Secure Banks: ಈ ಮೂರೂ ಬ್ಯಾಂಕುಗಳಲ್ಲಿ ನಿಮ್ಮ ಹಣ ಇದ್ದರೆ ಮಾತ್ರ ಸೇಫ್, ಸೇಫ್ಟಿ ಬ್ಯಾಂಕ್ ಘೋಷಣೆ ಮಾಡಿದ RBI.
ಈ ಮೂರು ಬ್ಯಾಂಕ್ ನಲ್ಲಿದ್ದರೆ ನಿಮ್ಮ ಹಣ ಸುರಕ್ಷಿತ.
Safety Bank In India: ಹಣವನ್ನು ಯಾವ ಬ್ಯಾಂಕ್ ನಲ್ಲಿಯೇ ಇಡಬೇಕಾದರೂ ಆ ಬ್ಯಾಂಕ್ ಸುರಕ್ಷಿತವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸುವುದು ಬಹಳ ಮುಖ್ಯವಾಗಿರುತ್ತದೆ. ಜನರು ಕಷ್ಟಪಟ್ಟು ದುಡಿದ ಹಣವನ್ನು ಬ್ಯಾಂಕಿನಲ್ಲಿ ಠೇವಣಿ ಇಡುತ್ತಾರೆ.
ಕಷ್ಟದ ಸಮಯದಲ್ಲಿ ಈ ಹಣವು ಉಪಯುಕ್ತವಾಗಲಿ ಎನ್ನುವ ಉದ್ದೇಶದಿಂದ ಈ ರೀತಿ ಬ್ಯಾಂಕ್ ನಲ್ಲಿ ಠೇವಣಿ ಮಾಡಲಾಗುತ್ತದೆ. ಆದರೆ ಕೆಲವೊಮ್ಮೆ ಬ್ಯಾಂಕ್ ನಷ್ಟ ಅನುಭವಿಸಿ ಮುಚ್ಚುವ ಪರಿಸ್ಥಿತಿ ಎದುರಾಗುತ್ತದೆ. ಆಗ ಬ್ಯಾಂಕ್ ನಲ್ಲಿ ಹಣ ಠೇವಣಿ ಇಟ್ಟವರ ಸ್ಥಿತಿ ಅಯೋಮಯವಾಗಿರುತ್ತದೆ.
ಹಣ ಠೇವಣಿ ಮಾಡುವಾಗ ಬ್ಯಾಂಕಿನ ಬಗ್ಗೆ ಗಮನ ಇರತಕ್ಕದ್ದು
ಹಣವನ್ನು ಯಾವ ಬ್ಯಾಂಕ್ ನಲ್ಲಿಯೇ ಇಡಬೇಕಾದರೂ ಆ ಬ್ಯಾಂಕ್ ಸುರಕ್ಷಿತವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸುವುದು ಬಹಳ ಮುಖ್ಯವಾಗಿರುತ್ತದೆ. ಈ ವರ್ಷದ ಆರಂಭದಲ್ಲಿ, ಆರ್‌ಬಿಐ ಒಂದು ಪಟ್ಟಿಯನ್ನು ( D-SIBs) ಬಿಡುಗಡೆ ಮಾಡಿತ್ತು. ದೇಶದ ಸುರಕ್ಷಿತ ಬ್ಯಾಂಕ್ ಗಳ ಹೆಸರನ್ನು ಇದರಲ್ಲಿ ಸೇರಿಸಲಾಗಿದೆ. ಒಂದು ದೇಶದಲ್ಲಿ ಒಂದು ದೊಡ್ಡ ಬ್ಯಾಂಕ್ ಕುಸಿದರೆ ಅದರ ನಷ್ಟವು ಇಡೀ ಭಾರತೀಯ ಆರ್ಥಿಕತೆಯ ಮೇಲೆ ಬೀಳುತ್ತದೆ. ಇದರ ಜೊತೆಗೆ ಗ್ರಾಹಕರು ತೊಂದರೆ ಅನುಭವಿಸಬೇಕಾಗುತ್ತದೆ.
ಈ ಪಟ್ಟಿಯಲ್ಲಿ ಯಾವ ಬ್ಯಾಂಕ್‌ಗಳಿವೆ
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (Reserve Bank Of India) ಬಿಡುಗಡೆ ಮಾಡಿರುವ ಸುರಕ್ಷಿತ ಬ್ಯಾಂಕ್‌ಗಳ ಪಟ್ಟಿಯಲ್ಲಿ ಒಂದು ಸರ್ಕಾರಿ ಮತ್ತು 2 ಖಾಸಗಿ ಬ್ಯಾಂಕ್‌ಗಳ ಹೆಸರುಗಳು ಸೇರಿವೆ. ಇದರಲ್ಲಿ ಸರ್ಕಾರಿ ವಲಯದ ಬ್ಯಾಂಕ್ ಎಂದರೆ ಅದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ. ಇದಲ್ಲದೆ ಎರಡು ಖಾಸಗಿ ವಲಯದ ಬ್ಯಾಂಕ್‌ಗಳು ಕೂಡಾ ಈ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಅವುಗಳೆಂದರೆ HDFC ಬ್ಯಾಂಕ್ ಮತ್ತು ICICI ಬ್ಯಾಂಕ್. ಇದರರ್ಥ ನಿಮ್ಮ ಖಾತೆಯು ಎಸ್‌ಬಿಐ, ಎಚ್‌ಡಿಎಫ್‌ಸಿ ಬ್ಯಾಂಕ್ ಅಥವಾ ಐಸಿಐಸಿಐ ಬ್ಯಾಂಕ್‌ನಲ್ಲಿದ್ದರೆ ನಿಮ್ಮ ಹಣ ಸುರಕ್ಷಿತವಾಗಿದೆ ಎಂದು.
ಆರ್‌ಬಿಐ ಈ ಬ್ಯಾಂಕುಗಳ ಮೇಲೆ ನಿಗಾ ಇರಿಸುತ್ತದೆ
ಆರ್‌ಬಿಐ ಈ ಪಟ್ಟಿಯಲ್ಲಿ ಬರುವ ಬ್ಯಾಂಕುಗಳ ಮೇಲೆ ನಿಗಾ ಇಟ್ಟಿರುತ್ತದೆ. ರಿಸರ್ವ್ ಬ್ಯಾಂಕ್ ಈ ಬ್ಯಾಂಕ್‌ಗಳ ದಿನನಿತ್ಯದ ಕಾರ್ಯನಿರ್ವಹಣೆಯ ಮೇಲೆ ಕಣ್ಣಿಡುವುದಲ್ಲದೆ, ಯಾವುದೇ ದೊಡ್ಡ ಸಾಲ ಅಥವಾ ಖಾತೆಯ ಬಗ್ಗೆ ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತದೆ. ಇಷ್ಟೇ ಅಲ್ಲ, ಯಾವುದೇ ದೊಡ್ಡ ಯೋಜನೆಗೆ ಬ್ಯಾಂಕ್ ಸಾಲ ನೀಡುವ ಮಾತುಕತೆ ನಡೆಸಿದರೆ ಅದನ್ನು ಸಹ ಮೌಲ್ಯಮಾಪನ ಮಾಡಲಾಗುತ್ತದೆ. ಇದು ಬ್ಯಾಂಕಿನ ಒಟ್ಟಾರೆ ವ್ಯವಹಾರದ ಮೇಲೆ ಯಾವುದೇ ಋಣಾತ್ಮಕ ಪರಿಣಾಮ ಬೀರಲಿದೆಯೇ ಎಂಬುದನ್ನು ಪರಿಶೀಲಿಸಿ ನೋಡುತ್ತದೆ.
ಈ ಪಟ್ಟಿಯನ್ನು ಯಾವಾಗ ಬಿಡುಗಡೆ ಮಾಡಲಾಗುತ್ತದೆ
RBI 2015 ರಿಂದ ಅಂತಹ ಬ್ಯಾಂಕುಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತಿದೆ. ಇಂತಹ ಬ್ಯಾಂಕುಗಳು ದೇಶದ ಆರ್ಥಿಕತೆಗೆ ಅಗತ್ಯ ಎನ್ನುವುದು ರಿಸರ್ವ್ ಬ್ಯಾಂಕ್ ನಂಬಿಕೆ. ಆರ್‌ಬಿಐ ಈ ಬ್ಯಾಂಕ್‌ಗಳಿಗೆ ರೇಟಿಂಗ್ ಕೂಡ ನೀಡುತ್ತದೆ. ಈ ರೇಟಿಂಗ್ ನಂತರವೇ ಈ ಪ್ರಮುಖ ಬ್ಯಾಂಕ್‌ಗಳ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ. ಆದರೆ, ಇಲ್ಲಿಯವರೆಗೆ ಈ ಪಟ್ಟಿಯಲ್ಲಿ ಕೇವಲ 3 ಬ್ಯಾಂಕ್‌ಗಳ ಹೆಸರುಗಳನ್ನು ಸೇರಿಸಲಾಗಿದೆ.