Samantha And Nag Chaitanya: ಮತ್ತೆ ಒಂದಾಗಲಿದ್ದಾರೆ ಸಮಂತಾ ಮತ್ತು ನಾಗ ಚೈತನ್ಯ, ಇಬ್ಬರ ನಡುವೆ ಮತ್ತೆ ಪ್ರೀತಿ ಹುಟ್ಟಿದೆ.
ನಟ ನಾಗ ಚೈತನ್ಯ ಹಾಗು ನಟಿ ಸಮಂತಾ ಮತ್ತೆ ಒಂದಾಗುವ ಸೂಚನೆ, ಏನದು ಹೊಸ ಪೋಸ್ಟ್?
Samantha Ruth Prabhu And Nag Chaitanya Latest News: ನಟಿ ಸಮಂತಾ (Samantha) ಮತ್ತು ನಟ ನಾಗ ಚೈತನ್ಯ (Naga Chaitanya) ಅವರ ಬಗ್ಗೆ ಹೆಚ್ಚಿನವರಿಗೆ ಗೊತ್ತಿರುತ್ತದೆ. ಯಾಕೆಂದರೆ ಇವರಿಬ್ಬರ ಸಿನಿಮಾ ಜರ್ನಿ ಜೊತೆಗೆ ವಯಕ್ತಿಕ ಜೀವನ ಬಗ್ಗೆ ಕೂಡ ಸ್ವಲ್ಪ ಮಟ್ಟಿಗೆ ಜನರಿಗೆ ಗೊತ್ತಿದೆ ಎನ್ನಬಹುದು.
ಇಬ್ಬರು ಕೂಡ ಅನೇಕ ಹಿಟ್ ಸಿನಿಮಾ ನೀಡಿದ ನಟ ನಟಿಯಾಗಿದ್ದಾರೆ, ಹಲವು ವರ್ಷಗಳ ಪ್ರೀತಿ ಇವರದ್ದಾಗಿದ್ದು, 2017 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆಯ ನಂತರ ಇಬ್ಬರೂ ಸಿನಿಮಾದತ್ತ ಗಮನ ಹರಿಸಿದರು. ಇದೆಲ್ಲದರ ಮಧ್ಯ 2021 ರಲ್ಲಿ, ಇಬ್ಬರೂ ಒಟ್ಟಿಗೆ ವಿಚ್ಛೇದನ ಪಡೆಯುದಾಗಿ ಘೋಷಿಸುವ ಮೂಲಕ ಶಾಕ್ ನೀಡಿದ್ದರು.
ಇನ್ನು ಅಭಿಮಾನಿಗಳಲ್ಲಿ ಒಂದಾಗುತ್ತಾರೆ ಎಂಬ ನಿರೀಕ್ಷೆ
Samantha Ruth Prabhu ಮತ್ತು Nag Chaitanya ಬೇರ್ಪಟ್ಟು ಸುಮಾರು 2 ವರ್ಷಗಳಾದವು. ಆದರೆ ಇತ್ತೀಚೆಗೆ ಅವರು ಮತ್ತೆ ಒಂದಾಗಲಿದ್ದಾರೆ ಎಂಬ ವರದಿಗಳು ಹರಿದಾಡುತ್ತಿವೆ. ಇದಕ್ಕೆ ಕಾರಣ ಅವರ ಇನ್ಸ್ಟಾಗ್ರಾಮ್ ಪೋಸ್ಟ್ಗಳು. ಕೆಲವು ತಿಂಗಳ ಹಿಂದೆ ನಟಿ ಸಮಂತಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ನಾಗ ಚೈತನ್ಯ ಜೊತೆಗಿನ ಫೋಟೋವನ್ನು ಅನ್ ಆರ್ಕೈವ್ ಮಾಡಿದ್ದರು.
ಸಿನಿಮಾ ಕೆಲಸದಲ್ಲಿ ಸಿಕ್ಕಾಪಟ್ಟೆ ಬ್ಯುಸಿ ಆಗಿರುವ ಜೋಡಿ
ವಿಚ್ಛೇದನದ ನಂತರ ಇಬ್ಬರೂ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ಅದರಲ್ಲೂ ಇಬ್ಬರೂ ಬಾಲಿವುಡ್ಗೆ ಪಾದಾರ್ಪಣೆ ಮಾಡಿದರು. ನಾಗ ಚೈತನ್ಯ ಅವರು ಅಮೀರ್ ಖಾನ್ ಅವರ ಲಾಲ್ ಸಿಂಗ್ ಚಡ್ಡಾ ಚಿತ್ರದ ಮೂಲಕ ಬಾಲಿವುಡ್ಗೆ ಪಾದಾರ್ಪಣೆ ಮಾಡಿದರು. ಅದೇ ರೀತಿ ನಟಿ ಸಮಂತಾ, ದಿ ಫ್ಯಾಮಿಲಿ ಮ್ಯಾನ್ 2 ವೆಬ್ ಸರಣಿಯ ಮೂಲಕ ಬಾಲಿವುಡ್ಗೆ ಕಾಲಿಟ್ಟರು. ಸದ್ಯ ಬಾಲಿವುಡ್ ನಲ್ಲಿ ಅವರ ನಟನೆಯಲ್ಲೇ ಸಿಟಾಡೆಲ್ ಎಂಬ ವೆಬ್ ಸೀರೀಸ್ ಕೂಡ ತಯಾರಾಗುತ್ತಿದೆ.
ನಾಗ ಚೈತನ್ಯ ಹಾಗು ಸಮಂತಾ ನಡುವೆ ಪ್ರೀತಿ ಇರುವ ಕುರಿತು ಸುಳಿವು
ಕೆಲ ದಿನಗಳ ಹಿಂದೆ ನಟಿ ಸಮಂತಾ ಜೊತೆಗಿದ್ದ ನಾಯಿ ಮರಿ ಈಗ ನಾಗ ಚೈತನ್ಯ ಬಳಿ ಇರುವುದನ್ನು ನೋಡಿ ಮತ್ತೆ ಇವರಿಬ್ಬರು ಒಂದಾಗುತ್ತಾರಾ ಎಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ. ನಟ ನಾಗ ಚೈತನ್ಯ ತಮ್ಮ ಮುದ್ದಿನ ನಾಯಿಯೊಂದಿಗೆ ಕಾರ್ ರೈಡ್ ಎಂಜಾಯ್ ಮಾಡುತ್ತಿರುವ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಸಮಂತಾ ಬಳಿ ಇದ್ದ ನಾಯಿ ಈಗ ನಾಗ ಚೈತನ್ಯ ಬಳಿ ಹೇಗೆ ಎಂದು ಅಭಿಮಾನಿಗಳು ಕುತೂಹಲಕ್ಕೆ ಒಳಗಾಗಿದ್ದಾರೆ.