New Rules: ಇಂದಿನಿಂದ ದೇಶದಲ್ಲಿ ಬದಲಾಗಲಿದೆ ಈ ಎಲ್ಲಾ ನಿಯಮಗಳು, ನಿಮ್ಮ ಜೇಬಿಗೆ ಬೀಳಲಿದೆ ಕತ್ತರಿ.
ಇಂದಿನಿಂದ ಹಣಕಾಸು ಕ್ಷೇತ್ರದಲ್ಲಿ ಹಲವು ನಿಯಮಗಳು ಬದಲಾಗಲಿದೆ.
Rule Changes In September: ಪ್ರತಿಯೊಬ್ಬ ಜನ ಸಾಮಾನ್ಯನ ಜೀವನ ತಿಂಗಳ ಮೊದಲ ದಿನದಿಂದ ಪ್ರಾರಂಭ ಆಗುವುದು ಸಹಜ, ಅದರಂತೆ ಹಣಕಾಸಿನ ಬದಲಾವಣೆಗಳು ಕೂಡ ಆಗುವುದು. ಹೀಗೆ ಪ್ರತಿ ತಿಂಗಳಿನಂತೆ ಸೆಪ್ಟೆಂಬರ್ ತಿಂಗಳಲ್ಲೂ ಈ ಬದಲಾವಣೆಗಳು ಮುಂದುವರೆಯಲಿದೆ.
ಅದರಲ್ಲೂ ವಿಶೇಷವಾಗಿ 2000 ಸಾವಿರ ರೂಪಾಯಿ ನೋಟುಗಳ ಠೇವಣಿ ಹಾಗು ವಿನಿಮಯ, ಆಧಾರ್ ಕಾರ್ಡ್ ಸಂಖ್ಯೆಯನ್ನು ಸಣ್ಣ ಉಳಿತಾಯ ಯೋಜನೆಗಳಲ್ಲಿ ಲಿಂಕ್ ಮಾಡುವುದು ಹಾಗೂ ಆಧಾರ್ ಕಾರ್ಡ್ ನವೀಕರಣಕ್ಕೆ ಸಂಬಂಧಿಸಿದಂತೆ ಮತ್ತು ಹಲವು ಬೇರೆ ನಿಯಮಗಳಲ್ಲಿ ಬದಲಾವಣೆ ಆಗುತ್ತದೆ.

ಸೆಪ್ಟೆಂಬರ್ ತಿಂಗಳ ಹೊಸ ಬದಲಾವಣೆಗಳು ಏನಿರಬಹುದು.
LPG ಗ್ಯಾಸ್ ಸಿಲಿಂಡರ್ ಬೆಲೆ ಹೆಚ್ಚಾಗಬಹುದೇ ?
LPG ಗ್ಯಾಸ್ ಸಿಲಿಂಡರ್ ಬೆಲೆ ಈಗಾಗಲೇ ಗಗನಕ್ಕೆ ಏರಿದ್ದು, ಗ್ರಾಹಕರಿಗೆ ಸಿಲಿಂಡರ್ ಖರೀದಿ ಮಾಡುವುದು ಕಷ್ಟಕರವಾಗಿದೆ. ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಅಥವಾ ಇಳಿಕೆಯ ಬಗ್ಗೆ ಪ್ರತಿ ತಿಂಗಳ ಮೊದಲ ದಿನದಂದು ತೈಲ ಕಂಪನಿ ಪರಿಷ್ಕರಿಸಿ ನಿರ್ಧರಿಸುತ್ತದೆ. ಹಾಗಾಗಿ ಮುಂದಿನ ತಿಂಗಳಲ್ಲಿ LPG ಗ್ಯಾಸ್ ಸಿಲಿಂಡರ್ ಬೆಲೆ ಹೆಚ್ಚು ಅಥವಾ ಕಡಿಮೆ ಏನಾಗಬಹುದೆಂದು ಕಾದುನೋಡಬೇಕಿದೆ.

ಆದಾಯ ತೆರಿಗೆ ಪಾವತಿ
ಆದಾಯ ಹೆಚ್ಚಿಗೆ ಪಾವತಿ ಮಾಡುವವರು ಈಗಾಗಲೇ ಆದಾಯ ತೆರಿಗೆ ಪಾವತಿಸಿರುತ್ತಾರೆ. ಎರಡನೇ ಮುಂಗಡ ತೆರಿಗೆ ಪಾವತಿ ಕಂತು ಪಾವತಿಸಲು ಕೊನೆಯ ದಿನಾಂಕ ಸೆಪ್ಟೆಂಬರ್ 15 ಆಗಿರುತ್ತದೆ.

2000 ನೋಟುಗಳ ವಿನಿಮಯ
RBI 2023 ಮೇ 19 ರಂದು 2000 ರೂಪಾಯಿ ನೋಟುಗಳನ್ನು ಹಿಂಪಡೆಯುದಾಗಿ ಘೋಷಿಸಿತು. ಅದಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ 30 ರ ವರೆಗೆ 2000 ರೂಪಾಯಿ ನೋಟುಗಳನ್ನು ಬ್ಯಾಂಕ್ ಗಳಲ್ಲಿ ಠೇವಣಿ ಮಾಡಬಹುದು ಅಥವಾ ಯಾವುದೇ ಬ್ಯಾಂಕ್ ಗಳಲ್ಲಿ ವಿನಿಮಯ ಮಾಡಿಕೊಳ್ಳಬಹುದು ಎಂದು ಬ್ಯಾಂಕ್ ಹೇಳಿಕೆಯಲ್ಲಿ ತಿಳಿಸಿದೆ.
ಆದಾಗಿಯೂ ಜೂಲೈ 20 ರಂದು ಪ್ರಾರಂಭವಾದ ಲೋಕಸಭಾ ಅಧಿವೇಶನದಲ್ಲಿ ಹಣ ವಿನಿಮಯದ ಗಡುವಿನ ವಿಸ್ತರಣೆಯ ಬಗ್ಗೆ ಹಣಕಾಸು ರಾಜ್ಯ ಸಚಿವ ಪಂಕಜ್ ಚೌದರಿ ಲಿಖಿತ ರೂಪದಲ್ಲಿ ಉತ್ತರಿಸಿದ್ಧಾರೆ. ಈಗಾಗಲೇ RBI 4 ತಿಂಗಳ ಸಮಯ ನೀಡಿದ್ದು ಸೆಪ್ಟೆಂಬರ್ 30 ರ ವರೆಗೆ 2000 ರೂಪಾಯಿ ನೋಟುಗಳನ್ನು ಬ್ಯಾಂಕ್ ಗಳಲ್ಲಿ ಠೇವಣಿ ಮಾಡಬಹುದು ಎಂದು ಸ್ಪಷ್ಟನೆ ನೀಡಿದ್ಧಾರೆ.

ಹಿರಿಯ ನಾಗರಿಕರಿಗೆ ವಿಶೇಷ ಸ್ಥಿರ ಠೇವಣಿ ಯೋಜನೆ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಿರಿಯ ನಾಗರಿಕರಿಗೆ ವಿಶೇಷ ಸ್ಥಿರ ಠೇವಣಿ ಯೋಜನೆಯ ಗಡುವನ್ನು ಸೆಪ್ಟೆಂಬರ್ 30 ರ ವರೆಗೆ ವಿಸ್ತರಿಸಿದ್ಧು SBI ನ ವೀಕೇರ್ ಯೋಜನೆಯು 5 ರಿಂದ 10 ವರ್ಷಗಳ ಅವಧಿಯಲ್ಲಿ ಹೂಡಿಕೆದಾರರಾಗಿರುವ ಹಿರಿಯ ನಾಗರಿಕರಿಗೆ ಹೆಚ್ಚಿಗೆ ಬಡ್ಡಿ ದರವನ್ನು ನೀಡುತ್ತಿದೆ.

ಉಚಿತ ಆಧಾರ್ ನವೀಕರಣಕ್ಕೆ ಅವಕಾಶ
ಆಧಾರ್ ಕಾರ್ಡ್ ಗೆ ಯಾವುದೇ ಸೇರ್ಪಡೆ ಅಥವಾ ಬದಲಾವಣೆ ಮಾಡುವುದಾದಲ್ಲಿ ಗುರುತಿನ ಪ್ರಾಧಿಕಾರ ಜೂನ್ ತಿಂಗಳಲ್ಲಿ ಗಡುವನ್ನು ವಿಸ್ತರಿಸಿತು ಹಾಗು ಆ ಗಡುವು ಸೆಪ್ಟೆಂಬರ್ 14 ಮಾತ್ರ ಎಂದು ತಿಳಿಸಲಾಗಿದೆ.

IDBI ಅಮೃತ ಮಹೋತ್ಸವ ವಿಶೇಷ ಸ್ಥಿರ ಠೇವಣಿ ಯೋಜನೆ
IDBI ಬ್ಯಾಂಕ್ ತನ್ನ ವಿಶೇಷ ಸ್ಥಿರ ಠೇವಣಿ ಯೋಜನೆ ಅಡಿಯಲ್ಲಿ ಎರಡು ಅವಧಿಯ ಅವಧಿಗೆ 7.10 ರಿಂದ 7.65 ರವರೆಗೆ ಬಡ್ಡಿದರ ನೀಡುತ್ತಿದ್ದು, ವಿಶೇಷ ಸ್ಥಿರ ಠೇವಣಿ ಯೋಜನೆಯನ್ನು ಅಮೃತ ಮಹೋತ್ಸವಕ್ಕೆ ಸೇರುವ ಗಡುವನ್ನು ವಿಸ್ತರಿಸಿದೆ. ಈ ಯೋಜನೆಯಡಿ ಸಾಮಾನ್ಯ ವ್ಯಕ್ತಿಗಳಿಗೆ ಹೋಲಿಸಿದರೆ ಹಿರಿಯನಾಗರೀಕರು ಹೆಚ್ಚಿಗೆ ಬಡ್ಡಿದರ ಪಡೆಯುತ್ತಾರೆ.