Sapta Saagaradaache Ello: ಪ್ರೇಮಿಗಳ ಕಣ್ಣಲ್ಲಿ ನೀರು ಬರುವಂತೆ ಮಾಡಿ ಬಾಕ್ಸ್ ಆಫೀಸ್ ಧೂಳಿಪಟ ಮಾಡಿದ ಸಪ್ತ ಸಾಗರದಾಚೆ ಎಲ್ಲೋ, ಭರ್ಜರಿ ಕಲೆಕ್ಷನ್.
ಸಪ್ತ ಸಾಗರದಾಚೆ ಎಲ್ಲೋ ಚಿತ್ರ ರಾಜ್ಯದಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ.
Sapta Saagaradaache Ello Box Office Collection: ಕನ್ನಡ ಚಿತ್ರರಂಗದಲ್ಲಿ ರಕ್ಷಿತ್ ಶೆಟ್ಟಿ (Rakshit Shetty) ಯವರು ಅನೇಕ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಅವರ ಸಿನಿಮಾಗಳು ಹಾಗೂ ಅವರ ಸಿನಿಮಾ ಮೇಲಿನ ಪ್ರೀತಿ ಅವರನ್ನು ಉತ್ತುಂಗಕ್ಕೆ ಏರಿಸಿದೆ. ಅಷ್ಟೇ ಅಲ್ಲದೆ ಅಭಿಮಾನಿಗಳ ಬಳಗವನ್ನೇ ಹೊಂದಿದ್ದಾರೆ.
ಚಾರ್ಲಿ ಸಿನಿಮಾದ ನಂತರ ರಕ್ಷಿತ್ ಶೆಟ್ಟಿ ಅವರ ಬಹು ನಿರೀಕ್ಷಿತ ಚಿತ್ರ ಸಪ್ತ ಸಾಗರದಾಚೆ ಎಲ್ಲೊ ಮೊನ್ನೆ ಅಂದರೆ ಸೆಪ್ಟೆಂಬರ್ 1 ರಂದು ರಿಲೀಸ್ ಆಗಿತ್ತು. ಈ ಚಿತ್ರಕ್ಕೆ ಅಭಿಮಾನಿಗಳಿಂದ ಉತ್ತಮ ರೆಸ್ಪೋನ್ಸ್ ಜೊತೆಗೆ ದಿನದಿಂದ ದಿನಕ್ಕೆ ಪ್ರೇಕ್ಷಕರ ಸಂಖ್ಯೆ ಹೆಚ್ಚಾಗುತ್ತಿದೆ.
ಸಪ್ತ ಸಾಗರದಾಚೆ ಎಲ್ಲೊ ಸಿನಿಮಾ
ಈ ಸಿನಿಮಾ ಒಂದು ಸುಂದರ ಪ್ರೇಮ ಕಥೆ ಆಗಿದ್ದು, ಈಗಾಗಲೇ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ರಿಲೀಸ್ಗೆ ಒಂದು ದಿನ ಮುನ್ನ ಕನ್ನಡ ಚಿತ್ರರಂಗದ ನಟರಾದ ರಿಷಬ್ ಶೆಟ್ಟಿ, ರಾಜ್ ಬಿ ಶೆಟ್ಟಿ, ರಿಷಿ, ನಿರ್ದೇಶಕರಾದ ಸಿಂಪಲ್ ಸುನಿ, ಅನುಪ್ ಭಂಡಾರಿ ಸೇರಿದಂತೆ ಹಲವು ಮಂದಿ ಸಿನಿಮಾವನ್ನು ನೋಡಿ ಪ್ರಕ್ರಿಯೆ ನೀಡಿದ್ದಾರೆ.
ಕನ್ನಡ ಚಿತ್ರರಂಗಕ್ಕೆ ಇದೊಂದು ಉತ್ತಮ್ಮ ಪ್ರಯತ್ನ ಅನ್ನೋದನ್ನು ಇವರೆಲ್ಲೂ ಒಪ್ಪಿದ್ದಾರೆ ಎನ್ನಲಾಗಿದೆ. ರಿಷಬ್ ಶೆಟ್ಟಿಯವರು ರಕ್ಷಿತ್ ಶೆಟ್ಟಿಯ ಬೆಸ್ಟ್ ಸಿನಿಮಾ ಇದು ಎಂದು ಹೇಳಿದ್ಧಾರೆ. ಪದಗಳಲ್ಲಿ ಈ ಸಿನಿಮಾವನ್ನು ವರ್ಣಿಸುವುದು ತುಂಬಾನೇ ಕಷ್ಟ. ಕನ್ನಡ ಚಿತ್ರರಂಗದ ಒಂದು ಅಪ್ಪಟ ಸಿನಿಮಾ ಅಂತ ಹೇಳಬಹುದು ಎಂದಿದ್ಧಾರೆ.
ಬಾಕ್ಸ್ ಆಫೀಸ್ ಧೂಳಿಪಟ ಮಾಡಿದ ಸಪ್ತ ಸಾಗರದಾಚೆ ಎಲ್ಲೋ
ಈ ಸಪ್ತ ಸಾಗರದಾಚೆ ಜೋಡಿ ಗೋಧಿ ಬಣ್ಣ ಸಾಧಾರಣ ಮೈಕಟ್ಟು ಸಿನಿಮಾ ನಂತರ ಅಂದರೆ 7 ವರ್ಷಗಳ ಬಳಿಕ ಮತ್ತೆ ಸಕತ್ ಲವ್ ಸ್ಟೋರಿ ಕಥೆಯ ಮೂಲಕ ತೆರೆ ಮೇಲೆ ಬಂದಿದೆ. ಈ ಸಿನಿಮಾ ಆರಂಭದಿಂದಲೂ ಸಾಕಷ್ಟು ನಿರೀಕ್ಷೆ ಹೆಚ್ಚಿಸಿದೆ. ಹಾಗೆ ಬಿಡುಗಡೆ ಬಳಿಕವೂ ಅದನ್ನು ಉಳಿಸಿಕೊಂಡಿದೆ. ಇದೀಗ ನಾವು ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ಕಲೆಕ್ಷನ್ ಎಷ್ಟಾಗಿದೆ ಎಂದು ತಿಳಿಯೋಣ.
ಈ ವಾರ ಬರಿ ಎರಡು ಸಿನಿಮಾಗಳು ರಿಲೀಸ್ ಆಗಿರುದರಿಂದ ಹೆಚ್ಚು ಪೈಪೋಟಿ ಇರಲಿಲ್ಲ. ವಿಜಯ್ ದೇವರಕೊಂಡ ಹಾಗೂ ಸಮಂತಾ ನಟನೆಯ ಖುಷಿ ಚಿತ್ರ ಕನ್ನಡದಲ್ಲಿ ಡಬ್ ಆಗಿ ಬಿಡುಗಡೆಯಾಗಿದೆ. ಆದರೆ ಇದರ ಎದುರಾಗಿ ಬಿಡುಗಡೆಯಾದ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಸಕತ್ ರೆಸ್ಪಾನ್ಸ್ ಪಡೆದುಕೊಂಡು 10 ರಿಂದ 120ಕೋಟಿ ಗಳಿಕೆ ಮಾಡಿದೆ ಎಂದು ಬಾಕ್ಸ್ ಆಫೀಸ್ ಪಂಡಿತರು ತಿಳಿಸಿದ್ದಾರೆ.