Samsung: ಇನ್ನುಮುಂದೆ ಯಾವುದೇ ಕ್ಯಾಮೆರಾ ಅವಶ್ಯಕತೆ ಇಲ್ಲ, ಅಗ್ಗದ ಬೆಲೆ 200 MP ಮೊಬೈಲ್ ಲಾಂಚ್ ಮಾಡಿದ ಸ್ಯಾಮ್ ಸಂಗ್.
200 MP ಕ್ಯಾಮೆರಾ ಇರುವ ಮೊಬೈಲ್ ಅನ್ನು ಮಾರುಕಟ್ಟೆಗೆ ಲಾಂಚ್ ಮಡಿದ ಸ್ಯಾಮ್ ಸಂಗ್.
Samsung Galaxy S24 Ultra: ವಿದೇಶಿ ಕಂಪನಿಯ ಹಲವು ಸ್ಮಾರ್ಟ್ ಫೋನ್ ಗಳಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಭರ್ಜರಿ ಬೇಡಿಕೆ ಇದೆ. ಮೊಬೈಲ್ ಖರೀದಿ ಮಾಡುವಾಗ ಗ್ರಾಹಕರು ಮೊಬೈಲ್ ನ ಲುಕ್ ಜೊತೆಗೆ ಕ್ಯಾಮರಾ ಹಾಗು ಇನ್ನಿತರ ಪಿಚರ್ಸ್ ನೋಡುತ್ತಾರೆ. ಫೋಟೋ ಶೂಟ್ ಗೆ ಈಗ ಮೊಬೈಲ್ ಕ್ಯಾಮರಾ ಗಳನ್ನೇ ಬಳಸುವವರಿದ್ದಾರೆ.
ಇದೀಗ ಮಾರುಕಟ್ಟೆಯಲ್ಲಿ ಉತ್ತಮ ಕ್ಯಾಮರಾ ಹೊಂದಿದ ಸ್ಮಾರ್ಟ್ ಫೋನ್ ಒಂದು ಬಿಡುಗಡೆಯಾಗಲು ಸಿದ್ಧತೆ ನೆಡೆಸುತ್ತಿದೆ. ಹೌದು ಹಲವು ಮೊಬೈಲ್ ಕಂಪನಿಗಳು ಬಹಳ ಉತ್ತಮವಾದ ಕ್ಯಾಮೆರಾ ಇರುವ ಮೊಬೈಲ್ ಗಳನ್ನ ಲಾಂಚ್ ಮಾಡುತ್ತಿದ್ದು ಜನರು ಕ್ಯಾಮೆರಾ ಖರೀದಿ ಮಾಡುವುದನ್ನ ಬಿಟ್ಟು ಉತ್ತಮ ಕ್ಯಾಮೆರಾ ಇರುವ ಮೊಬೈಲ್ ಖರೀದಿ ಮಾಡುವುದು ಸೂಕ್ತ ಎಂದು ಹೇಳಬಹುದು.
Samsung Galaxy
ಸ್ಯಾಮ್ಸಂಗ್ ತನ್ನ ಎಸ್ ಸರಣಿಯಲ್ಲಿ ವರ್ಷಕ್ಕೊಂದು ಸ್ಮಾರ್ಟ್ ಫೋನ್ ಅನ್ನು ಬಿಡುಗಡೆ ಮಾಡುತ್ತಿರುತ್ತದೆ. ಈ ವರ್ಷದ ಆರಂಭದಲ್ಲಿ ಗ್ಯಾಲಕ್ಸಿ S23 ಸರಣಿಯನ್ನು ಬಿಡುಗಡೆ ಮಾಡಿತ್ತು. Samsung Galaxy S23 ಈಗಲೂ ಕೂಡ ಟ್ರೆಂಡಿಂಗ್ ನಲ್ಲಿದೆ. ಮುಂದಿನ ವರ್ಷ ಆರಂಭದಲ್ಲಿ ಸ್ಯಾಮ್ ಸಂಗ್ S24 ಸರಣಿಯನ್ನು ಬಿಡುಗಡೆ ಮಾಡಲಿದೆ ಎಂದು ಮಾಹಿತಿ ಲಭಿಸಿದೆ.
Samsung Galaxy S24 Ultra Smart Phone
Samsung Galaxy S24 Ultra ಸ್ಮಾರ್ಟ್ ಫೋನ್ ಅನ್ನು ಸ್ಯಾಮ್ ಸಂಗ್ ಮುಂದಿನ ವರ್ಷ ಬಿಡುಗಡೆ ಮಾಡಲಿದೆ. ಗ್ಯಾಲಕ್ಸಿ S24 ಅಲ್ಟ್ರಾದ ಕ್ಯಾಮೆರಾ ಫೀಚರ್ಸ್ ಅನ್ನು ಬಹಿರಂಗ ಪಡಿಸಿದ್ದಾರೆ. Galaxy S24 Ultra ದಲ್ಲಿ 200 ಮೆಗಾ ಪಿಕ್ಸೆಲ್ ಕ್ಯಾಮರಾ ಇರಲಿದೆ.
Samsung Galaxy s24 ಸರಣಿಯಲ್ಲಿ ಟೈಟಾನಿಯಂ ಫ್ರೇಮ್ ಗಳನ್ನು ಬಳಸಲಾಗಿದೆ ಎಂದು ಹೇಳಲಾಗಿದೆ. ಇದು ಅಲ್ಯೂಮಿನಿಯಂ ಚಾಸಿಸ್ ಅನ್ನು ಹೊಂದಿವೆ.ಇದಲ್ಲದೆ, ಗ್ಯಾಲಕ್ಸಿ S24 ಆಲ್ಟ್ರಾ ದೀರ್ಘ ಸಮಯ ಬಾಳಕೆ ಬರುವ ಬಲಿಷ್ಠ ಬ್ಯಾಟರಿ ಅವಧಿಯನ್ನು ನೀಡಲು ಹೊಸ EV ಬ್ಯಾಟರಿ ತಂತ್ರಜ್ಞಾನದೊಂದಿಗೆ ಬರುತ್ತದೆ ಎಂಬ ಮಾಹಿತಿ ಕೂಡ ಸೋರಿಕೆ ಆಗಿದೆ. ಇನ್ನು ಈ ಮೊಬೈಲ್ ಬೆಲೆಯ ಅಧಿಕೃತವಾದ ಮಾಹಿತಿ ಇಲ್ಲಿಯತನ್ಕ ತಿಳಿದುಬಂದಿಲ್ಲ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ಮೊಬೈಲ್ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ ಎಂದು ಹೇಳಬಹುದು.