Revolt: ಒಮ್ಮೆ ಚಾರ್ಜ್ ಮಾಡಿದರೆ 85 ಕಿಲೋಮೀಟರ್ ಮೈಲೇಜ್, ಅಗ್ಗದ ಬೈಕ್ ಖರೀದಿಸಲು ಜನಸಂದಣಿ.
೮೫ ಕಿಲೋಮೀಟರ್ ಮೈಲೇಜ್ ಕೊಡುವ ರೆವೊಲ್ಟ್ ಬೈಕ್ ಜನರ ಮೆಚ್ಚುಗೆಗೆ ಕಾರಣವಾಗಿದೆ.
Revolt RV 400 Electric Bike: ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಪ್ರತಿಷ್ಠಿತ ಎಲೆಕ್ಟ್ರಿಕ್ ವಾಹನ (Electric Vehicle) ತಯಾರಾಕ ಕಂಪನಿಗಳು ಹೊಸ ಹೊಸ ಮಾದರಿಯ ಎಲೆಕ್ಟ್ರಿಕ್ ವಾಹನಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿರುತ್ತವೆ. ಇದೀಗ ಜನಪ್ರಿಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಾಕ ಕಂಪನಿಯದ ರಿವೋಲ್ಟ್ ಮೋಟರ್ಸ್ (Revolt) ತನ್ನ ಹೊಸ ಮಾದರಿಯ ಎಲೆಕ್ಟ್ರಿಕ್ ಬೈಕ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ರಿವೋಲ್ಟ್ RV 400 ಎಲೆಕ್ಟ್ರಿಕ್ ಬೈಕ್ ಬೆಲೆ
ಇದೀಗ ಎಲೆಕ್ಟ್ರಿಕ್ ಬೈಕ್ ಮಾರಾಟದಲ್ಲಿ ಮುಚೂಣಿ ಸಾದಿಸುತ್ತಿರುವ ರಿವೋಲ್ಟ್ ಕಂಪನಿ ತನ್ನ RV 400 ಎಲೆಕ್ಟ್ರಿಕ್ ಬೈಕ್ ಅನ್ನು ಬುಕ್ ಮಾಡುವ ಸಲುವಾಗಿ ಇ ಕಾಮೆರ್ಸ್ ಮರುಕಟ್ಟೆ ಸ್ಥಳವಾದ ಫ್ಲಿಪ್ ಕಾರ್ಟ್ ನೊಂದಿಗೆ ತನ್ನ ಸಹಯೋಗವನ್ನು ಘೋಷಿಸಿದೆ. ಹೊಸ ರಿವೋಲ್ಟ್ RV400 ಬೈಕ್ ಹೆಚ್ಚಿನ ಗ್ರಾಹಕರನ್ನು ಸೆಳೆಯಲಿದೆ. ರಿವೋಲ್ಟ್ RV 400 ಎಲೆಕ್ಟ್ರಿಕ್ ಬೈಕ್ ನ ಬೆಲೆಯೂ ಎಕ್ಸ್ ಶೋರೂಮ್ ಪ್ರಕಾರ 1.17 ಲಕ್ಷವಾಗಿದೆ.
ರಿವೋಲ್ಟ್ RV 400 ಎಲೆಕ್ಟ್ರಿಕ್ ಬೈಕ್ ಮೈಲೇಜ್
ರಿವೋಲ್ಟ್ RV 400 ಎಲೆಕ್ಟ್ರಿಕ್ ಬೈಕ್ ನಾ ಬ್ಯಾಟರಿ ಸಾಮರ್ಥ್ಯದ ಬಗ್ಗೆ ಹೇಳುದಾದರೆ 3.24kWh Li-ion ಬ್ಯಾಟರಿ ಪ್ಯಾಕ್ ಮತ್ತು 3 kW ಮಿಡ್ ಡ್ರೈವ್ ಎಲೆಕ್ಟ್ರಿಕ್ ಮೋಟಾರ್ ಅನ್ನು ಅಳವಡಿಸಲಾಗಿದೆ. ಇಲೆಕ್ಟ್ರಿಕ್ ಬೈಕ್ 85 ಕಿಲೋಮೀಟರ್ ಮೈಲೇಜ್ ಅನ್ನು ನೀಡುತ್ತದೆ. ಈ ಬೈಕ್ ಸಂಪೂರ್ಣ ಚಾರ್ಜ್ ಆಗಲು 4.5 ಗಂಟೆ ಗಳ ಅವಧಿ ಬೇಕಾಗುತ್ತದೆ.

ರಿವೋಲ್ಟ್ RV 400 ಎಲೆಕ್ಟ್ರಿಕ್ ಬೈಕ್ ಫೀಚರ್ಸ್
ಹೊಸ ರಿವೋಲ್ಟ್ RV 400 ಎಲೆಕ್ಟ್ರಿಕ್ ಬೈಕ್ಅನ್ನು ಸೀಮಿತ ಸಂಖ್ಯೆಯಲ್ಲಿ ಮಾರಾಟ ಮಾಡಲಾಗುತ್ತದೆ. ಈ ಹೊಸ ಬೈಕ್ ನಾ ವಿತರಣೆಯು ಅಕ್ಟೋಬರ್ ನಿಂದ ಆರಂಭವಾಗುತ್ತದೆ. ಹಾಗೇ LED ಹೆಡ್ ಲ್ಯಾಂಪ್, ರೈಡ್ ಮೂಡ್ ಗಳು, ಮೊಬೈಲ್ ಅಪ್ಲಿಕೇಶನ್ ಕನೆಕ್ಟ್ ಅನ್ನು ಪಡೆದಿದೆ.