Sanju Basayya: ವೇದಿಕೆಯ ಮೇಲೆ ಗಳಗಳನೆ ಕಣ್ಣೀರು ಹಾಕಿದ ಸಂಜು ಬಸಯ್ಯ, ಅಷ್ಟಕ್ಕೂ ಆಗಿದ್ದೇನು…?
ಜೋಡಿ ನಂ.1 ವೇದಿಕೆಯಲ್ಲಿ ಕಣ್ಣೀರಿಟ್ಟ ಸಂಜು ಬಸಯ್ಯ ಜೋಡಿ ,
Sanju Basayya And Pallavi: ‘ಕಾಮಿಡಿ ಕಿಲಾಡಿಗಳು’ ಶೋ ಮೂಲಕ ಮನೆಮಾತಾದ ಸಂಜು ಬಸಯ್ಯ ಅವರು ಇತ್ತೀಚೆಗಷ್ಟೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಏಳು ವರ್ಷಗಳಿಂದ ಪ್ರೀತಿಸುತ್ತಿದ್ದ ಬಳ್ಳಾರಿ ಮೂಲದ ಪಲ್ಲವಿ ಎಂಬುವವರನ್ನು ಮದುವೆಯಾದರು.
ಆದರೆ ಅವರ ಬೆನ್ನೆ ಹಿಂದೆ ಮಾತಾಡಿಕೊಂಡ ಮಾತುಗಳು ಅವರನ್ನ ಘಾಸಿಗಳಿಸಿದವು. ಸಂಜು ಬಸಯ್ಯ ಕಾಮಿಡಿ ಕಲಾವಿದರಾಗಿದ್ದು, ಇವರ ಪತ್ನಿ ಪಲ್ಲವಿ ನ್ರತ್ಯಗಾರ್ತಿ ಆಗಿದ್ದು ಇಬ್ಬರು ಬಹಳ ವರ್ಷಗಳ ಹಿಂದೆ ಪರಿಚಯ ಇದ್ದವರಾಗಿದ್ದು, ಇತ್ತೀಚಿಗಷ್ಟೇ ವಿವಾಹ ಆಗಿದ್ದಾರೆ.

ಜೋಡಿ ನಂ.1 ವೇದಿಕೆ ನನಗೆ ಸಂಜು ಕೊಟ್ಟ ದೊಡ್ಡ ಗಿಫ್ಟ್ ಎಂದಿದ್ದಾರೆ
ನವ ಜೋಡಿಗಳು ಜೋಡಿ ನಂಬರ್ ಒನ್ ಕಾರ್ಯಕ್ರಮದಲ್ಲಿ ಇಬ್ಬರು ಭಾಗಿಯಾಗುವ ಮೂಲಕ ತಮ್ಮನ್ನು ಆಡಿಕೊಂಡವರಿಗೆ ಸರಿಯಾದ ಉತ್ತರ ಕೊಟ್ಟಿದ್ದಾರೆ. ಇನ್ನು ಪಲ್ಲವಿ ಅವರ ತಾಯಿಯ ಆಸೆಯೂ ಸಹ ಪಲ್ಲವಿಯನ್ನು ದೊಡ್ಡ ವೇದಿಕೆಯಲ್ಲಿ ನೋಡುವುದಾಗಿತ್ತಂತೆ. ಇದನ್ನು ಸಂಜು ಅವರು ನನಗೆ ಗಿಫ್ಟ್ ಆಗಿ ನೀಡಿದ್ದಾರೆ, ನನ್ನ ಮೂಲಕ ನನ್ನ ತಾಯಿಯ ಆಸೆಯನ್ನ ಈಡೇರಿಸಿದ್ದಾರೆ ಎಂದು ಪಲ್ಲವಿ ಹೆಮ್ಮೆಯಿಂದ ಗಂಡನ ಬಗ್ಗೆ ಹೊಗಳಿದ್ದಾರೆ. ಸಂಜು ಹಾಗೂ ಪಲ್ಲವಿ ಇಬ್ಬರು ಪ್ರೀತಿಸಿ ಮದುವೆಯಾದವರು. ಇವರು ಪ್ರೀತಿ ಮಾಡುವಾಗ ಮುಂದೆ ಚೆನ್ನಾಗಿ ಇದ್ದವರೇ ಹಿಂದೆ ಬೇಡ ಎಂದು ಅಂದಿದ್ದರಂತೆ.
ಸಂಜು ಮತ್ತು ಪಲ್ಲವಿ ಪ್ರೀತಿ ಬ್ರೇಕ್ ಅಪ್
ಒಮ್ಮೆ ಕೆಲವರ ಮಾತಿಗೆ ಅಂಜಿದ ಸಂಜು ಪಲ್ಲವಿಗೆ ನೀನು ನನ್ನಿಂದ ಯಾವುದೇ ಸುಖವನ್ನ ಪಡಯಲಾರೆ. ಎಲ್ಲರೂ ನಮ್ಮಿಬ್ಬರನ್ನ ನೋಡಿ ಆಡಿಕೊಳ್ಳುತ್ತಿದ್ದಾರೆ. ದಯವಿಟ್ಟು ನೀನು ನಿನ್ನ ಜೀವನವನ್ನು ರೂಪಿಸಿಕೋ ಎಂದಿದ್ದರಂತೆ. ಆದರೂ ಸಹ ಪಲ್ಲವಿ ಮೂರು ದಿನ ಬ್ರೇಕ್ ಅಪ್ ಮಾಡಿಕೊಂಡಿದ್ದರು. ಮತ್ತೆ ನನಗೆ ನೀನೇ ಬೇಕು ಎಂದು ಬಂದು ಮನೆಯವರೆಲ್ಲರನ್ನು ಒಪ್ಪಿಸಿ ಮದುವೆಯಾಗಿ ಈಗ ಸುಖವಾಗಿ ಬಾಳುತ್ತಾ ಇದ್ದಾರೆ. ಇನ್ನು ವೇದಿಕೆಯ ಮೇಲೆ ಸಂಜು ಬಸಯ್ಯ ತಮ್ಮ ಬೆನ್ನ ಹಿಂದೆ ಆಡಿಕೊಂಡವರ ಬಗ್ಗೆ ಹೇಳುತ್ತಾ ಕಣ್ಣೀರನ್ನು ಹಾಕಿದ್ದಾರೆ.

ಸಂಜು ಮತ್ತು ಪಲ್ಲವಿಯ ಲವ್ ಸ್ಟೋರಿ
ಜೋಡಿ ನಂಬರ್ ಒನ್ ಸೀಸನ್- 2ಗೆ ಸಂಜು ಬಸಯ್ಯ ಹಾಗೂ ಪಲ್ಲವಿ ಇಬ್ಬರು ಸಹ ಬಂದಿದ್ದಾರೆ. ತಮ್ಮ ಲವ್‌ಸ್ಟೋರಿಯನ್ನು ವೇದಿಕೆಯ ಮೇಲೆ ಹೇಳಿಕೊಂಡಿದ್ದಾರೆ. ನಾವಿಬ್ಬರೂ ಪ್ರೀತಿ ಮಾಡುತ್ತಿದ್ದ ಸಂದರ್ಭದಲ್ಲಿ ಅನುಭವಿಸಿದ ಕಷ್ಟ ಅಷ್ಟಿಷ್ಟಲ್ಲ, ನಮ್ಮನ್ನ ನೋಡಿ ಆಡಿಕೊಂಡವರೇ ಹೆಚ್ಚು ಎಂದು ಕಣ್ಣೀರಾಗಿದ್ದಾರೆ. ಸಂಜು ಹೈಟ್ ಮತ್ತು ನನ್ನ ಹೈಟ್ ನೋಡಿ ಆಡಿಕೊಳ್ಳುತ್ತಾ ಇದ್ದರು. ಇವಳು ಅವನನ್ನ ದುಡ್ಡಿಗೋಸ್ಕರ ಮದುವೆಯಾಗುತ್ತಿದ್ದಾಳೆ ಎಂದೆಲ್ಲ ಅನ್ನುತ್ತಿದ್ದರು, ಎಂದು ಪಲ್ಲವಿ ಭಾವುಕರಾಗಿದ್ದಾರೆ.
ಪಲ್ಲವಿ ಸಿಗುತ್ತಾಳಾ ಇಲ್ಲವೋ ಅನ್ನೋ ಭಯ ಇತ್ತು
ಇನ್ನು ಸಂಜು ಬಸಯ್ಯ ತನ್ನ ಮಡದಿಯ ಬಗ್ಗೆ ಮೆಚ್ಚುಗೆಯ ಮಾತನ್ನು ಆಡಿದ್ದಾರೆ. ಎಷ್ಟೋ ಸಲ ನಾನೇ ನಿನ್ನ ಹೈಟ್‌ಗೆ ತಕ್ಕ ಹುಡುಗನನ್ನು ಆರಿಸಿಕೋ ಎಂದೆಲ್ಲ ಹೇಳಿದ್ದೆ. ಆದರೆ ಇವಳು ಕೇಳಲಿಲ್ಲ, ಇನ್ನೂ ಕೆಲವರು ನಿಮ್ಮದು ಪ್ರೀತಿಯ ನಾಟಕ ಅಷ್ಟೇ ಎಂದು ಹೇಳಿದ್ದರು. ಇವಳು ನನಗೆ ಸಿಗುತ್ತಾಳೋ ಇಲ್ಲವೋ ಎನ್ನುವ ಭಯ ಇತ್ತು. ಹೇಗೋ ಇಬ್ಬರು ಮೆಚ್ಚಿ ಮದುವೆಯಾಗಿದ್ದೇವೆ ಎಂದು ಸಂಜು ಕಣ್ಣೀರು ಹಾಕಿದ್ದಾರೆ. ಇಂದು ನಾನೇನಾದರೂ ಸಾಧನೆ ಮಾಡಿದ್ದೇನೆ ಎಂದರೆ ಅದಕ್ಕೆ ನನ್ನ ತಂದೆ ಹಾಗೂ ಪಲ್ಲವಿಯೇ ಕಾರಣ ಎಂದು ಕಣ್ಣಲ್ಲಿ ನೀರು ತುಂಬಿಕೊಂಡರು.

ಸಂಜುಗೆ ವಿಶ್ ಮಾಡಿದ ಪ್ರೇಕ್ಷಕರು
ವೇದಿಕೆಯ ಮೇಲೆ ಸಂಜು ಬಸಯ್ಯ ಭಾವುಕರಾಗಿ ಮಾತನಾಡಿದ್ದಾರೆ. ಪ್ರೇಕ್ಷಕರು ಪಲ್ಲವಿ ಹಾಗೂ ಸಂಜು ಬಸಯ್ಯ ಜೋಡಿಯೇ ಬೆಸ್ಟ್ ಎಂದು ಹೇಳಿದ್ದಾರೆ. ಇದರ ಜೊತೆಗೆ ಜೋಡಿಗೆ ಶುಭ ಹಾರೈಸಿದ್ದಾರೆ. ನೂರು ಕಾಲ ಹೀಗೆ ಸಂತೋಷದಿಂದ ಬಾಳಿ. ನಿಮ್ಮನ್ನ ಆಡಿಕೊಂಡವರಿಗೆ ತಕ್ಕನಾದ ಉತ್ತರ ನೀಡಿ ಎಂದೆಲ್ಲ ಮೆಚ್ಚುಗೆಯ ಮಾತುಗಳನ್ನ ಆಡಿದ್ದಾರೆ.