Sasya Shyamala: ರಾಜ್ಯದ ಎಲ್ಲಾ ಸರ್ಕಾರೀ ಶಾಲಾ ಮಕ್ಕಳಿಗೆ ಹೊಸ ನಿಯಮ ಹೊರಡಿಸಿದ ಸರ್ಕಾರ, ಹೊಸ ಅನುಷ್ಠಾನ.
ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಹೊಸ ನಿಯಮ ಕಡ್ಡಾಯ .
Sasya Shyamala Program: ಕರ್ನಾಟಕ ರಾಜ್ಯದ CM ಸಿದ್ದರಾಮಯ್ಯ ಸರ್ಕಾರವು ದಿನಕ್ಕೊಂದು ಯೋಜನೆ ಹಾಗು ದಿನಕ್ಕೊಂದು ಹೊಸ ಕಾರ್ಯಕ್ರಮವನ್ನು ಜಾರಿ ತರುತ್ತಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿನ ಕೆಲವು ಬದಲಾವಣೆಗಳು ಜನ ಸಾಮಾನ್ಯರಿಗೆ ಅಚ್ಚರಿ ಹಾಗು ಸಂತೋಷವನ್ನು ಉಂಟು ಮಾಡಿದೆ.
ಈಗ ರಾಜ್ಯ ಸರಕಾರ ಹೊರಡಿಸಿದ ಯೋಜನೆ ಎಂದರೆ ರಾಜ್ಯದ ಎಲ್ಲಾ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ 2023-24ನೇ ಸಾಲಿನ ಅಯವ್ಯಯದಲ್ಲಿ ಘೋಷಿತ ಸಸ್ಯ ಶ್ಯಾಮಲ ಕಾರ್ಯಕ್ರಮವನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಮಾರ್ಗಸೂಚಿಯನ್ನು ಪ್ರಕಟಿಸಿದೆ.
ಲಕ್ಷ ಸಸಿಗಳನ್ನು ನೆಡುವ ವಿನೂತನ ಕಾರ್ಯಕ್ರಮ
2023-24ನೇ ಸಾಲಿನ ಬಜೆಟ್ ನಲ್ಲಿ ಶಿಕ್ಷಣ ಇಲಾಖೆ ಮತ್ತು ಅರಣ್ಯ ಇಲಾಖೆಯ ಸಹಭಾಗಿತ್ವದಲ್ಲಿ ಸ್ಥಳಾವಕಾಶವುಳ್ಳ ಸರ್ಕಾರಿ ಶಾಲೆಗಳ ಸುತ್ತಮುತ್ತ ಒಂದು ವರ್ಷದ ಕಾಲಾವಧಿಯಲ್ಲಿ 50 ಲಕ್ಷ ಸಸಿಗಳನ್ನು ನೆಡುವ ವಿನೂತನ ಸಸ್ಯ ಶ್ಯಾಮಲ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾವುದು ಎಂದು ಸಿಎಂ ಘೋಷಣೆ ಮಾಡಿರುತ್ತಾರೆ.
ಯಾವುದೇ ಶಾಲೆಗೆ ಸ್ಥಳಾವಕಾಶದ ಲಭ್ಯತೆಯನ್ನು ಆಧರಿಸಿ ಗರಿಷ್ಠ 50 ಸಸಿಗಳನ್ನು ಮಾತ್ರ ಒದಗಿಸಲಾಗುವುದು. ಒಂದು ವೇಳೆ ಶಾಲೆಯಲ್ಲಿ ಹೆಚ್ಚಿನ ಸ್ಥಳಾವಕಾಶವಿದ್ದು, ಮಕ್ಕಳ ಸಂಖ್ಯೆ ಕಡಿಮೆ ಇದ್ದರೆ ಕನಿಷ್ಠ ಒಂದು ಮಗುವಿಗೆ ಒಂದು ಸಸಿ ನೆಡಬಹುದು. ಒಂದು ವೇಳೆ ಶಾಲೆಯಲ್ಲಿ ಸ್ಥಳಾವಕಾಶ ಕಡಿಮೆ ಇದ್ದು, ಮಕ್ಕಳ ಸಂಖ್ಯೆ ಹೆಚ್ಚಿದ್ದಲ್ಲಿ ಒಂದು ಸಸಿ ನೆಡಲು 2-3 ಮಕ್ಕಳಿಗೆ ವಹಿಸಬಹುದು ಎಂದು ಹೇಳಿದೆ.
ಮಕ್ಕಳ ಸುರಕ್ಷೆತೆಗೆ ಆದ್ಯತೆ
ಈ ಕಾರ್ಯಕ್ರಮವನ್ನು ಅನುಷ್ಠಾನ ಮಾಡಲು ಒಂದೇ ದಿನ ಗುಂಡಿಗಳನ್ನು ತೋಡಲು ಸಾಧ್ಯವಾಗದೇ ಇದ್ದಲ್ಲಿ ಹಲವು ದಿನಗಳ ಕಾಲವ್ಯಾಪ್ತಿಯಲ್ಲಿ ಪ್ರತಿದಿನ ಸ್ವಲ್ಪ ಸ್ವಲ್ಪ ಪ್ರಮಾಣದಲ್ಲಿ ನಿಗದಿತ ಅಳತೆಯ ಮುಖ್ಯ ಶಿಕ್ಷಕರು/ಪ್ರಾಂಶುಪಾಲರು ಗುಂಡಿಗಳನ್ನು ತೊಡಲು ಕ್ರಮವಹಿಸುವುದು ಹಾಗೂ ಕಾರ್ಯಕ್ರಮದ ಅನುಷ್ಠಾನದಲ್ಲಿ ಮಕ್ಕಳ ಸುರಕ್ಷತೆಯ ಕುರಿತು ಕಾಳಜಿವಹಿಸುವುದು.
ಹಿರಿಯ ಪ್ರಾಥಮಿಕ /ಪ್ರೌಢ ಶಾಲೆ/ಪದವಿ ಪೂರ್ವ ಕಾಲೇಜುಗಳಲ್ಲಿ “ಸಸ್ಯ ಶ್ಯಾಮಲ” ಕಾರ್ಯಕ್ರಮವನ್ನು ಅನುಷ್ಠಾನ ಮಾಡಲು ಗುಂಡಿಗಳನ್ನು ತೋಡಲು 6-12 ನೇ ತರಗತಿ ಮಕ್ಕಳಿಗೆ ಶ್ರಮದಾನದ ಮೂಲಕ ಕೈಗೊಳ್ಳಲು ವಹಿಸಬಹುದು. ಜೊತೆಗೆ ಮುಖ್ಯ ಶಿಕ್ಷಕರು, ಪೋಷಕರು, ಎಸ್.ಡಿ.ಎಂ.ಸಿ ಸದಸ್ಯರು/ಸ್ಥಳೀಯ ಸಂಸ್ಥೆ ಜನಪತ್ರಿನಿಧಿಗಳು, ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯಿತಿಯ ಗ್ರಾಮ ಅರಣ್ಯ ಸಮಿತಿಯವರ ಸಹಕಾರ ಪಡೆಯುವುದು.