Tendulkar Record: ಕೊಹ್ಲಿ ಮತ್ತು ರೋಹಿತ್ ನಿಂದ ಸಚಿನ್ ಅವರ ಈ ದಾಖಲೆ ಮುರಿಯಲು ಸಾಧ್ಯವಿಲ್ಲ, ಸರ್ವಶ್ರೇಷ್ಠ ದಾಖಲೆ ಇದು.
ವಿಶ್ವಕಪ್‌ನಲ್ಲಿ ಸಚಿನ್ ದಾಖಲೆ ಮುರಿಯಲು ಯಾರಿಂದಾನು ಸಾಧ್ಯವಿಲ್ಲ.
Sachin Tendulkar Record In World Cup: ಸಚಿನ್ ತೆಂಡೂಲ್ಕರ್ (Sachin Tendulkar) ಅವರನ್ನು ಕ್ರಿಕೆಟ್ ದೇವರು ಎಂದು ಕರೆಯುತ್ತೇವೆ. ಸಚಿನ್ ಅವರು ತನ್ನದೇ ಆದ ದೊಡ್ಡ ಅಭಿಮಾನಿ ಬಳಗವನ್ನೇ ಹೊಂದಿದವರಾಗಿದ್ದು, ಸಚಿನ್ ಅವರ ದಾಖಲೆ ಬಗ್ಗೆ ಹೇಳೋಕೆ ಪದಗಳೇ ಸಾಲೋದಿಲ್ಲ.
ಸಚಿನ್ ತೆಂಡೂಲ್ಕರ್ ತಮ್ಮ 24 ವರ್ಷಗಳ ವೃತ್ತಿಜೀವನದಲ್ಲಿ 6 ವಿಶ್ವಕಪ್‌ಗಳನ್ನು ಆಡಿದ್ದಾರೆ, ಇದು ವಿಶ್ವದಾಖಲೆಯಾಗಿದೆ. ಸಚಿನ್ 45 ಪಂದ್ಯಗಳಲ್ಲಿ 2,278 ರನ್ ಗಳಿಸಿದ್ದಾರೆ, ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯಾಗಿದೆ. ಇದು ವಿಶ್ವಕಪ್‌ನ ಸಮಯವಾದ್ದರಿಂದ ಸಚಿನ್ ಅವರ ದಾಖಲೆಯ ಬಗ್ಗೆ ಮಾಹಿತಿ ಪಡೆಯೋಣ.
ವಿರಾಟ್ ಹಾಗೂ ರೋಹಿತ್ ರನ್ ಸೇರಿಸಿದರೂ ಸಚಿನ್ ತೆಂಡೂಲ್ಕರ್ ರನ್ ಗಳ ಸಮೀಪಕ್ಕೆ ಬರಲು ಸಾಧ್ಯವಿಲ್ಲಾ .
ಸಚಿನ್ ವಿಶ್ವಕಪ್‌ನಲ್ಲಿ 2560 ಎಸೆತಗಳನ್ನು ಆಡಿದ್ದು ದಾಖಲೆಯಾಗಿದೆ. ಸಚಿನ್ ವಿಶ್ವಕಪ್‌ನಲ್ಲಿ 6 ಶತಕ ಮತ್ತು 15 ಅರ್ಧ ಶತಕಗಳನ್ನು ಗಳಿಸಿದ್ದಾರೆ, ಸಚಿನ್ ವಿಶ್ವಕಪ್‌ನಲ್ಲಿ ಅತಿ ಹೆಚ್ಚು 241 ಬೌಂಡರಿಗಳ ದಾಖಲೆಯನ್ನೂ ಹೊಂದಿದ್ದಾರೆ. ಇದು ಐಸಿಸಿ ವಿಶ್ವಕಪ್‌ನಲ್ಲಿ(ODI) ಅತಿ ಹೆಚ್ಚು ರನ್ ಗಳಿಸಿದ ದಾಖಲೆಯಾಗಿದೆ.
ಸಚಿನ್ ತೆಂಡೂಲ್ಕರ್ ಅವರ ಈ ದಾಖಲೆಗೆ ಯಾವುದೇ ಸಕ್ರಿಯ ಕ್ರಿಕೆಟಿಗರು ಸನಿಹಕ್ಕೂ ಹೋಗಕ್ಕಾಗಿಲ್ಲ. ಸದ್ಯ ಟೀಂ ಇಂಡಿಯಾದ ಹೆಮ್ಮೆ ಎನಿಸಿರುವ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ರನ್ ಸೇರಿಸಿದರೂ ಸಚಿನ್ ತೆಂಡೂಲ್ಕರ್ ರನ್ ಗಳ ಸಮೀಪಕ್ಕೆ ಬರಲು ಸಾಧ್ಯವಾಗುತ್ತಿಲ್ಲ.
ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್
ಸಚಿನ್ ವಿಶ್ವಕಪ್‌ನಲ್ಲಿ 2278 ರನ್ ಗಳಿಸಿರುವುದು ಟೂರ್ನಿಯ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಇವರಾಗಿದ್ದಾರೆ . ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ (1743) ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್‌ಗಳ ವಿಷಯದಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.
ಇಲ್ಲಿ ನೆನಪಿನಲ್ಲಿಟ್ಟುಕೊಳ್ಳಬೇಕಾದ ಅಂಶವೆಂದರೆ ಪಾಂಟಿಂಗ್ ಅವರು ಸಚಿನ್‌ಗಿಂತ ಒಂದು ಪಂದ್ಯವನ್ನು ಹೆಚ್ಚು ಆಡಿದ ನಂತರ ಈ ರನ್‌ಗಳನ್ನು ಗಳಿಸಿದ್ದಾರೆ. ಅಂದರೆ, ಒಂದು ಪಂದ್ಯವನ್ನು ಆಡಿದ ನಂತರವೂ ಪಾಂಟಿಂಗ್ ಅವರು ಭಾರತದ ಸೂಪರ್‌ಸ್ಟಾರ್ ಸಚಿನ್‌ಗಿಂತ 535 ರನ್‌ಗಳ ಹಿಂದೆ ಇದ್ದಾರೆ.
ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತದ ಎರಡನೇ ಆಟಗಾರ ವಿರಾಟ್ ಕೊಹ್ಲಿ. 26 ವಿಶ್ವಕಪ್ ಪಂದ್ಯಗಳಲ್ಲಿ ಕೊಹ್ಲಿ 1030 ರನ್ ಗಳಿಸಿದ್ದಾರೆ. ಈ ಭಾರತೀಯ ಶ್ರೇಷ್ಠರ ಪಟ್ಟಿಯಲ್ಲಿ ಸೌರವ್ ಗಂಗೂಲಿ (1006) ಮೂರನೇ ಸ್ಥಾನದಲ್ಲಿದ್ದರೆ, ರೋಹಿತ್ ಶರ್ಮಾ (978) ನಾಲ್ಕನೇ ಸ್ಥಾನದಲ್ಲಿದ್ದಾರೆ.