Sathya Serial: ಸತ್ಯ ಧಾರಾವಾಹಿಯಲ್ಲಿ ಇನ್ನೊಂದು ಬಿಗ್ ಟ್ವಿಸ್ಟ್, ಗುಟ್ಟು ರಟ್ಟು ಮಾಡಿದ ಕೀರ್ತನ.
ಕೀರ್ತನಾಳ ಸಂಚಿನಿಂದ ಸತ್ಯ ಬದುಕಿನಲ್ಲಿ ಬಿಕ್ಕಟ್ಟು, ಸತ್ಯ ಸೀತಾಳ ಗುಟ್ಟ್ಟನ್ನು ರಟ್ಟು ಮಾಡಿದ ಕೀರ್ತಿನಾ.
Sathya Serial Latest Episode: ಇತ್ತೀಚಿನ ದಿನಗಳಲ್ಲಿ ಸತ್ಯ ಧಾರಾವಾಹಿ (Sathya Serial) ಇನ್ನಷ್ಟು ಕುತೂಹಲಕಾರಿಯಾಗಿದೆ ಅಷ್ಟೇ ಅಲ್ಲದೆ ನೋಡುಗರಿಗೂ ಖುಷಿ ಅನಿಸುತ್ತಿದೆ. ಯಾಕೆಂದರೆ ಸತ್ಯ ಹಾಗು ಸೀತಾ ಅತ್ತೆ ಸೊಸೆ ಆಗಿರದೇ ಅಮ್ಮ ಮಗಳಾಗಿ ಹೊಂದಿರೊಳ್ಳುತ್ತಿದ್ದಾರೆ.
ಆರಂಭದಲ್ಲಿ ಸೀತಾಳಿಗೆ ಸತ್ಯಳನ್ನು ಕಂಡರೆ ಇಷ್ಟ ಆಗುತ್ತಿರಲಿಲ್ಲ, ಅವಳಿಗೆ ಯಾವಾಗಲು ಬೈಯೋದು, ಹೀಯಾಳಿಸೋದು ಮಾಡುತ್ತಿದ್ದರು. ಆದರೆ ಈಗ ಸತ್ಯಳ ಒಳ್ಳೆ ಗುಣಕ್ಕೆ ಸೀತಾ ಮಾರುಹೋಗಿದ್ದಾಳೆ, ಸತ್ಯಳ ಮನಸ್ಸನ್ನು ಅರಿತ ಸೀತಾ ಸತ್ಯಳನ್ನು ಒಂದು ಕ್ಷಣನು ಬಿಟ್ಟಿರಲು ಬಯಸುತ್ತಿಲ್ಲ.

ಸತ್ಯ ಸೀತಾಳಿಗೆ ಪ್ರೀತಿಯಿಂದ ಪಾನಿಪುರಿ ತಿನ್ನಿಸುತ್ತಾಳೆ
ಸತ್ಯ, ಸೀತಾ ಹಾಗು ಕಾರ್ತಿಕ್ ಹೊರಗಡೆ ಪಾನಿಪುರಿ ತಿನ್ನಲು ಬಂದಿರುತ್ತಾರೆ. ಖಾರ ಖಾರವಾಗಿ ಪಾನಿಪುರಿ ಕೊಡುವಂತೆ ಅಂಗಡಿ ಯವನ ಬಳಿ ಸತ್ಯ ಹೇಳುತ್ತಾಳೆ. ಪಾನಿ ಪೂರಿ ಕೊಟ್ಟ ತಕ್ಷಣ ಸತ್ಯ ತಿನ್ನಲು ಪ್ರಾರಂಭಿಸುತ್ತಾಳೆ. ಆದರೆ ಕಾರ್ತಿಕ್ ಹಾಗೂ ಸೀತಾಳಿಗೆ ಇದೆಲ್ಲ ಹೊಸತಾಗಿರುವುದರಿಂದ ಮುಖ ಮುಖ ನೋಡಿಕೊಳ್ಳೂತ್ತಾರೆ. ಆಗ ಸತ್ಯ ಪಾನೀಪುರಿಯನ್ನು ಸೀತಾಳಿಗೆ ತಿನ್ನಿಸಿ ಖುಷಿ ಪಡುತ್ತಾಳೆ ಹಾಗೆಯೆ ಖುಷಿಯಿಂದ ಸೀತಾ ಸತ್ಯ ತಿನ್ನಿಸಿದ ಪಾನಿಪುರಿ ತಿನ್ನುತ್ತಾಳೆ. ಆಗ ಕಾರ್ತಿಕ ಅತ್ತೆ ಸೊಸೆ ಮಧ್ಯೆ ನಾನು ಬಡವನಾದೆ ಅಂದುಕೊಳ್ಳುತ್ತಾನೆ.
ಸತ್ಯಳನ್ನು ಮನೆಯಿಂದ ಹೊರ ಹಾಕಲು ಕೀರ್ತನಾಳ ಹೊಸ ಪ್ಲಾನ್
ಸತ್ಯಳನ್ನು ಹೇಗಾದರೂ ಮಾಡಿ ಈ ಮನೆಯಿಂದ ಹೊರ ಹಾಕಬೇಕು ಎಂದು ಕೀರ್ತನ ಆಲೋಚನೆ ಮಾಡುತ್ತಿರುವಾಗ ಸತ್ಯ ಹಾಗು ಸೀತಾಳ ನಡುವೆ ಮಾಡಿಕೊಂಡ ಅಗ್ರಿಮೆಂಟ್ ವಿಚಾರ ನೆನಪಿಗೆ ಬರುತ್ತದೆ, ಆಗ ಇದೆ ಸರಿಯಾದ ಸಮಯವೆಂದು ಸೀತಾ ರೂಮ್ ನಲ್ಲಿದ್ದ ಅಗ್ರಿಮೆಂಟ್ ಅನ್ನು ಮನೆಯವರಿಗೆ ತೋರಿಸಲು ಎಲ್ಲರನ್ನು ಹಾಲ್ ಗೆ ಕರೆಯುತ್ತಾಳೆ.
ರಾಯರು, ಲಕ್ಷ್ಮಣ್, ಊರ್ಮಿಳಾ ಹಾಗು ರೀತು ಎಲ್ಲಾ ಬರುತ್ತಾರೆ, ಯಾಕೆ ಕೀರ್ತನ ಏನಾಯಿತು ಎಂದು ರಾಯರು ಕೇಳುತ್ತಾರೆ. ಆಗ ಕೀರ್ತನ ಅಮ್ಮ ಹಾಗು ಸತ್ಯ ನಡುವೆ ಒಂದು ಅಗ್ರಿಮೆಂಟ್ ಆಗಿದೆ ಹಾಗು ಆ ಅಗ್ರಿಮೆಂಟ್ ನ ಸಮಯವೂ ಮುಗಿದಿದೆ ಎನ್ನುತ್ತಾಳೆ ಆಗ ರಾಯರು ಏನ್ ಅಗ್ರಿಮೆಂಟ್ ಎಂದು ಕೇಳಿದಾಗ ಲಕ್ಷ್ಮಣ್ ಅಗ್ರಿಮೆಂಟ್ ತೆಗೆದು ನೋಡುತ್ತಾನೆ. ಆರಂಭದಲ್ಲಿ ಕೀರ್ತಿನಾ ಮಾತು ನಂಬದ ಮನೆಯವರು ಅಗ್ರಿಮೆಂಟ್ ನೋಡಿ ಶಾಕ್ ಆಗುತ್ತಾರೆ.

ಸತ್ಯಳನ್ನು ಮನೆಯಿಂದ ಹೊರಹಾಕುತ್ತಾರೆ ಎಂಬ ಖುಷಿಯಲ್ಲಿ ದಿವ್ಯ
ದಿವ್ಯ ಮನೆಯವರ ಬಳಿ ಇನ್ನು ಸ್ವಲ್ಪ ಹೊತ್ತಿನಲ್ಲೇ ಸತ್ಯ ಳನ್ನು ಕೋಟೆ ಮನೆಯಿಂದ ಹೊರ ಹಾಕುತ್ತಾರೆ ಎಂದು ಹೇಳುತ್ತಾಳೆ ಅದನ್ನು ಕೇಳಿದ ಗಿರಿಜಮ್ಮ ಹಾಗು ಜಾನಕಿ ದಿವ್ಯಾಳಿಗೆ ಬೈಯುತ್ತಾರೆ. ಸ್ವಂತ ಅಕ್ಕನಾಗಿ ತಂಗಿಗೆ ಹೀಗೆಲ್ಲ ಮಾಡುತ್ತಿದೀಯಲ್ಲ ಎನ್ನುತ್ತಾರೆ. ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ದಿವ್ಯ ಕೀರ್ತನ ಮಾಡಿದ ವಿಡಿಯೋ ಕಾಲ ಅನ್ನು ರಿಸೀವ್ ಮಾಡಿ ಮನೆಯವರಿಗೆಲ್ಲ ಅಲ್ಲಿ ಏನು ನೆಡೆಯುತ್ತಿದೆ ಅನ್ನುವುದನ್ನು ತೋರಿಸುತ್ತಾಳೆ.
ಅಗ್ರಿಮೆಂಟ್ ನೋಡಿ ಸೀತಾ ಮೇಲೆ ಕೋಪ ಮಾಡಿಕೊಂಡ ರಾಯರು
ಕಾರ್ತಿಕ್ ಹಾಗು ಸತ್ಯ ಮದುವೆ ಆದ ಹೊಸತರಲ್ಲಿ, ಅತ್ತೆ ಸೊಸೆ ನಡುವೆ 06 ತಿಂಗಳ ಮಟ್ಟಿಗೆ ಅಗ್ರಿಮೆಂಟ್ ಆಗಿರುವುದನ್ನು ತಿಳಿದ ರಾಯರು ಸೀತಾ ಇಷ್ಟೆಲ್ಲ ಮಾಡಿದ್ದಾಳೆ ಎಂದು ಬೇಸರ ವ್ಯಕ್ತ ಪಡಿಸುತ್ತಾರೆ. ಅಷ್ಟರಲ್ಲೇ ಹೊರಗಡೆ ಹೋಗಿದ್ದ ಸತ್ಯ ಕಾರ್ತಿಕ್, ಸೀತಾ ಮನೆಗೆ ಬರುತ್ತಾರೆ. ಆ ಸಮಯದಲ್ಲಿ ಕೋಪದಲ್ಲಿದ್ದ ರಾಯರು ಸೀತಾಳಿಗೆ ಬೈಯಲು ಆರಂಭಿಸುತ್ತಾರೆ. ಆದರೆ ಸೀತಾಗೆ ಯಾಕೆ, ಏನು ತಿಳಿಯದೆ ಆಶ್ಚರ್ಯ ವಾಗಿ ನಿಂತಿದ್ದಾರೆ. ಮುಂದಿನ ಸಂಚಿಕೆ ಬಹಳ ಕುತೂಹಲಕಾರಿಯಾಗಿದ್ದು, ಸತ್ಯಳನ್ನು ಕೋಟೆ ಮನೆಯಿಂದ ಹಾಕುತ್ತಾರೆ ಎಂದು ಕಾದು ನೋಡಬೇಕಿದೆ.