Rice Rate: ಉಚಿತ ಅಕ್ಕಿ ಬೆನ್ನಲ್ಲೇ ದೇಶದ ಎಲ್ಲಾ ಜನರಿಗೆ ಬೇಸರದ ಸುದ್ದಿ, ಬೆಲೆಯಲ್ಲಿ ಐತಿಹಾಸಿಕ ಏರಿಕೆ.
ಜನಸಾಮಾನ್ಯರಿಗೆ ಬೇಸರದ ಸುದ್ದಿ, ಏರಿಕೆಯತ್ತ ಮುಖ ಮಾಡಿದ ಅಕ್ಕಿ ದರ.
Rice Rate Hike: ಭಾರತ ದೇಶದಲ್ಲಿ ಅಕ್ಕಿ ಉಪಯೋಗ ಹೆಚ್ಚಾಗಿದ್ದು, ಇಲ್ಲಿನ ಜನ ಅಕ್ಕಿಯನ್ನೇ ಜಾಸ್ತಿ ಬಳಕೆ ಮಾಡುವುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಆದರೆ ಅಕ್ಕಿಯ ದರ ಕೇಳಿದರೆ ಬಳಕೆದಾರರಿಗೆ ಶಾಕ್ ಆಗುವುದು ಖಚಿತ.
ರಾಜ್ಯ, ದೇಶ ಮಾತ್ರವಲ್ಲದೇ, ವಿಶ್ವದ ಪ್ರಮುಖ ದೇಶಗಳಲ್ಲಿಯೂ ಅಕ್ಕಿಯ ದರ ಭಾರಿ ಏರಿಕೆ ಕಂಡಿದೆ. ಆಗಸ್ಟ್ ತಿಂಗಳಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಅಕ್ಕಿಯ ದರ ಶೇಕಡ 9.8ರಷ್ಟು ಏರಿಕೆ ಕಂಡಿದೆ ಎಂದು ಆಹಾರ ಮತ್ತು ಕೃಷಿ ಸಂಸ್ಥೆ -FAO ಸರಾಸರಿ ಆಹಾರದರ ಸೂಚ್ಯಂಕ ತಿಳಿಸಿದೆ.
ಅಕ್ಕಿ ಬೆಳೆ ಕಡಿಮೆಯಾಗಿದೆ
ದೇಶದಲ್ಲಿಯೇ ಮಳೆ ಕೊರತೆ ಕಂಡುಬಂದಿದ್ದು, ಸದ್ಯದ ಪರಿಸ್ಥಿತಿ ಗಮನಿಸಿದಾಗ ಈ ಬಾರಿ ರಾಜ್ಯದಲ್ಲಿ ಶೇಕಡ 50ರಷ್ಟು ಭತ್ತ ಬೆಳೆ ಕಡಿಮೆಯಾಗಬಹುದು. ಹೆಚ್ಚಿನ ಮಳೆಯಲ್ಲಿ ಶೇಕಡ 25 ರಿಂದ 30 ರಷ್ಟು ಹೆಚ್ಚುವರಿ ಬೆಳೆಯಾಗಬಹುದು. ಇಲ್ಲದಿದ್ದರೆ ಮುಂದಿನ ವರ್ಷ ಅಕ್ಕಿ ಕೊರತೆ ಎದುರಾಗಲಿದ್ದು, ಬೇಸಿಗೆ ಬೆಳೆ ಬಂದ ನಂತರ ಸ್ವಲ್ಪಮಟ್ಟಿಗೆ ಕೊರತೆ ಸರಿದೂಗಿಸಬಹುದಾಗಿದೆ.
ಅಕ್ಕಿ ರಫ್ತು ಮೇಲೆ ನಿರ್ಬಂಧ ಹೇರಲಾಗಿದೆ
ಕೊರೋನಾ ನಂತರ ಜಾಗತಿಕವಾಗಿ ಅಕ್ಕಿ ಬಳಕೆಯಲ್ಲಿ ಗಣನೀಯ ಪ್ರಮಾಣದಲ್ಲಿ ಹೆಚ್ಚಳ ಆಗಿದೆ. ಅಕ್ಕಿಗೆ ಬೇಡಿಕೆ ಹೆಚ್ಚಿದ್ದು, ಭಾರತದಿಂದ ಅಕ್ಕಿ ರಫ್ತು ಮೇಲೆ ನಿರ್ಬಂಧ ಹೇರಲಾಗಿದೆ. ಆದ್ರೆ ಅಕ್ಕಿ ದರ ಕಳೆದ 15 ವರ್ಷಗಳಲ್ಲೇ ಗರಿಷ್ಠವಾಗಿದೆ. ಹವಾಮಾನ ವೈಪರಿತ್ಯದಿಂದಾಗಿ ಪೂರೈಕೆಯಲ್ಲಿ ವ್ಯತ್ಯವಾಗಿರುವುದರಿಂದ ಬೆಲೆ ಏರಿಕೆಯಾಗಿದೆ ಎಂದು ಹೇಳಲಾಗಿದೆ. ಎರಡು ತಿಂಗಳ ಹಿಂದೆ ಇದ್ದ ಅಕ್ಕಿದರಕ್ಕಿಂತ ಈಗ 10 ರಿಂದ 20 ರೂ.ವರೆಗೆ ದುಬಾರಿಯಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಈ ದರಕ್ಕೆ ಶೇಕಡ 10ರಷ್ಟು ಸೇರಿಸಿ ಮಾರಾಟ ಮಾಡಲಾಗುತ್ತದೆ.
ಅಕ್ಕಿ ಬೆಲೆಯಲ್ಲಿ ಅಧಿಕ ಹೇರಿಕೆ
ಈ ವರ್ಷ ಅಕ್ಕಿ ಬೆಲೆ ಇನ್ನಷ್ಟು ಏರಿಕೆ ಆಗಿದ್ದು, ದೋಸೆ, ಇಡ್ಲಿ ಅಕ್ಕಿ ದರ 32 ರೂ. ನಿಂದ 40 ರೂ., ಸ್ಟೀಮ್ ಅಕ್ಕಿ ದರ 40 ರಿಂದ 50 ರೂ., ರಾ ರೈಸ್ ದರ 47 ರೂ. ನಿಂದ 54 ರೂ., ಕೊಲ್ಲಂ ರೈಸ್ ದರ 60 ರಿಂದ 62 ರೂ.ಗೆ ಏರಿಕೆಯಾಗಿದ್ದು, ಕುಚಲಕ್ಕಿ ದರ ಕೂಡ ಏರಿಕೆ ಕಂಡಿದೆ.
ಎಲ್ಲ ಬಗೆಗಿನ ಅಕ್ಕಿಯ ಬೆಲೆಯೂ ಹೆಚ್ಚಾಗಿದ್ದು, ಅಕ್ಕಿ ಬಳಕೆದಾರರಿಗೆ ತುಂಬ ಕಷ್ಟ ಆಗುವ ಪರಿಸ್ಥಿಸಿ ಇದಾಗಿದೆ. ಮುಂದೆ ಇನ್ನು ಅಕ್ಕಿ ಬೆಲೆ ಹೆಚ್ಚಾಗಬಹುದು ಯಾಕೆಂದರೆ ಈ ವರ್ಷದ ಮಳೆ ಕೃಷಿಕರಿಗೆ ಕೈ ಕೊಟ್ಟಿದ್ದು, ಎಲ್ಲರ ಭತ್ತದ ಬೆಳೆ ನಾಶವಾಗಿದೆ. ಅದ್ದುದರಿಂದ ಮುಂದಿನ ವರ್ಷ ದಲ್ಲಿ ಅಕ್ಕಿ ಬೆಲೆ ಇನ್ನು ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.