S S Rajamouli: ಸಾಕಷ್ಟು ಹಿಟ್ ಸಿನಿಮಾ ನೀಡಿರುವ ರಾಜಮೌಳಿ ಅವರ ಒಟ್ಟು ಆಸ್ತಿ ಎಷ್ಟು ಗೊತ್ತಾ…? ಶ್ರೀಮಂತ ನಿರ್ದೇಶಕ.

ಸಾಕಷ್ಟು ಬೆಸ್ಟ್ ಚಿತ್ರಗಳನ್ನ ನೀಡಿರುವ ರಾಜಮೌಳಿ ಅವರ ಒಟ್ಟು ಆಸ್ತಿ ಎಷ್ಟು.

S S Rajamouli Remuneration: S S ರಾಜಮೌಳಿ (S.S Rajamouli) ಅವರು ತೆಲುಗು ಚಿತ್ರರಂಗದಲ್ಲಿ ಪ್ರಸಿದ್ದಿ ಪಡೆದ ನಿರ್ದೇಶಕರಾಗಿದ್ದು, ಇವರು ಅಕ್ಟೋಬರ್ 10 , 1973 ರಂದು ಕರ್ನಾಟಕದ ಮೈಸೂರು ಜಿಲ್ಲೆಯ ತೆಲುಗು ಕುಟುಂಬದಲ್ಲಿ ಜನಿಸಿದರು. ಅವರ ತಂದೆ ವಿ.ವಿಜೇಂದ್ರ ಪ್ರಸಾದ್ ಅವರು ಪ್ರಸಿದ್ಧ ಚಿತ್ರಕಥೆಗಾರರಾಗಿದ್ದಾರೆ.

ಎಸ್ ಎಸ್ ರಾಜಮೌಳಿ ಅವರ ಪೂರ್ಣ ಹೆಸರು ಕೊಡೂರಿ ಶ್ರೀಶೆಲ ಶ್ರೀ ರಾಜಮೌಳಿ. ಎಸ್ ಎಸ್ ರಾಜಮೌಳಿ ಇಂದು ಯಶಸ್ಸಿಗೆ ಮತ್ತೊಂದು ಹೆಸರಾಗಿದ್ದಾರೆ. ಅಕ್ಟೋಬರ್ 10, 50 ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಎಸ್.ಎಸ್.ರಾಜಮೌಳಿ ಇಂದು ಯಾವುದಾದರೂ ಚಿತ್ರ ಮುಟ್ಟಿದರೆ ಅದು ಗಲ್ಲಾಪೆಟ್ಟಿಗೆ ಕೊಳ್ಳೆ ಹೊಡೆಯೋದು ಫಿಕ್ಸ್‌.

Rajamouli Remuneration
Image Credit: News24online

ಹಲವು ಸೂಪರ್ ಹಿಟ್ ಸಿನಿಮಾ ನೀಡಿದ ನಿರ್ದೇಶಕ

ರಾಜಮೌಳಿ ತಮ್ಮ 23 ವರ್ಷಗಳ ವೃತ್ತಿಜೀವನದಲ್ಲಿ ಕೇವಲ 12 ಚಿತ್ರಗಳನ್ನು ಮಾಡಿದ್ದಾರೆ. ಆದರೆ ಅವೆಲ್ಲವೂ ಹಿಟ್ ಆಗಿವೆ.’ಬಾಹುಬಲಿ’, ಆರ್‌ಆರ್‌ಆರ್‌, ‘ಮಗಧೀರ’ ಚಿತ್ರಗಳನ್ನು ಮಾಡಿರುವ ಇವರು ತಮ್ಮ ಸಿನಿಮಾದಲ್ಲಿ ಯಾವ ನಟನಿಗೆ ಅವಕಾಶ ಕೊಟ್ಟರೂ ಸ್ಟಾರ್ ಆಗುವುದು ಗ್ಯಾರೆಂಟಿ. ಎಸ್‌ಎಸ್‌ ರಾಜಮೌಳಿ ಇಂದು ದೇಶದ ಅತ್ಯಂತ ದುಬಾರಿ ನಿರ್ದೇಶಕರಾಗಿದ್ದಾರೆ. ಇಂದು ಅವರು ಕೋಟ್ಯಂತರ ಮೌಲ್ಯದ ಆಸ್ತಿಯ ಒಡೆಯರಾಗಿದ್ದಾರೆ.

S S ರಾಜಮೌಳಿ ಯವರ ಒಟ್ಟು ಆಸ್ತಿಯ ವಿವರ

S S ರಾಜಮೌಳಿ ಯವರ ಕೈಗೆ ಒಂದು ಸಿನಿಮಾ ಸಿಕ್ಕಿತು ಅಂದರೆ ಆ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಆಗಿ ಹೊರಹೊಮ್ಮುತ್ತದೆ. ಈಗಾಗಲೇ ನಿರ್ದೇಶನ ಮಾಡಿದ ಸಿನಿಮಾಗಳು ಭರ್ಜರಿ ಹಿಟ್ ಆಗಿ ಕೋಟಿ ಗಟ್ಟಲೆ ಹಣ ಸಂಪಾದನೆ ಮಾಡಿದೆ.

S S Rajamouli Latest News
Image Credit: Timesofindia

ಇವರು ನಿರ್ದೇಶಿಸಿದ ಎಲ್ಲ ಸಿನಿಮಾಗಳು ಕೋಟಿ ಕೋಟಿ ಸಂಪಾದನೆ ಮಾಡಿದ್ದೂ, ಅಷ್ಟು ಸಂಪಾದನೆ ಮಡಿದ ಸಿನಿಮಾಗಳಿಂದ ನಿರ್ದೇಶಕರು ಪಡೆಯುವ ಲಾಭದ ಬಗ್ಗೆ ತಿಳಿದರೆ ಖಂಡಿತ್ ಶಾಕ್ ಆಗುವುದಂತೂ ಗ್ಯಾರೆಂಟಿ. ಹಲವು ವರದಿಗಳ ಪ್ರಕಾರ, 2023 ರಲ್ಲಿ ಎಸ್‌ಎಸ್ ರಾಜಮೌಳಿ ಅವರ ನಿವ್ವಳ ಮೌಲ್ಯವು 300 ಕೋಟಿ ರೂ. ಅಂದರೆ ಸುಮಾರು 3 ಬಿಲಿಯನ್ ರೂ. ಆಗಿದೆ. ಅವರು ಒಂದು ಚಿತ್ರಕ್ಕೆ 100-120 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ. ಹಾಗಾಗಿ ಈ ನಿರ್ದೇಶಕರನ್ನು ಕೋಟಿ ಕೋಟಿಯ ಒಡೆಯ ಎಂದು ಕರೆಯುವುದರಲ್ಲಿ ಯಾವುದೇ ತಪ್ಪಿಲ್ಲ ಎನ್ನಬಹುದು.

Leave A Reply

Your email address will not be published.