Rice Price: ದೀಪಾವಳಿ ಹಬ್ಬದ ಖುಷಿಯಲ್ಲಿದ್ದ ಜನರಿಗೆ ಬೇಸರದ ಸುದ್ದಿ, ಅಕ್ಕಿ ಬೆಲೆಯಲ್ಲಿ ಮತ್ತೆ ಇಷ್ಟು ಏರಿಕೆ.
ದಿನ ಬಳಕೆಯ ದಿನಸಿ ಆದ ಅಕ್ಕಿ ಬೆಲೆಯಲ್ಲಿ ಬಾರೀ ಏರಿಕೆ, ಅಕ್ಕಿ ಬೆಲೆ ಕೇಳಿ ಜನ ಸಾಮಾನ್ಯರು ತತ್ತರ
Rice Price Hike: ರಾಜ್ಯದಲ್ಲಿ ಈ ವರ್ಷ ಬರಗಾಲ ಪ್ರಾರಂಭ ಆಗಿದೆ. ಮುಂಗಾರು ಮಳೆಯೇ ರೈತರಿಗೆ ಕೈ ಕೊಟ್ಟಿದ್ದು, ಬೆಳೆ ನಾಶಗಳ ಜೊತೆ ದಿನನಿತ್ಯದ ದಿನಸಿ ಸಾಮಗ್ರಿಗಳ ಬೆಲೆ ಗಗನಕ್ಕೆ ಏರುತ್ತಿದೆ.ರಾಜ್ಯದಲ್ಲಿ ಮಳೆ ತುಂಬ ಕಡಿಮೆ ಬಿದ್ದಿರುವುದು ನಮಗೆ ತಿಳಿದಿದೆ. ಮಳೆ ಸರಿಯಾಗಿ ಬಾರದ ಕಾರಣ ಬೆಳೆಗಳು ಹಾಳಾಗಿದೆ.
ಅಷ್ಟೇ ಅಲ್ಲದೆ ಈಗಾಗಲೇ ಫ್ರೀ ಯೋಜನೆಗಳ ಪ್ರಭಾವದಿಂದ ಬೇಳೆ ಕಾಳು , ಹಾಲು, ಹಾಗು ಇನ್ನಿತರ ದಿನಸಿ ಸಾಮಗ್ರಿಗಳ ಬೆಲೆ ಜಾಸ್ತಿ ಆಗಿದ್ದು, ಟೊಮೇಟೊ ಹಾಗು ಈರುಳ್ಳಿ ಬೆಲೆ ಕೂಡ ಗಗನಕ್ಕೆ ಏರಿತ್ತು. ಆದರೆ ಈಗ ರಾಜ್ಯದ ಪ್ರಮುಖ ಆಹಾರ ಪದಾರ್ಥ ಆದ ಅಕ್ಕಿ ಬೆಲೆ ಕೂಡ ಹೆಚ್ಚಾಗಿದೆ.

ಬೆಲೆ ಏರಿಕೆಯಿಂದ ಜನ ಸಾಮಾನ್ಯರು ತತ್ತರ
ರಾಜ್ಯದಲ್ಲಿ ಮಳೆ ಸರಿಯಾಗಿ ಬರದೇ ಇದ್ದ ಕಾರಣ ಅಕ್ಕಿ ಬೆಲೆಯಲ್ಲಿ ಏರಿಕೆ ಆಗುತ್ತಿದೆ. ನಮ್ಮಲ್ಲಿ ಅಕ್ಕಿ ಉಪಯೋಗ ಹೆಚ್ಚಾಗಿರುವುದರಿಂದ ಅಕ್ಕಿ ಬೆಲೆ ಹೆಚ್ಚಳ ಜನರ ಮೇಲೆ ನೇರ ಪರಿಣಾಮ ಬೀರುತ್ತದೆ. ಅನ್ನ ವನ್ನೇ ಹೆಚ್ಚು ಊಟ ಮಾಡುವ ನಮಗೆ ಅಕ್ಕಿ ಖರೀದಿ ಮಾಡುವುದೆಂದರೆ ತುಂಬ ಕಷ್ಟಕರ ಆಗಲಿದೆ. ದಿನದಿಂದ ದಿನಕ್ಕೆ ಅಕ್ಕಿ ಬೆಲೆ ಹೀಗೆ ಹೆಚ್ಚಾಗುತ್ತಿರುವುದು ಜನ ಸಾಮಾನ್ಯರಿಗೆ ನುಂಗಲಾರದ ತುತ್ತಾಗಿದೆ.
ಅಕ್ಕಿ ಬೆಲೆ ಗಗನಕ್ಕೇರಿದೆ
ಮಳೆ ಕೊರತೆಯಿಂದಾಗಿ ರಾಜ್ಯದಲ್ಲಿ ಈ ಬಾರಿಯ ಮುಂಗಾರಿನಲ್ಲಿ ಶೇ. 15-20 ಕ್ಕಿಂತ ಹೆಚ್ಚಿನ ಭತ್ತ ಹಾನಿಯಾಗಿದೆ. ಹೀಗಾಗಿ ಮಾರುಕಟ್ಟೆಗೆ ಬೇಡಿಕೆಗೆ ತಕ್ಕಷ್ಟು ಅಕ್ಕಿ ಪೂರೈಕೆ ಆಗುತ್ತಿಲ್ಲ.

ಪರಿಣಾಮ ಅಕ್ಕಿ ಬೆಲೆಯಲ್ಲಿ ಏರಿಕೆಯಾಗುತ್ತಿದೆ ಎನ್ನಲಾಗಿದೆ.ಇದರಿಂದಾಗಿ ಜನಸಾಮಾನ್ಯರು ತತ್ತರಿಸುವಂತಾಗಿದೆ. ರಾಜ್ಯದಲ್ಲಿ ಕಳೆದ 15 ದಿನಗಳಲ್ಲಿ ಅಕ್ಕಿಗಳ ಬೆಲೆಯೂ ಪ್ರತಿ 26 ಕೆಜಿ ಚೀಲಕ್ಕೆ 80 ರೂ.ನಿಂದ 260 ರೂ.ವರೆಗೆ ಹೆಚ್ಚಳವಾಗಿದೆ. ಅಂದರೆ ಪ್ರತಿ ಕೆಜಿಗೆ 3 ರಿಂದ 10 ರೂ.ವರೆಗೆ ಹೆಚ್ಚಳವಾಗಿದೆ. ಬಾಸ್ಮತಿ ಅಕ್ಕಿ ಕೆಜಿಗೆ 90 ರಿಂದ 120 ರೂ.ವರೆಗೆ ತಲುಪಿದರೆ, ಕೋಲಂ ಸ್ಟೀಮ್ 55 ರಿಂದ 65 ರೂ. ಸೋನಾ ಸ್ಟೀಮ್ 48-55 ರೂ. ಸೋನಾ ಮಧ್ಯಮ 42-55 ರೂ. ದೋಸೆ ಅಕ್ಕಿ 35-40 ರೂ. ಇಡ್ಲಿ ಅಕ್ಕಿ 35-40 ರೂ.ವರೆಗೆ ಏರಿಕೆಯಾಗಿದೆ. ಇನ್ನು ಮುಂದಿನ ದಿನಗಳಲ್ಲಿ ಇನ್ನಷ್ಟು ಅಕ್ಕಿ ಬೆಲೆಯಲ್ಲಿ ಏರಿಕೆ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.