Samsung Smartphone : ಸ್ಯಾಮ್‌ಸಂಗ್‌ನ ಈ ಫೋನ್‌ಗೆ 27% ರಿಯಾಯಿತಿ! 48 MP ಕ್ಯಾಮೆರಾ.. 128GB ಸ್ಟೋರೇಜ್!
ಸ್ಯಾಮ್‌ಸಂಗ್ ಕಂಪನಿಯ ಈ ಮೊಬೈಲ್ ಅನ್ನು ಖರೀದಿಸಿ, ಆಕರ್ಷಕ ಕೊಡುಗೆ ಹಾಗು ರಿಯಾಯಿತಿಯೊಂದಿಗೆ
Samsung Galaxy A12 Smartphone : ಸ್ಯಾಮ್‌ಸಂಗ್ (Samsung) ಕಂಪನಿ ಫೋನ್ ಗಳು ಭಾರತೀಯ ಮಾರುಕಟ್ಟೆಯಲ್ಲಿ ಬಹಳ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಹಲವು ವಿಶೇಷತೆಯನ್ನು ಹೊಂದಿರುವ ಈ ಫೋನ್ ಗಳು ಈಗಾಗಲೇ ಬಹು ಬೇಡಿಕೆ ಹೊಂದಿದ ಫೋನ್ ಗಳಾಗಿದೆ.
ಅದರಲ್ಲೂ ಇತ್ತೀಚಿಗೆ ಲಾಂಚ್ ಆಗುತ್ತಿರುವ ಸ್ಮಾರ್ಟ್‌ಫೋನ್‌ಗಳು ವಿಭಿನ್ನ ಫೀಚರ್ಸ್ ಆಯ್ಕೆಯೊಂದಿಗೆ ಕಾಣಿಸಿಕೊಳ್ಳುವ ಪರಿಣಾಮ ಗ್ರಾಹಕರು ಈ ಫೋನ್‌ಗಳನ್ನು ಮುಗಿಬಿದ್ದು ಖರೀದಿ ಮಾಡುತ್ತಿದ್ದಾರೆ ಈ ನಡುವೆ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ಗಳ ವಿಭಾಗದಲ್ಲಿ ಬಹುಬೇಡಿಕೆ ಇರುವ ಸ್ಯಾಮ್‌ಸಂಗ್ ಗ್ಯಾಲಕ್ಸಿ A12 ಸ್ಮಾರ್ಟ್‌ಫೋನ್‌ಗೆ (Samsung Galaxy A12 smartphone) ಬೊಂಬಾಟ್ ಆಫರ್ ಹಾಗು ರಿಯಾಯಿತಿ ನೀಡಲಾಗಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ A12 ಸ್ಮಾರ್ಟ್‌ಫೋನ್ ರಚನೆ ಹಾಗು ಪ್ರೊಸೆಸರ್ ಮಾಹಿತಿ
ಸ್ಯಾಮ್‌ಸಂಗ್ ಗ್ಯಾಲಕ್ಸಿ A12 ಸ್ಮಾರ್ಟ್‌ಫೋನ್ 6.5 ಇಂಚಿನ PLS LCD ಡಿಸ್‌ಪ್ಲೇ ಹೊಂದಿದ್ದು, ಇದು 720 x 1600 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ ಉತ್ತಮ ಎನಿಸಿದೆ. ಹಾಗೆಯೇ 20:9 ಆಕಾರ ಅನುಪಾತ, 270 ppi ಸಾಂದ್ರತೆ ಪಡೆದಿದೆ. ಇನ್ನು ಈ ಫೋನ್ ಮೀಡಿಯಾಟೆಕ್ MT6765 ಹಿಲಿಯೋ P35 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಲಿದೆ. ಈ ಫೋನ್ 32GB + 2GB RAM, 32GB + 3GB RAM, 64GB + 4GB RAM, 128GB + 3GB RAM, 128GB+ 4GB RAM, 128GB + 6GB RAM ನ ವಿವಿಧ ವೇರಿಯಂಟ್ ಆಯ್ಕೆ ಹೊಂದಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ A12 ಬ್ಯಾಟರಿ ಹಾಗು ಕ್ಯಾಮೆರಾ ವಿಶೇಶತೆ
ಈ ಫೋನ್ ಕ್ವಾಡ್ ರಿಯರ್ ಕ್ಯಾಮೆರಾ ಆಯ್ಕೆ ಪಡೆದಿದ್ದು 48 MP ಮುಖ್ಯ ಕ್ಯಾಮೆರಾ, 5 MP ಅಲ್ಟ್ರಾವೈಡ್, 2 MP ಮ್ಯಾಕ್ರೋ ಸೆನ್ಸರ್, 2MP ಡೆಪ್ತ್ ಸೆನ್ಸರ್ ಆಯ್ಕೆ ಪಡೆದಿದೆ. ಇದರೊಂದಿಗೆ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ 8 MP ಲೆನ್ಸ್ ಅನ್ನು ಹೊಂದಿದೆ. ಈ ಮೂಲಕ ಬಳಕೆದಾರರು ಅತ್ಯುತ್ತಮವಾದ ಚಿತ್ರಗಳನ್ನು ಸೆರೆಹಿಡಿಯಬಹುದಾಗಿದೆ. ಈ ಸ್ಮಾರ್ಟ್‌ಫೋನ್ 5000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, 15W ಅಡಾಪ್ಟಿವ್ ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಜೊತೆಗೆ ಒಂದು ಬಾರಿ ಪೂರ್ಣ ಚಾರ್ಜ್ ಮಾಡಿದರೆ ಒಂದು ದಿನದವರೆಗೆ ಬ್ಯಾಕಪ್ ನೀಡಲಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ A12 ಫೋನ್ ನ ಬೆಲೆ ಹಾಗು ಆಫರ್
ಸ್ಯಾಮ್‌ಸಂಗ್ ಗ್ಯಾಲಕ್ಸಿ A12 ಫೋನ್ 17,499 ರೂ.ಗಳ ಸಾಮಾನ್ಯ ಬೆಲೆ ಬದಲಿಗೆ 12,749 ರೂ.ಗಳಲ್ಲಿ ಖರೀದಿ ಮಾಡಬಹುದಾಗಿದೆ. ವಿನಿಮಯ ವ್ಯವಹಾರದಲ್ಲಿ ನೀವು 12,000 ರೂ.ವರೆಗೆ ಉಳಿಸಬಹುದು. ಇದೀಗ ಅಮೆಜಾನ್‌ನಲ್ಲಿ ಈ ಫೋನ್‌ಗೆ 27% ರಿಯಾಯಿತಿ ನೀಡಲಾಗಿದ್ದು, ಜೊತೆಗೆ ಬ್ಯಾಂಕ್ ಆಫರ್ ಹಾಗೂ ಇನ್ನಿತರೆ ಕ್ಯಾಶ್‌ಬ್ಯಾಕ್ ಆಫರ್ ಮೂಲಕ ಇನ್ನೂ ಕಡಿಮೆ ದರದಲ್ಲಿ ಈ ಫೋನ್ ಅನ್ನು ಖರೀದಿ ಮಾಡಬಹುದಾಗಿದೆ.