Sai Pallavi: ಮೊದಲ ಚಿತ್ರಕ್ಕೆ ನಟಿ ಸಾಯಿ ಪಲ್ಲವಿ ಪಡೆದ ಸಂಭಾವನೆ ಎಷ್ಟು ಗೊತ್ತಾ…? ನಿಜಕ್ಕೂ ಗ್ರೇಟ್.
ನಟಿ ಸಾಯಿ ಪಲ್ಲವಿ ಅವರ ಮೊದಲ ಸಂಭಾವನೆ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Actress Sai Pallavi First Movie Remuneration: ಸಾಯಿ ಪಲ್ಲವಿ (Sai Pallavi) ದಕ್ಷಿಣ ಕನ್ನಡ ಚಿತ್ರರಂಗದ ಹೆಮ್ಮೆಯ ನಟಿ. ಈ ನಟಿ ತನ್ನ ಅಭಿನಯ ಹಾಗು ಸುಂದರ ನಗುವಿನೊಂದಿಗೆ ಪಡ್ಡೆ ಹುಡುಗರ ಮನ ಗೆದ್ದಿದ್ದಾರೆ. ಈ ನಟಿ ತನ್ನ ಡ್ರೆಸ್ಸಿಂಗ್ ನಿಂದ ಅನೇಕ ಅಭಿಮಾನಿಗಳನ್ನು ಹೊಂದಿದ್ದಾರೆ. ಹೆಚ್ಚಿನದಾಗಿ ಸೀರೆಯಲ್ಲಿ ಮಿಂಚುವ ಈ ನಟಿ ಬಹಳ ಬೇಡಿಕೆ ಹೊಂದಿದವರಾಗಿದ್ದಾರೆ.
ಸಾಯಿ ಪಲ್ಲವಿ ಅವರು ಮಲಯಾಳಂ ಸಿನಿಮಾ ಮೂಲಕ ನಾಯಕಿಯಾಗಿ ಪದಾರ್ಪಣೆ ಮಾಡಿದರು . ಇತ್ತೀಚಿನ ವರದಿಗಳ ಪ್ರಕಾರ, ನಿತೇಶ್ ತಿವಾರಿ ಅವರ ರಾಮಾಯಣದಲ್ಲಿ ಸಾಯಿ ಪಲ್ಲವಿ ಸೀತೆಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಹಾಗು ರಣಬೀರ್ ಕಪೂರ್ ಅವರೊಂದಿಗೆ ಬಾಲಿವುಡ್‌ಗೆ ಪಾದಾರ್ಪಣೆ ಮಾಡಲು ಸಜ್ಜಾಗುತ್ತಿದ್ದಾರೆ ಎನ್ನಲಾಗುತ್ತಿದೆ.

ಬಹು ಬೇಡಿಕೆಯ ನಟಿ ಸಾಯಿ ಪಲ್ಲವಿ
ನಟಿ ಸಾಯಿ ಪಲ್ಲವಿ ಈಗಾಗಲೇ ಹಲವು ಬಿಗ್ ನಟರೊಂದಿಗೆ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದಾರೆ. ಹಾಗು ಅವರ ಎಲ್ಲ ಸಿನಿಮಾಗಳು ಹಿಟ್ ಸಿನಿಮಾಗಳಾಗಿವೆ. ಇವರ ಮೊದಲ ಸಿನಿಮಾ ಪ್ರೇಮಂ ಆಗಿದ್ದು, ಮೊದಲ ಸಿನಿಮಾದ ಗೆಲುವಿನೊಂದಿಗೆ ಹಲವು ಸಿನಿಮಾಗಳಲ್ಲಿ ಯಶಸ್ಸುಗಳಿಸಿದ್ದಾರೆ . ಈ ನಟಿ ಕೇವಲ ಸಿನಿಮಾ ರಂಗದಲ್ಲಿ ಮಾತ್ರವಲ್ಲದೇ ಹಲವು ಸಾಮಾಜಿಕ ಕೆಲಸದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎನ್ನಲಾಗಿದೆ.
ಕೋಟಿ ಕೋಟಿ ಸಂಭಾವನೆ ಪಡೆಯುತ್ತಿರುವ ಟಾಪ್ ನಟಿ ಸಾಯಿ ಪಲ್ಲವಿ
ಬಹಳ ಸಿಂಪಲ್ ನಟಿ ಸಾಯಿ ಪಲ್ಲವಿ ಅವರು ತನ್ನ ಮೊದಲ ಸಿನಿಮಾ ಪ್ರೇಮಂ ಸಿನಿಮಾಗಾಗಿ 10 ಲಕ್ಷ ರೂಪಾಯಿ ಸಂಭಾವನೆ ಪಡೆದಿದ್ದರು ಎಂದು ವರದಿಗಳು ಹೇಳುತ್ತವೆ. ಮೊದಲ ಸಿನಿಮಾದಲ್ಲಿ ನಟಿ ಸಾಯಿ ಪಲ್ಲವಿ ಅತೀ ಕಡಿಮೆ ಸಂಭಾವನೆ ಪಡೆದುಕೊಂಡಿದ್ದು ಈಗ ಕೋಟಿ ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ.

ಪ್ರೇಮಂ 2015 ರಲ್ಲಿ ಬಿಡುಗಡೆಯಾಯಿತು. ಮೊದಲನೆಯ ಸಿನಿಮಾಕ್ಕೆ ಲಕ್ಷ ಲಕ್ಷ ಸಂಭಾವನೆ ಪಡೆದ ನಟಿ ಇವರಾಗಿದ್ದಾರೆ. ನಟ ನಾಗ ಚೈತನ್ಯ ಅವರ ಹೊಸ ಚಿತ್ರಕ್ಕಾಗಿ ಸಾಯಿಪಲ್ಲವಿ ತಮ್ಮ ಸಂಭಾವನೆಯನ್ನು 30 ಪ್ರತಿಶತದಷ್ಟು ಹೆಚ್ಚಿಸಿದ್ದಾರೆ ಎಂಬ ವರದಿಗಳಿವೆ.
ಸಾಯಿ ಪಲ್ಲವಿ ಚಿತ್ರವೊಂದಕ್ಕೆ ಕೋಟಿ ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ. ಸಾಯಿ ಪಲ್ಲವಿ ದಕ್ಷಿಣ ಭಾರತದಲ್ಲಿ ಪ್ರತಿ ಚಿತ್ರಕ್ಕೆ 2 ಕೋಟಿ ಸಂಭಾವನೆ ಪಡೆಯುತ್ತಾರೆ. ಇತ್ತೀಚಿನ ಬಝ್ ಪ್ರಕಾರ ಪಲ್ಲವಿ ಈಗ ತನ್ನ ಶುಲ್ಕವನ್ನು ಹೆಚ್ಚಿಸಿದ್ದಾರೆ ಎನ್ನಲಾಗಿದೆ.