಂದೆ ಸಾವಿರ ಅನುಮಾನ.
ಖ್ಯಾತ ಮಲಯಾಳಂ ನಟಿ ಫ್ಲಾಟ್ ನಲ್ಲಿ ಶವವಾಗಿ ಪತ್ತೆಯಾಗಿ.
Renjusha Menon Death: ಅಕ್ಟೋಬರ್ 30 ,2023 ರಂದು ಚಲನಚಿತ್ರ ನಟಿ ಹಾಗು ಕಿರುತರೆಯ ನಟಿ ರೆಂಜೂಷಾ ಮೆನನ್ (Renjusha Menon) ಅವರ ಆತ್ಮಹತ್ಯೆ ವಿಚಾರ ಸುದ್ದಿ ಆಗಿದ್ದು, ನಟಿ ರೆಂಜೂಷಾ ಮೆನನ್ ಅವರು ಹಲವಾರು ಸಿನಿಮಾ ಹಾಗು ಧಾರಾವಾಹಿಯಲ್ಲಿ ನಟಿಸಿದ್ದಾರೆ.
35 ವರ್ಷದ ಈ ನಟಿ ತಿರುವನಂತಪುರಂನ ಶ್ರೀಕಾರ್ಯಂನಲ್ಲಿರುವ ತಮ್ಮ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಈ ನಟಿಯ ಸಾವಿನ ಹಿಂದೆ ಹಲವಾರು ಅನುಮಾನಗಳಿದ್ದು, ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಮಾತುಗಳು ಕೂಡ ಕೇಳಿ ಬರುತ್ತಿದೆ ಎನ್ನಲಾಗಿದೆ.
ಹಲವು ಸಿನಿಮಾ ಹಾಗು ಧಾರಾವಾಹಿಯಲ್ಲಿ ನಟಿಸಿದ ನಟಿ
ರೆಂಜೂಷಾ ಮೆನನ್ ಅವರ ಅಭಿನಯಕ್ಕೆ ಹಲವು ಅವಕಾಶಗಳು ಸಿಗುತ್ತಿದ್ದು, ಈಕೆ ಅನೇಕ ಸಿನಿಮಾ ಹಾಗು ಧಾರಾವಾಹಿಯಲ್ಲಿ ನಟಿಸಿದ್ದಾರೆ. ಅಷ್ಟೇ ಅಲ್ಲದೆ ಈಕೆ ಪೋಷಕ ಪಾತ್ರದಲ್ಲಿ ಅದ್ಭುತ ದ್ವೀಪ (2005), ತಾಳಪ್ಪಾವು (2008), ಒನ್ ವೇ ಟಿಕೆಟ್ (2008), ಮೇರಿಕ್ಕುಂಡೋರು ಕುಂಜಾಡು (2010), ಕಾರ್ಯಸ್ಥಾನ (2010), ಕಾರ್ಯಸ್ಥಾನ (2010), ಬಾಂಬೆ 12 (2010 ಮಾರ್ಚ್ 12) ನಂತಹ ಹಲವಾರು ಪೋಷಕ ಪಾತ್ರಗಳನ್ನು ಮಾಡಿದ್ದಾರೆ.
ರೆಂಜೂಷಾ ಮೆನನ್ ಅವರು ಸ್ತ್ರೀ ಧಾರಾವಾಹಿಯ ಮೂಲಕ ನಟಿಯಾಗಿ ಪಾದಾರ್ಪಣೆ ಮಾಡಿದರು. ಅದರ ನಂತರ, ಅವರು ಆನಂದ ರಾಗಂ (2022), ವರನ್ ಡಾಕ್ಟರನು (2023), ಎಂಟೆ ಮಾಥಾವು (2020) ಮತ್ತು ಮಿಸೆಸ್ ಹಿಟ್ಲರ್ (2021) ನಂತಹ 20 ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಹಾಗು ಇವರು ಸೆಲೆಬ್ರಿಟಿ ಕುಕರಿ ಶೋ ಸೆಲೆಬ್ರಿಟಿ ಕಿಚನ್ ಮ್ಯಾಜಿಕ್‌ನಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡರು.
ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿರುವ ನಟಿ ಆತ್ಮಹತ್ಯೆಗೆ ಶರಣಾಗಿದ್ದಾರೆ
ಚಿತ್ರರಂಗದಲ್ಲಿ ಛಾಪನ್ನು ಹೊಂದಿರುವ ನಟಿ ವ್ಯಯಕ್ತಿಕವಾಗಿ ಅನೇಕ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎಂದು ಸ್ಥಳೀಯ ವರದಿಗಳು ಹೇಳಿವೆ. ಈ ನಟಿ ಬಹಳ ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದರು ಹಾಗು ಕೆಲವು ವ್ಯಯಕ್ತಿಕ ಕಾರಣಗಳು ಈಕೆ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಎನ್ನಲಾಗಿದೆ. ಆದರೆ ಕೆಲವರು ಇದು ಆತ್ಮಹತ್ಯೆ ಅಲ್ಲ ಕೊಲೆ ಎಂದು ಕೂಡ ಹೇಳುತ್ತಿದ್ದಾರೆ ಎಂದು ವರದಿ ಆಗಿದೆ.