Salman Khan: ಬಿಗ್ ಬಾಸ್ ನಿರೂಪಣೆ ಮಾಡಲು ಸಲ್ಮಾನ್ ಖಾನ್ ಒಂದು ವಾರಕ್ಕೆ ಪಡೆಯುವ ಸಂಭಾವನೆ ಎಷ್ಟು…?
ಬಿಗ್ ಬಾಸ್ ನಿರೂಪಣೆ ಮಾಡಲು ಸಲ್ಮಾನ್ ಖಾನ್ ದೊಡ್ಡ ಮಟ್ಟದ ಸಂಭಾವನೆ ಪಡೆದುಕೊಳ್ಳುತ್ತಾರೆ.
Salman Khan Bigg Boss Remuneration: ಹಿಂದಿಯಲ್ಲಿ ಬಿಗ್ ಬಾಸ್ ಕಾರ್ಯಕ್ರಮ ಅನೇಕ ಸೀಸನ್ ಗಳನ್ನೂ ಪೂರೈಸಿದೆ. ಹಾಗೆಯೆ ಹಿಂದಿಯ ಬಿಗ್ ಬಾಸ್ ಅಂದ ಕೂಡಲೇ ನೆನಪಿಗೆ ಬರುವುದು ನಟ ನಿರೂಪಕ ಸಲ್ಮಾನ್ ಖಾನ್ (Salman Khan). ಹಿಂದಿಯಲ್ಲಿ ಬಿಗ್ ಬಾಸ್ ಅನ್ನು ಸಲ್ಲು ಭಾಯ್ ಶೋ ಅಂತಾನೆ ಕರೆಯುತ್ತಾರೆ.
ಹಿಂದಿ ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಆರಂಭದಲ್ಲಿ ಅನೇಕ ನಿರೂಪಕರನ್ನು ನೋಡಿದೆ, ಬಿಗ್ ಬಾಸ್ ಹಿಂದಿ ಸೀಸನ್ 4 ರಿಂದ, ಬಾಲಿವುಡ್ ಭಾಯಿಜಾನ್ ಕಾರ್ಯಕ್ರಮ ನಿರೂಪಣೆಗೆ ತೊಡಗಿಸಿಕೊಂಡರು. ಸಲ್ಲು ಭಾಯ್ ಶೋ ನಡೆಸಿಕೊಡುವ ರೀತಿ ಗಮನಸೆಳೆದಿದ್ದು, TRP ರೇಟ್ ಹೆಚ್ಚಾಗಿ , ಈ ಶೋ ಜನಪ್ರಿಯತೆ ಗಳಿಸಿತು.

ಬಿಗ್ ಬಾಸ್ ಹಿಂದಿ ಶೋ ನ ಬೆಸ್ಟ್ ನಿರೂಪಕರಾಗಿ ಸಲ್ಮಾನ್ ಖಾನ್ ಪ್ರಖ್ಯಾತಿ ಗಳಿಸಿದ್ದಾರೆ
ಬಿಗ್ ಬಾಸ್ ಹಿಂದಿ ಪ್ರಾರಂಭದಲ್ಲಿ ಅಷ್ಟೇನು ಹೆಸರನ್ನು ಪಡೆದಿಲ್ಲ. ಸೀಸನ್ 04 ರಲ್ಲಿ ಸಲ್ಮಾನ್ ಖಾನ್ ನಿರೂಪಕರಾಗಿ ಆಯ್ಕೆ ಆಗಿ ಕಾರ್ಯಕ್ರಮ ಪ್ರಾರಂಭಿಸಿದರು. ನಂತರ ಈ ಶೋ ಉನ್ನತ ಮಟ್ಟ ತಲುಪಿತು. ತದನಂತರ ಈ ಶೋ ಹಿಂತಿರುಗಿ ನೋಡಲಿಲ್ಲ. ವೀಕ್ಷಕರಿಗೆ ಏನು ಬೇಕು ಎಂದು ನಿಖರವಾಗಿ ತಿಳಿದಿರುವ ಈ ನಟ ಈಗ ಪರಿಪೂರ್ಣ ನಿರೂಪಕ. ಸ್ಪರ್ಧಿಗಳಿಗೆ ಸಲ್ಮಾನ್ ದಯೆ ತೋರುತ್ತಾರೆ ಮತ್ತು ಅದೇ ಸಮಯದಲ್ಲಿ ಅವರು ಗೆರೆ ದಾಟಿದರೆ ಪಾಠವನ್ನೂ ಹೇಳುತ್ತಾರೆ. ಹಾಗಾಗಿ ಸಲ್ಮಾನ್ ಭಾರೀ ಜನಪ್ರಿಯತೆ ಹೊಂದಿದ್ದಾರೆ.
ನಿರೂಪಣೆಗೆ ಸಲ್ಮಾನ್ ಖಾನ್ ಪಡೆಯುವ ಸಂಭಾವನೆ
ಅನೇಕ ಸೀಸನ್ ಅನ್ನು ಪೂರೈಸಿದ ಬಿಗ್ ಬಾಸ್ ಹಿಂದಿ ಬಿಗ್ ಶೋ ಎಂದು ಕರೆಸಿಕೊಂಡಿದೆ ಇತ್ತೀಚಿಗೆ ಅಂತರ್ಜಾಲದಲ್ಲಿ ಸುದ್ದಿಯೊಂದು ಹರಿದಾಡುತ್ತಿದೆ. ಅದರಂತೆ ಸಲ್ಮಾನ್ ಬಿಗ್ಬಾಸ್ನ ಮೊದಲ ಎರಡು ಸೀಸನ್(4ಮತ್ತು5)ಗಳಿಗೆ ಪ್ರತಿ ಸಂಚಿಕೆಗೆ 2.5 ಕೋಟಿ ರೂ. ಪಡೆದುಕೊಂಡಿದ್ದರು. ಆದರೆ ಕಾರ್ಯಕ್ರಮದ ಭಾರೀ ಜನಪ್ರಿಯತೆಯ ನಂತರ, ತಮ್ಮ ಸಂಭಾವನೆಯನ್ನು ದ್ವಿಗುಣಗೊಳಿಸಿದ್ದಾರೆ ಎಂದು ಹೇಳಲಾಗುತ್ತದೆ. ಸಲ್ಮಾನ್ ಬಿಬಿ7 ರ ಪ್ರತಿ ಸಂಚಿಕೆಗೆ 5 ಕೋಟಿ ರೂ., 8ಕ್ಕೆ 5.5 ಕೋಟಿ ರೂ. ಸೀಸನ್ 9 ಗಾಗಿ 7 ರಿಂದ 8 ಕೋಟಿ ರೂ. ಬಿಬಿ 10 ಗಾಗಿ ಪ್ರತಿ ಸಂಚಿಕೆಗೆ 8 ಕೋಟಿ ಪಡೆದಿದ್ದಾರೆ ಎನ್ನಲಾಗಿದೆ.

ನಿರೂಪಣೆಯಲ್ಲಿ ಕೋಟಿ ಕೋಟಿ ಸಂಪಾದನೆ ಮಾಡಿದ ನಟ
ಬಿಗ್ ಬಾಸ್ ಸೀಸನ್ 11 ರಲ್ಲಿ ಪ್ರತಿ ಸಂಚಿಕೆಗೆ 11 ಕೋಟಿರೂ. ಈಗ 17ನೇ ಸೀಜನ್ಗೆ ಪ್ರತಿವಾರಕ್ಕೆ 12ಕೋಟಿ ರೂ., ಅಂದರೆ ಈ ಸೀಸನ್ನಲ್ಲಿ 150ಕೋಟಿ ರೂ. ಪಡೆದುಕೊಳ್ಳುತ್ತಾರೆ ಎನ್ನಲಾಗಿದೆ. ವಾರಕ್ಕೆ 12ಕೋಟಿ ಗಳಿಸುತ್ತೀರಂತೆ ಎಂದು ಸುದ್ದಿಗಾರರು ಸಲ್ಮಾನ್ ಖಾನ್ ಅವರನ್ನು ಕೇಳಿದಾಗ, ಅವರು ಅದಕ್ಕೆ ನಕ್ಕು, ಶೋ ಮೇಕರ್ ಗೆ ಅಷ್ಟು ಸಂಭಾವನೆ ನೀಡುವಂತೆ ಹೇಳಿ ಎಂದು ಮಾಧ್ಯಮಗಳನ್ನು ಒತ್ತಾಯಿಸಿದರು.
ಆದರೆ, ಸಲ್ಮಾನ್ ಕಡಿಮೆ ಬೆಲೆಗೆ ಬರುವುದಿಲ್ಲ ಎಂಬ ಎಂಡೆಮೋಲ್ ಸಿಒಒ ನಾಯಕ್ ಹೇಳಿಕೆ ಎಲ್ಲರನ್ನೂ ಮತ್ತೊಮ್ಮೆ ಅಚ್ಚರಿಗೆ ದೂಡಿದೆ. ಉತ್ತಮ ಟಿಆರ್ಪಿ ರೇಟ್ ಇರುವ ಈ ಕಾರ್ಯಕ್ರಮಕ್ಕೆ ಸಲ್ಮಾನ್ ಖಾನ್ ಕೋಟಿ ಪಡೆಯುತ್ತಾರೆಂದರೆ ಅಚ್ಚರಿ ಪಡಬೇಕಾಗಿಲ್ಲ ಎಂದು ಕೆಲವರು ಅಭಿಪ್ರಾಯ ಪಟ್ಟಿದ್ದಾರೆ.