Tendulkar: ಪ್ರಧಾನಿ ಮೋದಿಗೆ ಉಡುಗೊರೆ ನೀಡಿದ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್, ಅಭಿಮಾನಿಗಳ ಮೆಚ್ಚುಗೆ.

ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ರವರಿಂದ ಪ್ರಧಾನಿ ಮೋದಿಯವರಿಗೆ ಸೂಪರ್ ಉಡುಗೊರೆ.

Sachin Tendulkar Gifts Indian Cricket Team Jersey To PM Modi: ಉತ್ತರ ಪ್ರದೇಶದ ವಾರಣಾಸಿಯಲ್ಲಿ ಪ್ರಧಾನಿ ಮೋದಿಯವರು ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂಗೆ ಶಂಕುಸ್ಥಾಪನೆ ಮಾಡಿದರು. ಒಂದೇ ವೇದಿಕೆಯಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಮಾಜಿ ಕ್ರಿಕೆಟಿಗ ರವಿಶಾಸ್ತ್ರಿ, ಸುನಿಲ್ ಗವಾಸ್ಕರ್, ದಿಲೀಪ್ ಹಾಗು ಸಚಿನ್ ತೆಂಡೂಲ್ಕರ್ (Sachin Tendulkar) ಕೂಡ ಭಾಗಿಯಾಗಿದ್ದರು.

ಆ ಸಂದರ್ಭದಲ್ಲಿ ಸಚಿನ್ ಅವರು ಪ್ರಧಾನಿ ಮೋದಿಗೆ (Narendr Modi)narendra modi wiki ಟೀಮ್ ಇಂಡಿಯಾ ಜೆರ್ಸಿಯನ್ನು ಉಡುಗೊರೆಯಾಗಿ ನೀಡಿದ್ದು, ಜರ್ಸಿ ನೀಡುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಮೋದಿಗೆ ನೀಡಿದ ಜೆರ್ಸಿ ಹಿಂಭಾಗದಲ್ಲಿ ‘ನಮೋ’ 1 ಅಂತ ಬರೆಯಲಾಗಿದೆ.

Sachin Tendulkar gifts Indian cricket team jersey to PM Modi
Image Credit: Zeenews

ನೂತನ ಅಂತರಾಷ್ಟ್ರೀಯ ಕ್ರೀಡಾಂಗಣ ನಿರ್ಮಾಣ

ವಾರಣಾಸಿ ‘ಕಾಶಿ’ಯಲ್ಲಿ ಶಿವನ ಸ್ವರೂಪಗಳಾದ ಡಮರುಗ, ಬಿಲ್ವಪತ್ರೆ ಹಾಗೂ ತ್ರಿಶೂಲಗಳನ್ನು ಹೋಲುವ ಆಕೃತಿಗಳೊಂದಿಗೆ ನೂತನ ಅಂತರಾಷ್ಟ್ರೀಯ ಕ್ರೀಡಾಂಗಣ ನಿರ್ಮಾಣವಾಗಲಿದೆ. ರಾಜ್ಯದ ಪ್ರತಿಯೊಬ್ಬ ಕ್ರೀಡಾ ಉತ್ಸಾಹಿ ಪರವಾಗಿ ನಾನು ಮೋದಿಯವರನ್ನು ಸ್ವಾಗತಿಸುತ್ತೇನೆ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ನೂತನ ಅಂತರಾಷ್ಟ್ರೀಯ ಕ್ರೀಡಾಂಗಣದ ಪ್ರಮುಖ ಸಂಗತಿಗಳು

ನೂತನ ಅಂತರಾಷ್ಟ್ರೀಯ ಕ್ರೀಡಾಂಗಣವು 30000 ಆಸನ ಸಾಮರ್ಥ್ಯ ವನ್ನು ಹೊಂದಿರುತ್ತದೆ ಮೆಟ್ಟಿಲುಗಳನ್ನು ಹೋಲುವ ಪ್ರೇಕ್ಷಕ ಗ್ಯಾಲರಿ ಇರುತ್ತದೆ. ಕ್ರೀಡಾಂಗಣವು 07 ಪೀಚ್ ಗಳನ್ನೂ ಹೊಂದಿರುತ್ತದೆ. ಡಿಸೆಂಬರ್ 2025 ರ ವೇಳೆಗೆ ಕ್ರೀಡಾಂಗಣ ಸಿದ್ಧವಾಗಲಿದೆ ಎನ್ನಲಾಗಿದೆ ಈ ಕ್ರೀಡಾಂಗಣವು ಭಗವಾನ್ ಶಿವನಿಂದ ಪ್ರೇರಿತವಾಗಿದೆ ಭಾರತೀಯ ಹಿಂದೂ ಶೈಲಿಯಲ್ಲಿ ವಾರಣಾಸಿಯ ಈ ಮೈದಾನ ಸಿದ್ಧವಾಗುತ್ತಿದ್ದು, ಎಲ್ಲರ ಆಕರ್ಷಣ ಕೇಂದ್ರ ಬಿಂದುವಾಗಲಿದೆ .

Leave A Reply

Your email address will not be published.