Rusk Business: ಮನೆಯ ಸಣ್ಣ ರೂಮ್ ನಲ್ಲಿ ಆರಂಭಿಸಿ ರಸ್ಕ್ ಫ್ಯಾಕ್ಟರಿ, ಪ್ರತಿ ತಿಂಗಳು 50 ಸಾವಿರಕ್ಕೂ ಅಧಿಕ ಲಾಭ.

ಕಡಿಮೆ ಹಣದ ಹೂಡಿಕೆಯಲ್ಲಿ ಈ ರಸ್ಕ್ ವ್ಯವಹಾರವನ್ನು ಪ್ರಾರಂಭಿಸಿದರೆ ಪ್ರತಿ ತಿಂಗಳು ಲಕ್ಷ ಲಕ್ಷ ಹಣವನ್ನು ಪಡೆಯಬಹುದು.

Rusk Business Profit: ಪ್ರತಿಯೊಬ್ಬರೂ ಕೂಡ ಸ್ವಂತ ವ್ಯವಹಾರವನ್ನು (Own Business) ಮಾಡುವ ಕನಸನ್ನು ಕಾಣುತ್ತಾರೆ. ತಮ್ಮದೇ ಸ್ವಂತ ವ್ಯವಹಾರ ಇರಬೇಕು ಎಂದು ಎಲ್ಲರು ಆಲೋಚಿಸುವುದು ಸಹಜ. ಹಾಗೆಯೆ ಹೆಚ್ಚಿನ ಜನರು ಸ್ವಂತ ಉದ್ಯೋಗಕ್ಕೆ ಕೈಹಾಕುವ ಮುನ್ನ ಅದಕ್ಕೆ ಬೇಕಾಗುವ ಬಂಡವಾಳದ ಬಗ್ಗೆ ಯೋಚಿಸುತ್ತಾರೆ. ಕಡಿಮೆ ಬಂಡವಾಳದ ವ್ಯವಹಾರ ಯಾವುದಾದರು ಇದೆಯಾ ಎನ್ನುವುದನ್ನು ನೋಡುತ್ತಾರೆ. ಇನ್ನು ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಲಾಭ ನೀಡುವ ಸಾಕಷ್ಟು ವ್ಯವಹಾರಗಳಿವೆ.

Rusk business will give more profit
Image Credit: Indiabusinesstrade

ಹೆಚ್ಚಿನ ಲಾಭ ನೀಡಲಿದೆ ರಸ್ಕ್ (Rusk) ವ್ಯವಹಾರ
ಹೆಚ್ಚಿನ ಜನರು ಬೆಳಿಗ್ಗೆ ಚಹಾ, ಕಾಫಿ ಕುಡಿಯುವ ಹವ್ಯಾಸವನ್ನು ಇಟ್ಟುಕೊಳ್ಳುತ್ತಾರೆ. ಚಹಾ, ಕಾಫಿಯಾ ಜೊತೆಗೆ ರಸ್ಕ್ ಅನ್ನು ಕೂಡ ತಿನ್ನಲು ಇಷ್ಟಪಡುತ್ತಾರೆ. ಈ ಚಹಾ, ಕಾಫಿಯಾ ಜೊತೆ ತಿನ್ನುವ ರಸ್ಕ್ ಅನ್ನು ಮಾಡುವುದು ಕೂಡ ಒಂದು ರೀತಿಯ ವ್ಯಾಪಾರವಾಗಿದೆ. ಕಡಿಮೆ ಬಜೆಟ್ ನಲ್ಲಿ ಅಧಿಕ ಲಾಭ ಗಳಿಸಲು ಈ ರಸ್ಕ್ ವ್ಯವಹಾರ ಒಂದು ಮೆಟ್ಟಿಲಾಗುತ್ತದೆ.

ಭಾರತೀಯ ಮಾರುಕಟ್ಟೆಯಲ್ಲಿ ಆಹಾರಕ್ಕೆ ಸಂಭಂದಪಟ್ಟ ಎಲ್ಲರ ವ್ಯವಹಾರಗಳು ಹೆಚ್ಚು ಯಶಸ್ವಿಯಾಗುತ್ತದೆ. ಸಾಕಷ್ಟು ಕಂಪನಿಗಳು ಆಹಾರ ಮತ್ತು ಪಾನೀಯವನ್ನು ತಯಾರಿಸಿ ಮಾರುಕಟ್ಟೆಯಲ್ಲಿ ನೆಲೆಯೂರಿದೆ. ಇದೀಗ ರಸ್ಕ್ ಮಾಡುವ ವ್ಯವಹಾರವನ್ನು ಯಾವ ರೀತಿ ಪ್ರಾರಂಭಿಸುವುದು ಹಾಗು ಅದರಿಂದ ಯಾವ ರೀತಿ ಪ್ರಯೋಜನ ಸಿಗುತ್ತದೆ ಎನ್ನುವ ಬಗ್ಗೆ ವಿವರಣೆ ತಿಳಿಯೋಣ.

Rusk Business Profit
Image Credit: Krishijagran

ಮನೆಯ ಸಣ್ಣ ರೂಮ್ ನಲ್ಲಿ ಆರಂಭಿಸಿ ರಸ್ಕ್ ಫ್ಯಾಕ್ಟರಿ
ಮನೆಯಲ್ಲಿ ಕೂಡ ರಸ್ಕ್ ವ್ಯವಹಾರವನ್ನು ಬಹಳ ಸುಲಭವಾಗಿ ಮಾಡಬಹುದು. ರಸ್ಕ್ ವ್ಯವಹಾರಕ್ಕೆ ಬೇಕಾಗುವ ಕಚ್ಚಾ ಸಾಮಗ್ರಿಗಳು ಯಾವುವು ಎನ್ನುವುದರ ಬಗ್ಗೆ ಮಾಹಿತಿ ತಿಳಿಯೋಣ. ರಸ್ಕ್ ಅನ್ನು ಹಿಟ್ಟು, ಸಕ್ಕರೆ, ರವೆ, ತುಪ್ಪ, ಗ್ಲೂಕೋಸ್, ಹಾಲು ಕಸ್ಟರ್ಡ್, ಏಲಕ್ಕಿ, ಯೀಸ್ಟ್, ಬ್ರೆಡ್ ಸುಧಾರಣೆ ಮತ್ತು ಉಪ್ಪಿನಿಂದ ತಯಾರಿಸಲಾಗುತ್ತದೆ. ಈ ಎಲ್ಲ ವಸ್ತುಗಳು ಮಾರುಕಟ್ಟೆಯಲ್ಲಿ ಲಭ್ಯವಿರುತ್ತದೆ. ಸ್ಪೈರಲ್ ಮಿಕ್ಸರ್, ಡಿವೈಡರ್, ರಸ್ಕ್ ಮೋಲ್ಡ್‌ಗಳು, ರಸ್ಕ್ ಸ್ಲೈಸರ್, ರೋಟರಿ ರ್ಯಾಕ್ ಓವನ್, ಪ್ಯಾಕೇಜಿಂಗ್ ಮೆಷಿನ್ ಸೇರಿದಂತೆ ಇನ್ನಿತರ ಅಗತ್ಯವಿರುತ್ತದೆ.

ರಸ್ಕ್ ವ್ಯವಹಾರ ಮಾಡಲು ಪರವಾನಗಿ ಅಗತ್ಯ
ರಸ್ಕ್ ಮಾಡುವ ವ್ಯವಹಾರವನ್ನು ಪ್ರಾರಂಭಿಸಲು ಪರವಾನಗಿ ಅಗತ್ಯವಾಗಿದೆ. FSSAI ನಿಂದ ಪರವಾನಗಿ ಪಡೆಯುವುದು ಕಡ್ಡಾಯವಾಗಿದೆ. ಜಿಎಸ್‌ಟಿ ನೋಂದಣಿ, ಉದ್ಯೋಗ್ ಆಧಾರ್ ಪ್ರಮಾಣಪತ್ರ ಮತ್ತು ಅಗ್ನಿಶಾಮಕ ಇಲಾಖೆಯಿಂದ ಎನ್‌ಒಸಿ ಪ್ರಮಾಣಪತ್ರವೂ ಅಗತ್ಯವಿರುತ್ತದೆ. ಇನ್ನು ರಸ್ಕ್ ವ್ಯವಹಾರವನ್ನು ಮಾಡುವಾಗ ಕಾನೂನಿನ ಎಲ್ಲ ನಿಯಮವನ್ನು ಪಾಲಿಸಬೇಕಾಗುತ್ತದೆ.

Rusk business will give more profit
Image Credit: Indiabizforsale

ರಸ್ಕ್ ವ್ಯವಹಾರ ಮಾಡಲು ಬೇಕಾಗುವ ಹೂಡಿಕೆ ಎಷ್ಟು
ಈ ವ್ಯವಹಾರಕ್ಕೆ ಸಂಬಂಧಿಸಿದ ಹೂಡಿಕೆಯ ಬಗ್ಗೆ ಎಲ್ಲರು ಯೋಚಿಸುತ್ತಾರೆ. ದೊಡ್ಡ ಮಟ್ಟದಲ್ಲಿ ಉದ್ಯಮವನ್ನು ಪ್ರಾರಂಭಿಸಲು ನೀವು 25 ರಿಂದ 30 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಬೇಕಾಗುತ್ತದೆ. ನೀವು ಕೆಲವು ಯಂತ್ರಗಳಿಲ್ಲದೆ ಸಣ್ಣ ಪ್ರಮಾಣದಲ್ಲಿ ಪ್ರಾರಂಭಿಸಿ ಕೇವಲ 4 ರಿಂದ 5 ಲಕ್ಷ ರೂಪಾಯಿಗಳಲ್ಲಿ ಈ ವ್ಯವಹಾರವನ್ನು ಪ್ರಾರಂಭಿಸಬಹುದು. ಒಮ್ಮೆ ಇಷ್ಟು ಹಣದ ಹೂಡಿಕೆಯಲ್ಲಿ ವ್ಯವಹಾರವನ್ನು ಪ್ರಾರಂಭಿಸಿದರೆ ನೀವು ಪ್ರತಿ ತಿಂಗಳು ಲಕ್ಷ ಲಕ್ಷ ಹಣವನ್ನು ಪಡೆಯಬಹುದು.

Leave A Reply

Your email address will not be published.