Sachin Tendulkar: ತನ್ನ ದಾಖಲೆ ಮುರಿದ ವಿರಾಟ್ ಕೊಹ್ಲಿ ಬಗ್ಗೆ ಮಾತನಾಡಿದ ಸಚಿನ್, ಮೆಚ್ಚಿದ ಕ್ರಿಕೆಟ್ ಅಭಿಮಾನಿಗಳು.

ಸಚಿನ್ ತೆಂಡೂಲ್ಕರ್ ಅವರ ದಾಖಲೆ ಮುರಿದ ಸಂಭ್ರಮದಲ್ಲಿ ವಿರಾಟ್ ಕೊಹ್ಲಿ.

Sachin Tendulkar Tweet On Virat Kohli: ಏಕದಿನ ವಿಶ್ವಕಪ್ ನ ಸೆಮಿ ಫೈನಲ್ ಪಂದ್ಯ ನಿನ್ನೆ ಭಾರತ ಹಾಗು ನ್ಯೂಜಿಲೆಂಡ್‌ ಮಧ್ಯೆ ನೆಡೆದಿತ್ತು. ಈ ಪಂದ್ಯ ಬಹಳ ರೋಚಕವಾಗಿದ್ದು, ಭಾರತ ಸೋತೆ ಬಿಡತ್ತೆ ಅಂದುಕೊಂಡಿದ್ದ ಅಭಿಮಾನಿಗಳಿಗೆ, ಕೊನೆಯ ಹಂತದಲ್ಲಿ ಭಾರತ ಗೆಲುವಿನತ್ತ ಸಾಗಿದ್ದು ಬಹಳ ಖುಷಿ ತರಸಿತ್ತು.

ಅಷ್ಟೇ ಅಲ್ಲದೇ ಭಾರತ ಫೈನಲ್ (Final) ಹಂತ ತಲುಪಿದ್ದು, ಪ್ರತಿಯೊಬ್ಬರ ಸಂಭ್ರಮಕ್ಕೆ ಕಾರಣವಾಯಿತು . ನಿನ್ನೆಯ ಪಂದ್ಯದಲ್ಲಿ ಎಲ್ಲಾ ಆಟಗಾರರು ಚೆನ್ನಾಗಿ ಆಟ ಆಡಿದ್ದು, ವಿರಾಟ್ ಕೊಹ್ಲಿ (Virat Kohli) ತಮ್ಮ ಏಕದಿನ ಕ್ರಿಕೆಟ್‌ನ 50 ನೇ ಶತಕ ಗಳಿಸಿ ಸಚಿನ್ ತೆಂಡೂಲ್ಕರ್ ಅವರ ಸಾಧನೆಯನ್ನು ಬ್ರೇಕ್ ಮಾಡಿದರು. ಈ ಕುರಿತು ಸ್ವತಃ ಸಚಿನ್ ತೆಂಡೂಲ್ಕರ್ (Sachin Tendulkar) ಅವರು ವಿರಾಟ್ ಕೊಹ್ಲಿ ಅವರಿಗೆ ಶುಭಾಶಯವನ್ನು ಕೋರಿದರು.

Sachin Tendulkar Tweet On Virat Kohli
Image Credit: The cricketlounge

ವಿರಾಟ್ ಅವರನ್ನು ಮೊದಲನೇದಾಗಿ ಭೇಟಿ ಮಾಡಿದ ಕ್ಷಣವನ್ನು ನೆನಪಿಸಿಕೊಂಡ ಸಚಿನ್

ಇವರಿಬ್ಬರ ನಡುವಣ ಮೊದಲ ಭೇಟಿಯನ್ನು ಅವರು ಸ್ವಾರಸ್ಯಕರವಾಗಿ ನೆನಪಿಸಿದ್ದಾರೆ. ಆಗಿನ್ನೂ ಹೊಸಬರಾಗಿದ್ದ ವಿರಾಟ್‌ಗೆ ಅಂದಿನ ತಂಡದ ಕೆಲವು ಆಟಗಾರರು ಸಚಿನ್ ಕಾಲು ಹಿಡಿಯುವಂತೆ ಸೂಚಿಸಿದ್ದರು. ತಂಡದ ಡ್ರೆಸಿಂಗ್‌ ರೂಮ್‌ನಲ್ಲಿ ವಿರಾಟ್‌ಗೆ ಕೆಲ ಸಹ ಆಟಗಾರರು ಫ್ರಾಂಕ್ ಮಾಡಿದ್ದರು. ನನಗೆ ನಗು ತಡೆಯಲಾಗಲಿಲ್ಲ ಎಂದು ಸಚಿನ್ ಹೇಳಿದ್ದಾರೆ. ಆದರೆ ಬದ್ಧತೆ ಮತ್ತು ಕಾಶಲ್ಯದಿಂದ ನೀನು ಅತಿ ಬೇಗನೇ ನನ್ನ ಹೃದಯ ಗೆದ್ದ. ಯುವ ಆಟಗಾರ ಈಗ ವಿರಾಟ್‌ ಆಟಗಾರನಾಗಿ ಬೆಳೆದಿರುವುದು ನನಗೆ ಅತೀವ ಸಂತಸ ಮೂಡಿಸಿದೆ ಎಂದು ತೆಂಡೂಲ್ಕರ್‌ ‘ಎಕ್ಸ್‌’ನಲ್ಲಿ ಬರೆದಿದ್ದಾರೆ.

Sachin Tendulkar ಅವರಿಂದ ವಿರಾಟ್ ಗೆ ಅಭಿನಂದನಾ ಸಂದೇಶ

ಭಾರತ ಕ್ರಿಕೆಟ್ ತಂಡದ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಕ್ರಿಕೆಟ್ ಇತಿಹಾಸದಲ್ಲಿ ಅನೇಕ ಸಾಧನೆಯನ್ನು ಮಾಡಿದ್ದಾರೆ. ಅವರ 49 ಶತಕ ದಾಖಲೆಯನ್ನು ನಿನ್ನೆಯ ಏಕದಿನ ವಿಶ್ವಕಪ್ ನಲ್ಲಿ ವಿರಾಟ್ ಕೊಹ್ಲಿ ಬ್ರೇಕ್ ಮಾಡಿದ್ದರು. ಈ ಕುರಿತು ಸಚಿನ್ ಅವರು ಶುಭಾಶಯ ಸಂದೇಶವನ್ನು ವಿರಾಟ್ ಕೊಹ್ಲಿ ಯವರಿಗೆ ಸಲ್ಲಿಸಿದ್ದಾರೆ. ‘ಭಾರತದ ಆಟಗಾರನೇ ನನ್ನ ದಾಖಲೆ ಮುರಿದಿದ್ದಕ್ಕಿಂತ ದೊಡ್ಡ ಸಂತಸ ಬೇರೆ ಇರಲಾರದು. ಅದು ದೊಡ್ಡ ವೇದಿಕೆ (ವಿಶ್ವಕಪ್‌ ಸೆಮಿಫೈನಲ್‌) ಯಲ್ಲಿ ಮತ್ತು ನನ್ನ ತವರು ಮೈದಾನದಲ್ಲಿ ಆಗಿರುವುದು ನನ್ನ ಸಂತಸವನ್ನು ಇಮ್ಮಡಿಸಿದೆ’ ಎಂದು ಬರೆದಿದ್ದಾರೆ.

ಕನಸು ನನಸಾಗಿದೆ ಎಂದು ಹೇಳಿದ ವಿರಾಟ್ ಕೊಹ್ಲಿ

50ನೇ ಶತಕ ಬಾರಿಸಿದ ವಿರಾಟ್ ಕೊಹ್ಲಿ ತನ್ನ ಸಂಭ್ರಮವನ್ನು ಹಂಚಿಕೊಂಡಿದ್ದಾರೆ. ಸಚಿನ್ ತೆಂಡೂಲ್ಕರ್ ದಾಖಲೆ ಪತನ ಮಾಡಿ ಅವರನ್ನು ಹಿಂದೆ ಹಾಕಿರುವುದು ತಮ್ಮ ಪಾಲಿಗೆ ಕನಸು ನನಸಾದಂತೆ ಎಂದು ಕೊಹ್ಲಿ ಸಹ ಪ್ರತಿಕ್ರಿಯಿಸಿದ್ದಾರೆ. ‘ಮತ್ತೊಬ್ಬ ಮಹಾನ್‌ ಆಟಗಾರ ನನ್ನನ್ನು ಅಭಿನಂದಿಸಿದ್ದಾರೆ. ಕನಸಿನ ಅನುಭವ ಆಗುತ್ತಿದೆ’ ಎಂದು ಅವರು ಹೇಳಿದ್ದಾರೆ. ‘ಅಣ್ಣ ಸಚಿನ್ ಸ್ಟ್ಯಾಂಡ್‌ನಲ್ಲಿದ್ದರು. ಆ ಭಾವನೆಯನ್ನು ಮಾತುಗಳಲ್ಲಿ ಹಿಡಿದಿಡಲಾಗದು. ನನ್ನ ಜೀವನಸಂಗಾತಿ, ನನ್ನ ಹೀರೊ ಎಲ್ಲರೂ ಅಲ್ಲಿದ್ದರು. ಅಭಿಮಾನಿಗಳೂ ವಾಂಖೆಡೆಯಲ್ಲಿದ್ದರು’ ಎಂದು ಇನಿಂಗ್ಸ್‌ ಬ್ರೇಕ್‌ ನಡುವೆ ವಿರಾಟ್ ಕೊಹ್ಲಿ ಹೇಳಿದರು.

Leave A Reply

Your email address will not be published.