Deposit Limit: ಸೇವಿಂಗ್ ಅಕೌಂಟ್ ನಲ್ಲಿ ಇದಕ್ಕಿಂತ ಹೆಚ್ಚಿನ ಹಣವನ್ನ ಇಡುವಂತಿಲ್ಲ, RBI ನಿಯಮ.
ಇದೀಗ ನೀವು ಉಳಿತಾಯ ಖಾತೆಯಲ್ಲಿ ಎಷ್ಟು ಹಣವನ್ನು ಠೇವಣಿ ಮಾಡಬಹುದು.
Savings Account Cash Deposit Limit: ಬ್ಯಾಂಕ್ ಗಳಲ್ಲಿ ಅನೇಕ ರೀತಿಯ ಖಾತೆಗಳಿರುತ್ತದೆ. ಅದರಲ್ಲಿ ಉಳಿತಾಯ ಖಾತೆ, ಜಂಟಿ ಖಾತೆ, ಸಂಬಳ ಖಾತೆ, ಚಾಲ್ತಿ ಖಾತೆ ಎಂಬ ಇನ್ನು ಅನೇಕ ವಿಧಗಳಿರುತ್ತದೆ. ಆದರೆ ಗ್ರಾಹಕರು ಹೆಚ್ಚಾಗಿ ಉಳಿತಾಯ ಖಾತೆಯನ್ನು ಆಯ್ಕೆ ಮಾಡುತ್ತಾರೆ. ತಮ್ಮ ಬಳಿ ಇರುವ ಹಣವನ್ನು ಉಳಿತಾಯ ಮಾಡಿಕೊಳ್ಳುವ ಸಲುವಾಗಿ ಉಳಿತಾಯ ಖಾತೆಯನ್ನೇ ಆರಿಸಿಕೊಳ್ಳುತ್ತಾರೆ.
ಇದು ಪ್ರಾಥಮಿಕ ಖಾತೆಯಾಗಿದೆ ಮತ್ತು ಇದರಲ್ಲಿ ಹೆಚ್ಚಿನ ಬಡ್ಡಿ ದೊರೆಯುತ್ತದೆ. ಈ ಖಾತೆಯನ್ನು ನಿರ್ವಹಿಸಲು ಕನಿಷ್ಠ ಮೊತ್ತ ಚಾಲ್ತಿ ಖಾತೆಗಿಂತ ಕಡಿಮೆ ಇದೆ. ಹಾಗಾಗಿ ಹೆಚ್ಚಿನ ಜನರು ಉಳಿತಾಯ ಖಾತೆ (Savings Account)ಯನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಇದೀಗ ನೀವು ಉಳಿತಾಯ ಖಾತೆಯಲ್ಲಿ ಎಷ್ಟು ಹಣವನ್ನು ಠೇವಣಿ ಮಾಡಬಹುದು ಎನ್ನುವ ಬಗ್ಗೆ ಮಾಹಿತಿ ತಿಳಿದುಕೊಳ್ಳಿ.

ಉಳಿತಾಯ ಖಾತೆ
ಇತ್ತೀಚಿನ ದಿನಗಳಲ್ಲಿ ಬಹುತೇಕ ಜನರು ಉಳಿತಾಯ ಖಾತೆಯನ್ನೇ ಹೊಂದಿರುತ್ತಾರೆ. ಸೇವಿಂಗ್ ಅಕೌಂಟ್ ಬಳಕೆದಾರರು ಬ್ಯಾಂಕಿಂಗ್ ಮತ್ತು ಹಣಕಾಸಿಗೆ ಸಂಬಂಧಿಸಿದಂತೆ ಆದಾಯ ತೆರಿಗೆ ನಿಯಮಗಳು ಮತ್ತು ಬ್ಯಾಂಕ್ ಖಾತೆಗಳಲ್ಲಿ ಠೇವಣಿ ಮಾಡಿದ ಹಣದ ಮಿತಿಗಳ ಬಗ್ಗೆ ಸರಿಯಾದ ಮಾಹಿತಿಯನ್ನು ತಿಳಿದಿಕೊಳ್ಳುದು ಉತ್ತಮ. ಏಕೆಂದರೆ ನಿಮ್ಮ ಉಳಿತಾಯ ಖಾತೆಯಲ್ಲಿ ಇರಿಸಲಾದ ಮೊತ್ತವು ನಿರ್ದಿಷ್ಟ ಮಿತಿಯನ್ನು ಮೀರಿದರೆ ಆದಾಯ ತೆರಿಗೆ ವಿನಾಯಿತಿ ಅನ್ವಹಿಸುತ್ತದೆ.
ಉಳಿತಾಯ ಖಾತೆಯ ನಗದು ಠೇವಣಿ ಮಿತಿ
ಉಳಿತಾಯ ಖಾತೆಯ ನಗದು ಠೇವಣಿ ಮಿತಿಯು ತೆರಿಗೆಯನ್ನು ಪಾವತಿಸದೆ ಅವಧಿಯಲ್ಲಿ ಖಾತೆಗೆ ಠೇವಣಿ ಮಾಡಬಹುದಾದ ಗರಿಷ್ಠ ಮೊತ್ತವಾಗಿದೆ. ಹಣ ವರ್ಗಾವಣೆ, ತೆರಿಗೆ ವಂಚನೆ ಚಟುವಟಿಕೆಗಳ ಸಾಧ್ಯತೆಯನ್ನು ಪರಿಶೀಲಿಸುವುದು ಇದರ ಹಿಂದಿನ ಕಾರಣ. ನಿಮ್ಮ ಉಳಿತಾಯ ಖಾತೆಯಲ್ಲಿ ನೀವು ದಿನಕ್ಕೆ ಗರಿಷ್ಠ 1 ಲಕ್ಷ ರೂಪಾಯಿ ಹಾಕಬಹುದು.

ಕೆಲವೊಮ್ಮೆ ಇದರ ಮಿತಿಯನ್ನು 2 .5 ಲಕ್ಷ ಕ್ಕಿಂತ ಹೆಚ್ಚಿಸಬಹುದು. ಒಂದು ವರ್ಷದಲ್ಲಿ ನಿಮ್ಮ ಉಳಿತಾಯ ಖಾತೆಯಲ್ಲಿ ಗರಿಷ್ಠ 10 ಲಕ್ಷ ರೂಪಾಯಿ ಇರಬಹುದು. ಉಳಿತಾಯ ಖಾತೆಯಲ್ಲಿ ನಗದು ಮೊತ್ತ 10 ಲಕ್ಷ ರೂಪಾಯಿಗಿಂತ ಕಡಿಮೆ ಇದ್ದರೆ ನೀವು ಯಾವುದೇ ರೀತಿಯ ತೆರಿಗೆಯನ್ನು ಪಾವತಿಸುವ ಅಗತ್ಯಇಲ್ಲ.
ಯಾವುದೇ ಬ್ಯಾಂಕ್ ಹಣಕಾಸು ವರ್ಷದಲ್ಲಿ 10 ಲಕ್ಷ ಕ್ಕಿಂತ ಹೆಚ್ಚಿನ ನಗದು ಠೇವಣಿಯನ್ನು ವರದಿ ಮಾಡುವುದು ಕಡ್ಡಾಯವಾಗಿದೆ. ಉಳಿತಾಯ ಖಾತೆಯಲ್ಲಿನ ಹಣಕ್ಕೆ ನೇರ ತೆರಿಗೆ ವಿಧಿಸುದಿಲ್ಲ. ಬ್ಯಾಂಕ್ ಗ್ರಾಹಕರ ಠೇವಣಿ ಮೇಲೆ ಸ್ಥಿರ ಬಡ್ಡಿಯನ್ನು ನೀಡುತ್ತದೆ. ನೀವು ಬ್ಯಾಂಕ್ ನಿಂದ ಪಡೆಯುವ ಬಡ್ಡಿಯು ತೆರಿಗೆಗೆ ಸೇರುತ್ತದೆ, ಏಕೆಂದರೆ ಅದು ಐಟಿಆರ್ ರೂಪದಲ್ಲಿ ಲಾಭದ ಅಡಿಯಲ್ಲಿ ಬರುತ್ತದೆ.